ರವಿ ಹೋತಪೇಟೆ ಆತ್ಮಹತ್ಯೆಗೆ ಶರಣಾದ ವ್ಯಕ್ತಿ| ಗೊಂಬೆಗಳಿಗೆ ಆಭರಣಗಳನ್ನು ಪೂರೈಸುವ ವ್ಯಾಪಾರ ಮಾಡುತ್ತಿದ್ದರ ಮೃತ ರವಿ| ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ| 

ಹುಬ್ಬಳ್ಳಿ(ಫೆ.25): ಇಲ್ಲಿನ ವ್ಯಕ್ತಿಯೊಬ್ಬರು ಕೊಲ್ಲಾಪುರದ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ವೀರಾಪುರ ಓಣಿಯ ನಿವಾಸಿ ರವಿ ಹೋತಪೇಟೆ ಎಂಬುವವರೇ ಆತ್ಮಹತ್ಯೆಗೆ ಶರಣಾದವರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರವಿ ಹೋತಪೇಟೆ ಗೊಂಬೆಗಳಿಗೆ ಆಭರಣಗಳನ್ನು ಪೂರೈಸುವ ವ್ಯಾಪಾರ ಮಾಡುತ್ತಿದ್ದರು. ಆಭರಣಗಳನ್ನು ತರುವುದಾಗಿ ಕೊಲ್ಲಾಪುರಕ್ಕೆ ತೆರಳಿದ್ದರು. ಇದೇ ವೇಳೆ ತಂಗಿದ್ದ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಬಾಗಲಕೋಟೆ: MBBS ವಿದ್ಯಾರ್ಥಿನಿ ನೇಣಿಗೆ ಶರಣು, ಕಾರಣ..?

ಅಯ್ಯಪ್ಪ ಮಾಲಾಧಾರಿಗಳಿಗೆ ಗುರುಸ್ವಾಮಿಯಾಗಿದ್ದರು ಎಂದು ಹೇಳಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕೊಲ್ಲಾಪುರ ಠಾಣೆಯ ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ಸಂಬಂಧಿಗಳು ಕೊಲ್ಲಾಪುರಕ್ಕೆ ತೆರಳಿದ್ದಾರೆ.