ಹುಬ್ಬಳ್ಳಿ(ಸೆ.26): ಬಿಜೆಪಿ‌ ಮುಖಂಡನ ಎರಡನೇ ಪತ್ನಿ ಎಂದು ಹೇಳಿಕೊಂಡಿದ್ದ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಸ್ವಾಗತ ಕಾಲೋನಿಯಲ್ಲಿ ಇಂದು(ಶನಿವಾರ) ನಡೆದಿದೆ. ಅನಿತಾ ರೇವಣಕರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಗೃಹಿಣಿಯಾಗಿದ್ದಾರೆ.

ಕಲಘಟಗಿ ಮೂಲದ ಬಿಜೆಪಿ‌ ಮುಖಂಡ ಬಸವರಾಜ್ ಕೆಲಗಾರ ಅವರು ಹಣದಾಸೆಗೆ ಪ್ರೀತಿಸಿ ಮದುವೆಯಾಗಿ, ಕೈಕೊಟ್ಟಿದಕ್ಕೆ‌ ಅನಿತಾ ರೇವಣಕರ್ ಇಂದು ನಗರದ ತಮ್ಮದೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. 

ತಂಗಿ ಆತ್ಮಹತ್ಯೆಗೆ ಕಾರಣವೆಂದು ಭಾವನನ್ನೇ ಹತ್ಯೆಗೈದ ಯೋಧ

ಬಿಜೆಪಿ‌ ಮುಖಂಡ ಬಸವರಾಜ್ ಕೆಲಗಾರ ನನ್ನನ್ನು ಪ್ರೀತಿಸಿ ಮದುವೆಯಾಗಿ ವಂಚಿಸಿದ್ದ ಎಂದು ಮೃತ ಮಹಿಳೆ ಅನಿತಾ ರೇವಣಕರ್ ಆರೋಪಿಸಿದ್ದರು. ಇತ್ತೀಚೆಗೆ ಈ ಮಹಿಳೆಯನ್ನು ಬಿಜೆಪಿ ಮುಖಂಡ ಬಸವರಾಜ ‌ಕೆಲಗಾರ ಥಳಿಸಿದ್ದರು. ಈ ಸಂಬಂಧ ಹುಬ್ಬಳ್ಳಿಯ ಕೇಶ್ವಾಪುರ ಠಾಣೆಯಲ್ಲಿ‌ ಬಸವರಾಜ್ ವಿರುದ್ಧ ದೂರು ದಾಖಲಾಗಿತ್ತು.