Asianet Suvarna News Asianet Suvarna News

ನೇಣು ಬಿಗಿದುಕೊಂಡ ಪತ್ನಿ, ಆಘಾತದಿಂದ ಆತ್ಮಹತ್ಯೆಗೆ ಯತ್ನಿಸಿದ ಪತಿ

* ರಾಜ್ಯದಲ್ಲಿ ದಿನೇ ದಿನೇ ಆತ್ಮಹತ್ಯೆ ಸಂಖ್ಯೆ ಹೆಚ್ಚಳ
* ಬೆಳ್ತಂಗಡಿಯಲ್ಲಿ ವಿವಾಹಿತೆ ಮಹಿಳೆಯೊಬ್ಬಳು ನೇಣುಬಿಗಿದುಕೊಂಡು ಆತ್ಮಹತ್ಯೆ
* ಆಘಾತದಿಂದ ಪತಿ ಆತ್ಮಹತ್ಯೆಗೆ ಯತ್ನ

Husband attempts suicide after Wife Dies at Belthangady rbj
Author
Bengaluru, First Published Oct 18, 2021, 8:31 PM IST
  • Facebook
  • Twitter
  • Whatsapp

ಬೆಳ್ತಂಗಡಿ, (ಅ.18): ಕರ್ನಾಟಕದಲ್ಲಿ (Karnataka) ದಿನೇ ದಿನೇ ಆತ್ಮಹತ್ಯೆ (Suicide) ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. 

ಇಂದು (ಅ.18) ಪುತ್ತೂರಿನಲ್ಲಿ(Puttur) ನೇಣು ಬಿಗಿದು‌ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮತ್ತೊಂದೆಡೆ ಬೆಳ್ತಂಗಡಿಯ ಕೊಕ್ಕಡ ಗ್ರಾಮದ ಪುತ್ಯೆಯಲ್ಲಿ ವಾಸ್ತವ್ಯವಿರುವ ಮಹಿಳೆಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪುತ್ತೂರು;  ಹೊಸ ಬಟ್ಟೆ ಧರಿಸಿ ನೇಣಿಗೆ ಶರಣಾದ ಕೃಷಿಕ  ವೃದ್ಧ ದಂಪತಿ

 ಕೊಕ್ಕಡ ಗ್ರಾಮದ ಪುತ್ಯೆ ನಿವಾಸಿ ರಾಜೇಶ್ ಅವರ ಪತ್ನಿ ರಶ್ಮಿತಾ (28) ಆತ್ಮಹತ್ಯೆ ಮಾಡಿಕೊಂಡವರು.

ರಾಜೇಶ್ ಮತ್ತು ರಶ್ಮಿತಾ ದಂಪತಿ ತಮ್ಮ ಮಗುವಿನೊಂದಿಗೆ ಪುತ್ಯೆಯಲ್ಲಿ ನೆಲೆಸಿದ್ದರು. ಇಂದು(ಸೋಮವಾರ) ಮಧ್ಯಾಹ್ನ ರಶ್ಮಿತಾರವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಚಾರ ತಿಳಿದು ಮನೆಗೆ ಧಾವಿಸಿದ ಪತಿ ರಾಜೇಶ್ ಅವರೂ ಆತ್ಮಹತ್ಯೆ ಮುಂದಾಗಿದ್ದು, ಕೂಡಲೇ ಸ್ಥಳೀಯರು ತಡೆದಿದ್ದಾರೆ ಎನ್ನಲಾಗಿದೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ್ದಾರೆ.

ಪುತ್ತೂರಿನಲ್ಲಿ ವೃದ್ಧ ದಂಪತಿ ಆತ್ಮಹತ್ಯೆ
ಪುತ್ತೂರಿನಲ್ಲಿ(Puttur) ನೇಣು ಬಿಗಿದು‌ ವೃದ್ಧ ದಂಪತಿ ಆತ್ಮಹತ್ಯೆಗೆ(Suicide) ಶರಣಾಗಿದ್ದಾರೆ.  ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಪಾದಕರಿಯಿಂದ ಪ್ರಕರಣ(Crime News) ವರದಿಯಾಗಿದೆ. ಸುಬ್ರಹ್ಮಣ್ಯ ಭಟ್ (84), ಶಾರದಾ (76) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೊಸ ಬಟ್ಟೆ ಧರಿಸಿ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೃಷಿ ಕುಟುಂಬದ ( Agriculture) ವೃದ್ದ ದಂಪತಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. 
 

Follow Us:
Download App:
  • android
  • ios