ಬೆಂಗಳೂರು, (ಅ.18): ನಗರದ ಪ್ರತಿಷ್ಠಿತ ನರ್ಸಿಂಗ್​ ಹೋಂ ಒಂದರ ಶುಶ್ರೂಷಕ, ಚಿಕಿತ್ಸೆಗೆ ಹೋದ ಯುವತಿ ಜೊತೆ ಅನುಚಿತ ವರ್ತನೆ ಮಾಡಿ ಸಿಕ್ಕಿಬಿದ್ದಿದ್ದಾನೆ.

"

ವಿಪರೀತ ಕಾಲು ನೋವು ಎಂದು ಮಧ್ಯರಾತ್ರಿಯಲ್ಲಿ ಯುವತಿಯೋರ್ವಳು ಕನಕಪುರ ರಸ್ತೆಯಲ್ಲಿ ಕ್ಯೂರ್​ ಆಸ್ಪತ್ರೆಗೆ ತೆರಳಿದ್ದರು. ಆಗ ಡ್ಯೂಟಿ ಡಾಕ್ಟರ್​ ಇರದ ಕಾರಣ ಐಸಿಯುನಲ್ಲಿ ಚಿಕಿತ್ಸೆ ನೀಡಲಾಯಿತು. 

ಟ್ಯೂಷನ್ ಕ್ಲಾಸ್; 14  ವರ್ಷವಿದ್ದಾಗ ನಡೆದ ದೌರ್ಜನ್ಯಕ್ಕೆ  36 ಆದಾಗ ದೂರು ಕೊಟ್ಟಳು!

ಬಳಿಕ ಯುವತಿಗೆ ಇಂಜೆಕ್ಷನ್​ ನೀಡುವಂತೆ ಐಸಿಯು ವೈದ್ಯ ಈ ಕಾಮುಕ ಶುಶ್ರೂಷಕನಿಗೆ ಹೇಳಿದ್ದ. ಆದರೆ ರಾಮಕೃಷ್ಣ ಇಂಜೆಕ್ಷನ್​ ನೀಡುವಾಗ ಯುವತಿಯ ಖಾಸಗಿ ಅಂಗ ಸ್ಪರ್ಶಿಸಿ, ವಿಕೃತಿ ಮೆರೆದಿದ್ದಾನೆ.

ಯುವತಿ ಇದನ್ನು ವಿರೋಧಿಸಿ, ಆಸ್ಪತ್ರೆಯವರ ಬಳಿ ಪ್ರಶ್ನೆ ಮಾಡಿದಾರೆ ಅವರೇನೂ ಪ್ರತಿಕ್ರಿಯೆ ನೀಡಲಿಲ್ಲ. ಇದೀಗ ಆಕೆ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಆಸ್ಪತ್ರೆ ನಂಬಿ ರೋಗಿಗಳು ಬರ್ತಾರೆ. ನನಗಾದ ಸ್ಥಿತಿ ಯಾರಿಗೂ ಬರಬಾರದು. ಆಸ್ಪತ್ರೆಯವರಿಗೆ ಮತ್ತು ಆ ಕಾಮುಕನಿಗೆ ಶಿಕ್ಷೆಯಾಗಬೇಕು ಎಂದು ಯುವತಿ ಆಗ್ರಹಿಸಿದ್ದಾರೆ.