ಬೇಕಂತಲೇ 211 ಜನರ ಜೊತೆ ಲೈಂಗಿಕ ಸಂಪರ್ಕ ಹೊಂದಿದ HIV ಸೋಂಕಿತೆ

ಲಿಂಡಾ ಲೆಸೆಸೆ ಎಂಬ ಸೆಕ್ಸ್ ವರ್ಕರ್,  1 ಜನವರಿಇ 2022 ರಿಂದ ಇದುವರೆಗೂ ಬೇರೆ ಬೇರೆ ರಾಜ್ಯಗಳಲ್ಲಿ 211 ಜನರ ಜೊತೆ ಲೈಂಗಿಕ ಸಂಪರ್ಕಹೊಂದಿದ್ದಾಳೆ  ಎಂದು ವರದಿ ಪ್ರಕಟವಾಗಿದೆ. 

HIV positive woman having relationship with 211 people mrq

ವಾಷಿಂಗಟನ್ ಡಿಸಿ: ಜಗತ್ತಿನಲ್ಲಿ ಬೇರೆಯವರಿಗೆ ಅಪಾಯವನ್ನುಂಟು ಮಾಡುವ ಮನಸ್ಥಿತಿಯ ಜನರು ಎಲ್ಲಾ ಕಡೆ ಇರುತ್ತಾರೆ. ಉದ್ದೇಶಪೂರ್ವಕವಾಗಿ ಜನರಿಗೆ ನೋವುಂಟು ಮಾಡಿ ತಮಾಷೆ  ನೋಡುತ್ತಾರೆ. ಇಂತಹಹುವುದೇ ಘಟನೆಯೊಂದು ಅಮೆರಿಕಾದ ಒಹಿಯೋ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಹೆಚ್‌ಐವಿ ಅಂತಹ ಮಾರಣಾಂತಿಕ ಕಾಯಿಲೆಯ ಸೋಂಕು ತಗುಲಿರೋ ವಿಷಯ ತಿಳಿದಿದ್ದರೂ ಮಹಿಳೆ ಉದ್ದೇಶಪೂರ್ವಕವಾಗಿ ದೈಹಿಕ ಸಂಪರ್ಕ ಹೊಂದಿದ್ದಾಳೆ.

30 ವರ್ಷದ ಮಹಿಳಾ ಸೆಕ್ಸ್ ವರ್ಕರ್ ತಾನು ಹೆಚ್‌ಐವಿ ಸೋಂಕಿತೆ ಅಂತ ಗೊತ್ತಿದ್ದರೂ 211 ಗ್ರಾಹಕರ ಜೊತೆ ಲೈಂಗಿಕ ಸಂಪರ್ಕ ನಡೆಸಿದ್ದಾಳೆ. ದಿ ನ್ಯೂಯಾರ್ಕ್ ಪೋಸ್ಟ್ ವರದಿ ಪ್ರಕಾರ, 30 ವರ್ಷದ ಲಿಂಡಾ ಲೆಸೆಸೆ ಎಂಬ ಸೆಕ್ಸ್ ವರ್ಕರ್,  1 ಜನವರಿಇ 2022 ರಿಂದ ಇದುವರೆಗೂ ಬೇರೆ ಬೇರೆ ರಾಜ್ಯಗಳಲ್ಲಿ 211 ಜನರ ಜೊತೆ ಲೈಂಗಿಕ ಸಂಪರ್ಕಹೊಂದಿದ್ದಾಳೆ  ಎಂದು ವರದಿ ಪ್ರಕಟವಾಗಿದೆ. 

ಒಹಿಯೋ ಪ್ರದೇಶದಲ್ಲಿ ಆತಂಕದ ವಾತಾವರಣ

ಲಿಂಡಾ ಲೆಸೆಸೆಗೆ ತಾನು ಹೆಚ್ಐವಿ ಸೋಂಕಿತೆ ಎಂಬ ವಿಚಾರ ಮೊದಲೇ ಗೊತ್ತಿತ್ತು. ಆದರೂ ತನ್ನ ಕೆಲಸವನ್ನು ಮುಂದವರಿಸಲು ವಿಷಯವನ್ನು ಮುಚ್ಚಿಟ್ಟಿದ್ದಳು. ಈಗ ಹೆಚ್ಐವಿ ಸೋಂಕು ಹರಡಲು ಕಾರಣವಾಗಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ವಿಷಯ ಬಹಿರಂಗವಾಗುತ್ತಿದ್ದಂತೆ ಅಮೆರಿಕಾದ ಒಹಿಯೋ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. 

