ಮೃತಳ ತಾಯಿ ಬೊಮ್ಮೇಗೌಡನಕೊಪ್ಪಲು ಗ್ರಾಮದ ಗೌರಮ್ಮ ಕಿಕ್ಕೇರಿ ಪೊಲೀಸರಿಗೆ ದೂರು ನೀಡಿದ್ದಾರೆ. ಕಿಕ್ಕೇರಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.  

ಕಿಕ್ಕೇರಿ(ಮೇ.25):  ಹೊಟ್ಟೆನೋವು ತಾಳಲಾರದೆ ಗೃಹಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಹೆಗ್ಗಡಹಳ್ಳಿಯಲ್ಲಿ ಗುರುವಾರ ರಾತ್ರಿ ಜರುಗಿದೆ.

ಗ್ರಾಮದ ಪ್ರಸನ್ನರ ಪತ್ನಿ ಅಶ್ವಿನಿ (25) ಮೃತ ಮಹಿಳೆ. ಮೃತಳಿಗೆ ಪತಿ, ಪುತ್ರ ಇದ್ದಾರೆ. ಒಂದು ವರ್ಷದಿಂದ ಈಕೆಗೆ ಹೊಟ್ಟೆನೋವು ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿತ್ತು. ಹಲವೆಡೆ ಚಿಕಿತ್ಸೆ ಪಡೆದರು ಗುಣಮುಖವಾಗಿರಲಿಲ್ಲ. ಇದರಿಂದ ಖಿನ್ನತೆಗೊಳಗಾಗಿದ್ದಳು. ಹೊಟ್ಟೆನೋವು ಬಾಧೆಗೆ ಬೇಸತ್ತು ಗುರುವಾರ ತಮ್ಮ ಮನೆಯಲ್ಲಿ ವೇಲ್‌ನಿಂದ ಬಿಗಿದುಕೊಂಡು ಸಾವಿಗೆ ಯತ್ನಿಸಿದ್ದಾಳೆ.

ಕೇವಲ 2000 ರೂ.ಗೆ ಬೆಂಗಳೂರು ಯುವತಿ ಪ್ರಭುಧ್ಯಾಳ ಮರ್ಡರ್

ಈ ವೇಳೆ ಈಕೆ ಪತಿ ನೋಡಿ ಅಸ್ವಸ್ಥೆಯಾಗಿದ್ದ ಅಶ್ವಿನಿ ಅವರನ್ನು ಕುಣಿಕೆಯಿಂದ ಬಿಡಿಸಿ ತುರ್ತು ಚಿಕಿತ್ಸೆಗೆ ಕೆ.ಆರ್.ಪೇಟೆ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

ಮೃತಳ ತಾಯಿ ಬೊಮ್ಮೇಗೌಡನಕೊಪ್ಪಲು ಗ್ರಾಮದ ಗೌರಮ್ಮ ಕಿಕ್ಕೇರಿ ಪೊಲೀಸರಿಗೆ ದೂರು ನೀಡಿದ್ದಾರೆ. ಕಿಕ್ಕೇರಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮೃತರದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.