Asianet Suvarna News Asianet Suvarna News

ಕಲಬುರಗಿ: ಪತ್ನಿ ಜೊತೆ ಜಗಳ: ಪತಿ ಅಪಹರಣ

ಜ.3ರಂದು ಕಲಬುರಗಿನಗರದ ಸೂಪರ್ ಮಾರ್ಕೆಟ್ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತ ನಿಂತಿದ್ದ ವೇಳೆ ನಾಲ್ವರು ಅಪರಿಚಿತರು ಆಟೋದಲ್ಲಿ ಬಂದು ಕಣ್ಣು ಕಟ್ಟಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದು, ಅವರಿಂದ ತಪ್ಪಿಸಿಕೊಂಡು ಕಂಟಿಯಲ್ಲಿ ಬಿದ್ದಿದ್ದಾಗಿ ದೇನು ಪವಾರ ತನ್ನ ಇನ್ನೊಬ್ಬ ಸಹೋದರ ರವಿಗೆ ಫೋನ್ ಮಾಡಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

Husband Kidnap after Fight with Wife in Kalaburagi grg
Author
First Published Jan 6, 2024, 8:30 PM IST

ಕಲಬುರಗಿ(ಜ.06):  ಪತ್ನಿ ಜೊತೆ ಜಗಳವಾಡಿದ ಪತಿಯನ್ನು ಅಪಹರಿಸಿಕೊಂಡು ಹೋಗಿರುವ ಘಟನೆ ನಗರದಲ್ಲಿ ನಡೆದಿದೆ. ದೂರ (ಕೆ) ತಾಂಡಾದ ವಕೀಲ ದೇನು ಪವಾರ್ ಎಂಬುವವರನ್ನೆ ಅಪಹರಣ ಮಾಡಲಾಗಿದೆ ಎಂದು ಅವರ ಸಹೋದರ ಶ್ರೀಮಂತ ಪವಾರ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ದೇನು ಪವಾರ ಹಾಗೂ ನೀಲಾಬಾಯಿ ಅವರು 14 ವರ್ಷಗಳ ಹಿಂದೆ ಮದುವೆಯಾಗಿದ್ದು, ನಾಲ್ವರು ಮಕ್ಕಳಿದ್ದಾರೆ. ಇಬ್ಬರ ನಡುವೆ ವೈಮನಸ್ಸು ಉಂಟಾಗಿದ್ದು, ಇದರಿಂದ ಜಗಳವಾಗಿ ನೀಲಾಬಾಯಿ ಮೂವರು ಮಕ್ಕಳನ್ನು ಕರೆದುಕೊಂಡು ತವರು ಮನೆಗೆ ಹೋಗಿದ್ದಾರೆ. ನಂತರ ಪೊಲೀಸ್ ಠಾಣೆಯಲ್ಲಿ ಸಂಧಾನ ಮಾಡಲಾಗಿದೆ. ಇದಾದ ನಂತರವು ಕಿರಿಕಿರಿಯಾಗಿದ್ದು, ನೀಲಾಬಾಯಿ ಸಹೋದರರಾದ ಜೀವನ, ಸಾಗರ, ಬಬಲು, ಆನಂದ ಅವರು ದೇನು ಪವಾರ ಜೊತೆ ಜಗಳ ತೆಗೆದು ಧಮಕಿ ಹಾಕಿದ್ದಾರೆ ಎನ್ನಲಾಗಿದೆ.

ಚಾಮರಾಜನಗರ: ಅಪ್ರಾಪ್ತ ಭಿಕ್ಷುಕಿಯ ಅಪಹರಣ ಶಂಕೆ, ಜನರಿಂದ ನಾಲ್ವರು ಪ್ರವಾಸಿಗರಿಗೆ ಗೂಸಾ

ಜ.3ರಂದು ನಗರದ ಸೂಪರ್ ಮಾರ್ಕೆಟ್ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತ ನಿಂತಿದ್ದ ವೇಳೆ ನಾಲ್ವರು ಅಪರಿಚಿತರು ಆಟೋದಲ್ಲಿ ಬಂದು ಕಣ್ಣು ಕಟ್ಟಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದು, ಅವರಿಂದ ತಪ್ಪಿಸಿಕೊಂಡು ಕಂಟಿಯಲ್ಲಿ ಬಿದ್ದಿದ್ದಾಗಿ ದೇನು ಪವಾರ ತನ್ನ ಇನ್ನೊಬ್ಬ ಸಹೋದರ ರವಿಗೆ ಫೋನ್ ಮಾಡಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ದೇನು ಪವಾರ ಸಹೋದರ ಶ್ರೀಮಂತ ಪವಾರ ಅವರು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ನೀಲಾ ಬಾಯಿ ಸಹೋದರರಾದ ಜೀವನ, ಬಬಲು, ಸಾಗರ ಬಾಬು, ತಾಯಿ ಜೈನಾಬಿ ವಿರುದ್ಧ ದೂರು ಸಲ್ಲಿಸಿದ್ದಾರೆ.

Follow Us:
Download App:
  • android
  • ios