200 ರೂಪಾಯಿ ಕೊಡದ್ದಕ್ಕೆ ತವರು ಸೇರಿದ ಪತ್ನಿ; ಇತ್ತ ಮರಳಿ ಬಾರದ ಲೋಕಕ್ಕೆ ತೆರಳಿದ ಗಂಡ!

ಪ್ರತಿ ಗ್ರಾಹಕರಿಗೆ ಫೋನ್ ಮಾಡ್ತಿರೋ ಪೊಲೀಸರು

ಲಿಂಡಾ ತನ್ನ ಬಹುತೇಕ ಗ್ರಾಹಕರನ್ನು ಪಶ್ವಿಮ ವರ್ಜಿನಿಯಾ ಗಡಿ ಸಮೀಪದ ಆಗ್ನೇಯ ಒಹಿಯೋ ಬಳಿಯಲ್ಲಿರೋ ಸಣ್ಣ ಪಟ್ಟಣಕ್ಕೆ ಕರೆಸಿಕೊಳ್ಳುತ್ತಿದ್ದಳು. ಲಿಂಡಾ ಜೊತೆ ಲೈಂಗಿಕ ಸಂಪರ್ಕ ಹೊಂದಿರುವ ಬಹುತೇಕ ಗ್ರಾಹಕರು ಪೂರ್ವ ಕರಾವಳಿ ಭಾಗದಲ್ಲಿ ವಾಸವಾಗಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಈ ವಿಷಯ ತಿಳಿಯುತ್ತಿದ್ದಂತೆ ಅಲರ್ಟ್ ಆಗಿರುವ ಪೊಲೀಸರು ಲಿಂಡಾ ಜೊತೆ ಸಂಪರ್ಕ ಹೊಂದಿರುವ ಗ್ರಾಹಕರ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ಲಿಂಡಾ ಮೊಬೈಲ್‌ನಲ್ಲಿ ಸಿಕ್ಕ ನಂಬರ್ ಪಡೆದು ಪ್ರತಿ ಗ್ರಾಹಕರಿಗೆ ಪೊಲೀಸರು ಕರೆ ಮಾಡುತ್ತಿದ್ದಾರೆ. ಪೊಲೀಸರು ಮತ್ತು ಆರೋಗ್ಯ ಇಲಾಖೆಯ ಸಂಪರ್ಕಕ್ಕೆ ಸಿಕ್ಕಿರುವ ಜನರಿಗೆ ಲಿಂಡಾ ಜೊತೆಗಿನ ಸಂಬಂಧಕ್ಕೆ ಸಂಪೂರ್ಣ ಸತ್ಯವನ್ನ ಹೇಳುವಂತೆ ಮನವಿ ಮಾಡಿಕೊಂಡಿದ್ದಾರೆ.

ಹೆಂಡತಿ ಕೆನ್ನೆಗೆ ಮುತ್ತಿಡೋದು ಬಿಟ್ಟು, ಬ್ಲೇಡ್‌ನಿಂದ ಕೊಯ್ದ ಕಿರಾತಕ ಗಂಡ

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ? 

ಮೇ 13ಎಂದು ಸೆಕ್ಸ್‌ಗಾಗಿ ಪ್ರಚೋದನೆ ಆರೋಪದಡಿಯಲ್ಲಿ ಲಿಂಡಾಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ವಿಚಾರಣೆ ಲಿಂಡಾ ಹೆಚ್‌ಐವಿ ಸೋಂಕಿತೆ, ಈ ವಿಷಯ ಬಚ್ಚಿಟ್ಟು ಎರಡು ವರ್ಷಗಳಿಂದ ಗ್ರಾಹಕರ ಜೊತೆ ಸಂಪರ್ಕ ನಡೆಸುತ್ತಿರೋದು ಬೆಳಕಿಗೆ ಬಂದಿದೆ. ಹೆಚ್ಐವಿ ಪರೀಕ್ಷೆ ಬಳಿಕ ಲಿಂಡಾಳನ್ನು ದೋಷಿ ಎಂದು ಪರಿಗಣಿಸಲಾಗಿದೆ. ಅಮೆರಿಕಾ ಕಾನೂನಿನ ಪ್ರಕಾರ ಇದು ಮೂರನೇ ಹಂತದ ಅಪರಾಧವಾಗಿದೆ.

Latest Videos
Follow Us:
Download App:
  • android
  • ios