ನೇಣು ಬಿಗಿದು ಹೆಂಡತಿ ಕೊಲೆ ಮಾಡಿದ ಗಂಡ| ಹುಬ್ಬಳ್ಳಿಯ ಹನುಮಂತ ನಗರದಲ್ಲಿ ನಡೆದ ಘಟನೆ| ಆರೋಪಿಯನ್ನ ವಶಕ್ಕೆ ಪಡೆದ ಪೊಲೀಸರು| ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು|
ಹುಬ್ಬಳ್ಳಿ(ಮಾ.15): ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡ ತನ್ನ ಪತ್ನಿಯನ್ನೇ ನೇಣು ಬಿಗಿದು ಕೊಲೆ ಮಾಡಿದ ಘಟನೆ ಹನುಮಂತ ನಗರದಲ್ಲಿ ಇಂದು(ಸೋಮವಾರ) ನಡೆದಿದೆ. ಪಶ್ಚಿಮ ಬಂಗಾಳದ ಕೋಲ್ಕತ್ತಾ ಮೂಲದ ರೇಣುಕಾ(32) ಕೊಲೆಯಾದ ಮಹಿಳೆಯಾಗಿದ್ದಾಳೆ.
ಮಹದೇವಪ್ಪ ತನ್ನ ಹೆಂಡತಿಯನ್ನೇ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಮಹದೇವಪ್ಪ ನಗರದಲ್ಲಿ ಕಾರು ಚಾಲನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಎಂದು ತಿಳಿದು ಬಂದಿದೆ. ಪದೇ ಪದೆ ಇವರಿಬ್ಬರ ಮಧ್ಯೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ಹೇಳಲಾಗುತ್ತಿದೆ. ಇಂದೂ ಕೂಡ ಸತಿ- ಪತಿ ಮಧ್ಯೆ ಕಲಹ ನಡೆದಿದೆ. ಆದರೆ, ಕೋಪಗೊಂಡ ಮಹದೇವಪ್ಪ ನೇಣು ಬಿಗಿದು ರೇಣುಕಾಳನ್ನ ಹತ್ಯೆ ಮಾಡಿದ್ದಾನೆ.
ಬಳ್ಳಾರಿ: ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಪೊಲೀಸ್ ಪೇದೆ
ಘಟನಾ ಸ್ಥಳಕ್ಕೆ ವಿದ್ಯಾನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಂಡತಿಯನ್ನ ಕೊಲೆ ಮಾಡಿದ ಮಹದೇವಪ್ಪನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
