ಡಾರ್ಜಿಲಿಂಗ್ ( ಅ. 18) ಇದೊಂದು ವಿಚಿತ್ರದಲ್ಲಿ ವಿಚಿತ್ರ ಪ್ರಕರಣ. ಲೈಂಗಿಕ ದೌರ್ಜನ್ಯ ಎಸಗಿದ್ದ ಶಾಲಾ ಶಿಕ್ಷಕನನ್ನು 23 ವರ್ಷಗಳ ನಂತರ ಬಂಧಿಸಲಾಗಿದೆ.

ಈಗ 37 ವರ್ಷದ ಮಹಿಳೆ ಯಾಗಿರುವ ಸಂತ್ರಸ್ತೆ 14 ವರ್ಷದವಳಿದ್ದಾಗ ಆಕೆ ಮೇಲೆ ದೌರ್ಜನ್ಯ ನಡೆದಿತ್ತು. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶಾಲಾ ಶಿಕ್ಷಕನಾಗಿದ್ದ ಜಿತೇಶ್ ಓಜಾ  ಕಳೆದ ಎರಡು ದಶಕಗಳಲ್ಲಿ 20 ಕ್ಕೂ ಹೆಚ್ಚು ಶಾಲೆಗಳಲ್ಲಿ ಪಾಠ ಮಾಡಿದ್ದಾರೆ.  ಓಜಾ ವಿವಿಧ ಶಾಲೆಗಳಲ್ಲಿ ಕಲಿಲಿಸುವಾಗಲೂ ವಿದ್ಯಾರ್ಥಿನಿಯರಿಗೆ  ಲೈಂಗಿಕ ಕಿರುಕುಳ ನೀಡಿದ್ದರು. ಸಂತ್ರಸ್ತೆ ಕಳೆದ ಸೆಪ್ಟೆಂಬರ್‌ನಲ್ಲಿ ಡಾರ್ಜಿಲಿಂಗ್‌ನ ಸದರ್ ಪೊಲೀಸ್ ಠಾಣೆಗೆ ಇಮೇಲ್ ಮೂಲಕ ದೂರು ನೀಡಿದ್ದರು. ತನ್ನ ದೂರಿನಲ್ಲಿ, ಓಜಾ ತನ್ನ ಮನೆಯಲ್ಲಿ ಟ್ಯೂಷನ್ ನೀಡುತ್ತಿರುವಾಗ ಒಂದು ತಿಂಗಳ ಕಾಲ ಅನೇಕ ಸಂದರ್ಭಗಳಲ್ಲಿ ತನ್ನನ್ನು ಕಿರುಕುಳ ನೀಡಿದ್ದ ಎಂದು ಆರೋಪಿಸಿದ್ದರು.

ಸೆಕ್ಸ್ ಮಾಡುವಾಗ ಕಾಂಡೋಮ್ ಬಳಸು ಎಂದಿದ್ದಕ್ಕೆ ಕೊಂದೇ ಬಿಟ್ಟ ಪಾಪಿ

46 ವರ್ಷದ ಜಿತೇಶ್ ಓಜಾ ಅವರನ್ನು ಅಕ್ಟೋಬರ್ 5 ರಂದು ಸಿಲಿಗುರಿಯಲ್ಲಿನ ಬಾಡಿಗೆ ಮನೆಯಿಂದ ಬಂಧಿಸಲಾಗಿದ್ದು ಅವರನ್ನು ಈಗ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಬಾಲಕಿಯಾಗಿದ್ದಾಗ ದೌರ್ಜನ್ಯಕ್ಕೆ ಒಳಗಾಗಿದ್ದ ಮಹಿಳೆ ಹಾಂಕಾಂಗ್ ನಲ್ಲಿ ವಾಸ ಮಾಡುತ್ತಿದ್ದಾರೆ. ಅದು ಯಾವ ಕಾರಣಕ್ಕೆ ಇಷ್ಟು ವರ್ಷದ ನಂತರ ದೂರು ನೀಡಿದರು ಎನ್ನುವುದು ಗೊತ್ತಾಗಿಲ್ಲ.

ನಾವು ದೂರು ಸ್ವೀಕರಿಸಿದಾಗ ಈ ಪ್ರಕರಣ ಹೀಗೆ ಸಾಗಿತ್ತದೆ ಎಂದು ಗೊತ್ತಿರಲಿಲ್ಲ. ಆರೋಪಿ ಶಿಕ್ಷಕನ ಬಗ್ಗೆ ಒಂದೊಂದೆ ಮಾಹಿತಿ ಕಲೆಹಾಕಿದಾಗ ಎಲ್ಲವೂ ಸ್ಪಷ್ಟವಾಗುತ್ತಾ ಹೋಯಿತು. ಈ ಶಿಕ್ಷಕನ ವಿರುದ್ಧ ಇನ್ನಷ್ಟು ಜನ ದೂರು ನೀಡುವ ಸಾಧ್ಯತೆಯೂ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.