Asianet Suvarna News Asianet Suvarna News

ಬೆಂಗಳೂರು: ಪತ್ನಿಯನ್ನು ಕೊಂದು, ಪತಿ ನೇಣಿಗೆ ಶರಣು

* ಪತ್ನಿಯನ್ನು ಕೊಂದು ಪತಿ ನೇಣಿಗೆ ಶರಣು
* ಬೆಂಗಳೂರಿನ ತಿಗಳರಪಾಳ್ಯದ ಮನೆಯೊಂದರಲ್ಲಿ ಘಟನೆ
 * ಅಕ್ಕನ ಜತೆ ಸಂಬಂಧ ಬೆಳೆಸಲು ಯತ್ನಿಸಿದ ಯುವಕನ ಹತ್ಯೆಗೈದ ತಮ್ಮ
 

husband commits-suicide killed His Wife at Bengaluru rbj
Author
Bengaluru, First Published Oct 17, 2021, 11:32 PM IST
  • Facebook
  • Twitter
  • Whatsapp

ಬೆಂಗಳೂರು, (ಅ.17):  ಪತ್ನಿಯನ್ನು (Wife) ಚಾಕುವಿನಿಂದ ಇರಿದು ಕೊಂದು (Murder) ಪತಿ (husband) ನೇಣಿಗೆ ಶರಣಾದ ಘಟನೆ ಇಂದು (ಅ.17) ಬೆಂಗಳೂರಿನ (Bengaluru) ತಿಗಳರಪಾಳ್ಯದ ಮನೆಯೊಂದರಲ್ಲಿ ನಡೆದಿದೆ. 

ಪತ್ನಿ ರೋಜಾ (28)ಳನ್ನು ಕೊಂದು ಮಂಜುನಾಥ (32) ಆತ್ಮಹತ್ಯೆ (suicide) ಮಾಡಿಕೊಂಡಿದ್ದಾರೆ. 4 ವರ್ಷದ ಹಿಂದೆ ವಿವಾಹವಾಗಿದ್ದ ದಂಪತಿಗೆ ಮಕ್ಕಳಿರಲಿಲ್ಲ. ಕೌಟುಂಬಿಕ ಕಲಹದಿಂದ (Family Problem) ಬೇಸತ್ತು ಮಂಜುನಾಥ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ಭಾನುವಾರ (Sunday) ಮಧ್ಯಾಹ್ನ ಮನೆಯಲ್ಲಿ ದಂಪತಿ ಗಲಾಟೆ ಮಾಡಿಕೊಂಡಿದ್ದರು. ಆ ಬಳಿಕ, ಸಂಜೆಯಾದ್ರೂ ಮನೆ ಬಾಗಿಲು ತೆಗೆಯದಿದ್ದರಿಂದ ಸ್ಥಳೀಯರಿಗೆ ಅನುಮಾನಗೊಂಡಿದ್ದಾರೆ. 

ಈ ಹಿನ್ನೆಲೆಯಲ್ಲಿ ಸ್ಥಳೀಯರು ಕೂಡಲೇ ಬ್ಯಾಡರಹಳ್ಳಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು (Police) ಆಗಮಿಸಿ ಪರಿಶೀಲಿಸಿದಾಗ ಈ ದುರ್ಘಟನೆ ಘಟನೆ ಬೆಳಕಿಗೆ ಬಂದಿದೆ.

ಅಕ್ಕನ ಜತೆ ಸಂಬಂಧ ಬೆಳೆಸಿದವನ ಹತ್ಯೆ
ಅಕ್ಕನ ಜತೆ ಸಂಬಂಧ ಬೆಳೆಸಿದವನನ್ನು ತಮ್ಮ ಹತ್ಯೆ ಮಾಡಿ ಆಟೋದಲ್ಲಿ ಶವವನ್ನು ಪೊಲೀಸ್ ಠಾಣೆಗೆ ತಂದಿದ್ದಾನೆ. ಈ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ.

 24 ವರ್ಷದ ಭಾಸ್ಕರ್ ಎಂಬುವವನನ್ನು ಕೊಲೆಗೈಯಲಾಗಿದ್ದು, ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟಿಲ್, ಶನಿವಾರ ಮಧ್ಯರಾತ್ರಿ ನಂತರ ಎಪಿ ನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಮೃತ ವ್ಯಕ್ತಿ ಹೊಸೂರು ಬಳಿಯ ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿಸಿದ್ದಾರೆ.

ಘಟನೆ ವಿವರ
ಭಾಸ್ಕರ್ ಎಂಬುವವನು ಮುನಿರಾಜು ಅಕ್ಕನಿಗೆ ಹತ್ತಿರ ಆಗಲು ಪ್ರಯತ್ನಿಸುತ್ತಿದ್ದ. ಇದೇ ವಿಚಾರಕ್ಕೆ ಮಹಿಳೆ ಮತ್ತು ಗಂಡನ ನಡುವೆ ಗಲಾಟೆಯಾಗುತ್ತಿತ್ತು. 15 ದಿನದ ಹಿಂದೆ ಮುನಿರಾಜು ಅಕ್ಕ ಪತಿ ಮನೆ ಬಿಟ್ಟು ಬಂದಿದ್ದಳು. 

ಮಾಲೂರಿನಲ್ಲಿದ್ದ ಪತಿ ಮನೆ ಬಿಟ್ಟು ಮುನಿರಾಜು ಅಕ್ಕ ಬಂದಿದ್ದಳು. ಚಂದ್ರಶೇಖರ್ ಲೇಔಟ್​ನಲ್ಲಿ ಬಂದು ವಾಸಿಸುತ್ತಿದ್ದಳು. ಮಹಿಳೆಗೆ ಬೇರೆ ಮನೆ ಮಾಡಿಕೊಡ್ತೇನೆ ಅಂತ ಭಾಸ್ಕರ್ ಹೇಳಿದ್ದ. ಈ ವಿಚಾರವನ್ನು ಮಹಿಳೆಯ ಮಗ ಸೋದರ ಮಾವ ಮುನಿರಾಜುಗೆ ಮಾಹಿತಿ ನೀಡಿದ್ದಾನೆ.

ಮುನಿರಾಜು ಆಟೋದಲ್ಲಿ ಇಬ್ಬರು ಸ್ನೇಹಿತರೊಂದಿಗೆ ತೆರಳಿದ್ದ. ಅಲ್ಲದೇ ಭಾಸ್ಕರ್ ಕೂಡ ಆಟೋದಲ್ಲಿ ಮಹಿಳೆ ಜೊತೆ ತೆರಳುತ್ತಿದ್ದ. ಸುಂಕದಕಟ್ಟೆ ಬಳಿ ಆಟೋ ತಡೆದು ಅಕ್ಕನನ್ನು ಕರೆತಂದಿದ್ದರು. ನಂತರ ಭಾಸ್ಕರ್​ನನ್ನು ಕೆಬ್ಬೆಹಾಳಕ್ಕೆ ಕರೆದುಕೊಂಡು ಹೋಗಿ ಹತ್ಯೆ ಮಾಡಿದ್ದಾರೆ.

Follow Us:
Download App:
  • android
  • ios