*  ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಕಾವಲಕೊಪ್ಪ ಗ್ರಾಮದಲ್ಲಿ ನಡೆದ ಘಟನೆ*  ಗಂಗಾಧರ ಶಿಡ್ರೊಳ್ಳಿ ಜಾಧವ ಆತ್ಮಹತ್ಯೆಗೆ ಶರಣಾದ ವ್ಯಕ್ತಿ*  ಗಾಯಗೊಂಡ ಪತ್ನಿಯ ಸ್ಥಿತಿ ನೋಡಿ ಹೆದರಿದ ಪತಿ  

ಮುಂಡಗೋಡ(ಆ.18): ಪತ್ನಿಯ ಮೇಲೆ ಕತ್ತಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ವ್ಯಕ್ತಿಯೋರ್ವ ಆಕೆಯ ಸ್ಥಿತಿ ನೋಡಿ ಗಾಬರಿಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕಾವಲಕೊಪ್ಪ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗಂಗಾಧರ ಶಿಡ್ರೊಳ್ಳಿ ಜಾಧವ(40) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಪತ್ನಿ ರೇಖಾ ಅವರೊಂದಿಗೆ ಜಗಳವಾಗಿದ್ದು, ಅದು ಅತಿರೇಕಕ್ಕೆ ತಿರುಗಿ ಪತ್ನಿ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. 

ಕಾರಿನಲ್ಲಿ ಬೆಂಕಿಹಚ್ಚಿಕೊಂಡು ಪ್ರೇಮಿಗಳು ಆತ್ಮಹತ್ಯೆ

ತೀವ್ರ ಗಾಯಗೊಂಡ ಪತ್ನಿಯ ಸ್ಥಿತಿ ನೋಡಿ ಹೆದರಿದ ಈತ ಗದ್ದೆಗೆ ತೆರಳಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಚಿಂತಾಜನಕ ಸ್ಥಿತಿಯಲ್ಲಿರುವ ಈತನ ಪತ್ನಿಯನ್ನು ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿದೆ.