* ಕಟ್ಟಡವೊಂದರಲ್ಲಿ ಮಾನವನ ದೇಹದ ಭಾಗಗಳು ಪತ್ತೆ* ಅಂಗಡಿ ಮಾಲೀಕನ ಇಬ್ಬರು ಮಕ್ಕಳು ವೈದ್ಯರು* ವೈದ್ಯಕೀಯ ಉದ್ದೇಶಕ್ಕೆ ತಂದು ಇಟ್ಟಿರುವ ಶಂಕೆ 

ನಾಸಿಕ್ (ಮಾ. 28) ಇದೊಂದು ವಿಚಿತ್ರ ಆದರೆ ಅಷ್ಟೇ ಭಯಾನಕ ಪ್ರಕರಣ.. ಕಣ್ಣು, ಕಿವಿ.. ಮುಖದ ಭಾಗಗಳು ಸೇರಿದಂತೆ ಮಾನವನ ದೇಹದ ಭಾಗಗಳು (Human Body Parts) ನಾಸಿಕ್ ನ ಕಟ್ಟಡದ ನೆಲಮಾಳಿಗೆಯಲ್ಲಿ ಪತ್ತೆಯಾಗಿದೆ.

ಮಹಾರಾಷ್ಟ್ರದ (Maharashtra) ನಾಸಿಕ್ (Nashik) ನಗರದ ಮುಂಬೈ ನಾಕಾ ಪ್ರದೇಶದ ಕಟ್ಟಡವೊಂದರ ಮುಚ್ಚಿದ ನೆಲಮಾಳಿಗೆಯ ಅಂಗಡಿಯಲ್ಲಿ ಕಣ್ಣು, ಕಿವಿ ಮತ್ತು ಮುಖದ ಇತರ ಭಾಗಗಳು ಸೇರಿದಂತೆ ಮಾನವ ಅವಶೇಷಗಳು ಪತ್ತೆಯಾಗಿವೆ ಎಂದು ಪೊಲೀಸರು(Police) ಸೋಮವಾರ ತಿಳಿಸಿದ್ದಾರೆ. ಕಳೆದೆರಡು ದಿನಗಳಿಂದ ಅಂಗಡಿಯಿಂದ ದುರ್ವಾಸನೆ ಬರುತ್ತಿದ್ದರಿಂದ ಸುತ್ತಮುತ್ತಲಿನ ನಿವಾಸಿಗಳು ಭಾನುವಾರ ತಡರಾತ್ರಿ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಅವಶೇಷಗಳು ಪತ್ತೆಯಾಗಿವೆ.

"ಅಂಗಡಿ ಸ್ಕ್ರ್ಯಾಪ್ ವಸ್ತುಗಳಿಂದ ತುಂಬಿತ್ತು. ಆದರೆ, ಎರಡು ಪ್ಲಾಸ್ಟಿಕ್ ಕಂಟೈನರ್‌ಗಳನ್ನು ತೆರೆದಾಗ ಮಾನವ ಕಿವಿ, ಮೆದುಳು, ಕಣ್ಣುಗಳು ಮತ್ತು ಮುಖದ ಕೆಲವು ಭಾಗಗಳು ಪತ್ತೆಯಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಫೋರೆನ್ಸಿಕ್ ತಂಡವು ಮಾನವ ಅವಶೇಷಗಳನ್ನು ವಶಕ್ಕೆ ತೆಗೆದುಕೊಂಡಿದೆ. 

ಪೊಲೀಸರ ಪ್ರಕಾರ, ಅಂಗಡಿಯ ಮಾಲೀಕರ ಇಬ್ಬರು ಮಕ್ಕಳು ವೈದ್ಯರು. ವೈದ್ಯಕೀಯ ಉದ್ದೇಶಗಳಕ್ಕಾಗಿ ಮಾನವನ ದೇಹದ ಭಾಗಗಳನ್ನು ಇಲ್ಲಿ ಇಟ್ಟುಕೊಂಡಿದ್ದರು. ಆದರೆ ಎಲ್ಲ ಕೋನಗಳಿಂದ ತನಿಖೆ ನಡೆಯುತ್ತಿದೆ. ಯಾವುದೇ ಪ್ರಕರಣ ದಾಖಲಾಗಿಲ್ಲ.

Pig Heart Transplant: ಅಮೆರಿಕದಲ್ಲಿ ಹಂದಿ ಹೃದಯ ಕಸಿಗೊಳಗಾಗಿದ್ದ ವ್ಯಕ್ತಿ ಸಾವು!

ಮಾನವನ ದೇಹದ ಮಾಂಸ ರಫ್ತು: ಕೊರೋನಾವನ್ನು ಇಡೀ ಪ್ರಪಂಚಕ್ಕೆ ನೀಡಿದ್ದ ಚೀನಾ ಮಾನವನ ದೇಹದ ಮಾಂಸ ರಫ್ತು ಮಾಡುತ್ತಿತ್ತು ಎಂಬ ಭಯಾನಕ ಸಂಗತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಮಾನವನ ದೇಹದ ಭಾಗಗಳನ್ನೇ ಉಪಯೋಗಿಸಿ ಕಾರ್ನ್‌ಡ್‌ ಬೀಫ್‌ (ಮಾಂಸಾಹಾರಿ ಖಾದ್ಯ) ತಯಾರಿಸುತ್ತಿದೆ ಎಂಬ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡಿತ್ತು.

ಆರ್ಥಿಕವಾಗಿ ಹಿಂದುಳಿದಿರುವ ಆಫ್ರಿಕಾದ ರಾಷ್ಟ್ರಗಳಿಗೆ ರವಾನಿಸುತ್ತಿದೆ ಎಂಬ ಸಂದೇಶವೊಂದು ವಾಟ್ಸಪ್‌, ಫೇಸ್ಬುಕ್‌ ಹಾಗೂ ಟ್ವೀಟರ್‌ ಸೇರಿ ಇನ್ನಿತರ ಸಾಮಾಜಿಕ ವೇದಿಕೆಗಳಲ್ಲಿ ವೈರಲ್‌ ಆಗಿದ್ದವು . ಆದರೆ ಇಂಥ ಆರೋಪಗಳು ಸುಳ್ಳು ನಾವು ಇಂಥ ಕೆಲಸ ಮಾಡುತ್ತಿಲ್ಲ ಎಂದು ಚೀನಾ ಹೇಳಿತ್ತು. ಜಪಾನ್ ರೆಸ್ಟೋರೆಂಟ್ ಒಂದರಲ್ಲಿ ಮಾನವನ ಮಾಂಸದ ಖಾದ್ಯ ಸಿಗುತ್ತದೆ ಎಂಬ ಸಂಗತಿಯೂ ವೈರಲ್ ಆಗಿತ್ತು. 

 ವಿವಾದಿತ ಹೇಳಿಕೆ ನೀಡಿದ್ದ ಬಿಜೆಪಿ ನಾಯಕ: ಬಿಸಿಯೂಟದ ಜತೆಗೆ ಮೊಟ್ಟೆನೀಡುವ ಮಧ್ಯಪ್ರದೇಶ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ವಿರೋಧ ವ್ಯಕ್ತ ಪಡಿಸಿದ್ದು, ಮಾಂಸಹಾರ ಸೇವನೆ ಮಾಡುವುದರಿಂದ ಮುಂದೆ ಮಾನವರು ನರಭಕ್ಷಕರಾಗಬಹುದು ಎಂದು ಬಿಜೆಪಿ ನಾಯಕ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದ ಕಾಲದ ಮಾತು.

ಬಿಜೆಪಿ ನಾಯಕ ಗೋಪಾಲ್‌ ಭಾರ್ಗವ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಮಾಂಸಹಾರ ಸೇವನೆ ಸನಾತನ ಸಂಸ್ಕೃತಿಗೆ ವಿರೋಧವಾಗಿದ್ದು, ಬಾಲ್ಯದಿಂದ ಮಾಂಸಹಾರ ಸೇವನೆ ಮಾಡಿದರೆ ಮುಂದೆ ಮನುಷ್ಯನನ್ನು ತಿನ್ನುವವರಾಗಿ ಪರಿವರ್ತನೆಯಾಗಬಹುದು ಎಂದಿದ್ದು ವಿವಾದ ಎಬ್ಬಿಸಿತ್ತು.