* ತೆಲಂಗಾಣದಲ್ಲಿ  ಪಾರಂಪರಿಕ ಕಟ್ಟಡ ಭಸ್ಮ*  ಬ್ಟಿಟಿಷರ ಕಾಲದ ಕಟ್ಟಡ* ಶಾರ್ಟ್ ಸರ್ಕ್ಯೂಟ್ ನಿಂದ  ಉಂಟಾದ ಬೆಂಕಿ ಅವಘಡ

ಹೈದರಾಬಾದ್(ಜ. 16) ತೆಲಂಗಾಣದ (Telangana) ಸಿಂದರಾಬಾದ್ (Secunderabad) ಕ್ಲಬ್ ಒಂದರಲ್ಲಿ ಅಗ್ನಿ (Fire Accident) ಅವಘಡವಾಗಿದ್ದು 144 ವರ್ಷ ಹಳೆಯ ಕಟ್ಟಡ ಸುಟ್ಟು ಭಸ್ಮವಾಗಿದೆ. ಪಾರಂಪರಿಕ ಕಟ್ಟಡ ಮುಂಜಾನೆ ವೇಳೆ ಬೆಂಕಿ ಜ್ವಾಲೆಗೆ ಆಹುತಿಯಾಗಿದೆ.

ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಬಂದಿತು. ಬೆಂಕಿ ಕೆನ್ನಾಲಿಗೆಯನ್ನು ನಂದಿಸಲು ಮೂರರಿಂದ ನಾಲ್ಕು ಗಂಟೆ ಅವಧಿ ಹಿಡಿಯಿತು. ಆದರೆ ಅಷ್ಟರಲ್ಲೇ ಇಡಿ ಕ್ಲಬ್ ಸುಟ್ಟು ಬೂದಿಯಾಗಿತ್ತು.

ಮಕರ ಸಂಕ್ರಾಂತಿ ಹಬ್ಬದ ಕಾರಣಕ್ಕೆ ಕ್ಲಬ್ ನ್ನು ಶನಿವಾರದಿಂದ ಬಂದ್ ಮಾಡಲಾಗಿತ್ತು. ಅಗ್ನಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣವಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಬೆಂಕಿಯ ಪರಿಣಾಮ ಒಳಗಿನಿಂದಲೇ ಹಲವಾರು ಸಿಲಿಂಡರ್ ಗಳು ಸ್ಫೋಟಗೊಂಡಿವೆ. 1878 ರಲ್ಲಿ ಬ್ರಿಟಿಷರು ಈ ಕ್ಲಬ್ ನಿರ್ಮಿಸಿದ್ದರು. ಸಿಕಂದರಾಬಾದ್ ನ ಪಾರಂಪರಿಕ ಕಟ್ಟಡದಲ್ಲಿ ಒಂದು ಎಂದು ಹೆಸರು ಮಾಡಿತ್ತು.

ಈ ಬಗ್ಗೆ ಹಚ್ಚಿನ ಮಾಹಿತಿ ನೀಡಿರುವ ಸಾಮಾಜಿಕ ಕಾರ್ಯಕರ್ತೆ, ಇಂಡಿಯನ್ ನ್ಯಾಶನಲ್ ಟ್ರಸ್ಟ್ ಫಾರ್ ಆರ್ಟ್ ಆಂಡ್ ಕಲ್ಚರಲ್ ಹೆರಿಟೇಜ್ ಸಂಚಾಲಕಿ ಅನುರಾಧಾ ರೆಡ್ಡಿ, ನಾನು ವಾಸ ಮಾಡುವ ಸ್ಥಳದಿಂದ ಇದು ಬಹಳ ಹತ್ತಿರದಲ್ಲೇ ಇದೆ. ದೊಡ್ಡ ಶಬ್ದ ಕೇಳಿಸಿದ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೆ ಎಂದರು.

ಸಂಗೀತ ಉಪಕರಣಕ್ಕೆ ಬೆಂಕಿ ಇಟ್ಟ ತಾಲಿಬಾನ್‌... ಅಳುತ್ತಾ ನಿಂತ ಸಂಗೀತಗಾರ

ಒಂಚೂರು ಇತಿಹಾಸ: ಈ ಕ್ಲಬ್ ಗೆ 2017 ರಲ್ಲಿ ಹೈದರಾಬಾದ್ ಮೆಟ್ರೋಪಾಲಿಟಿನ್ ಡೆವಲಪ್ ಮೆಂಟ್ ಅಥಾರಿಟಿ ಪಾರಂಪರಿಕ ಸ್ಥಾನಮಾನ ನೀಡಿತ್ತು. ಮಿಲಿಟರಿ ಅಧಿಕಾರಿಗಳು, ರಾಜತಾಂತ್ರಿಕರು, ಹಿರಿಯ ಪೊಲೀಸ್ ಅಧಿಕಾರಿಗಳು, ವಿಜ್ಞಾನಿಗಳು ಈ ಕ್ಲಬ್ ಸದಸ್ಯರಾಗಿದ್ದಾರೆ.

ಬೆಳಿಗ್ಗೆ 3.15 ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎನ್ನುವ ಮಾಹಿತಿ ನಮಗೆ ಸಿಕ್ಕಿತು. ತಕ್ಷಣವೇ ಸಿಬ್ಬಂದಿ ದೌಡಾಯಿಸಿದರು. ಏಳು ಅಗ್ನಿಶಾಮಕ ವಾಹನಗಳನ್ನು ಕಳುಹಿಸಿಕೊಡಲಾಯಿತು. ಛಾವಣಿ ಸೇರಿದಂತೆ ಪೀಠೋಪಕರಣಗಳು ಮರದಿಂದ ಮಾಡಿದ್ದಾದ್ದರಿಂದ ಬೆಂಕಿ ಕ್ಷಣಮಾತ್ರದಲ್ಲಿ ಆವರಿಸಿಕೊಂಡಿತ್ತು ಎಂದು ಅಗ್ನಿಶಾಮಕ ದಳದ ಅಧಿಕಾರಿ ಮಧುಸೂದನ್ ರಾವ್ ತಿಳಿಸಿದ್ದಾರೆ.

ಹೈದರಾಬಾದ್ ನಿಜಾಮರಿಗೆ ಈ ಕ್ಲಬ್ ಅಂತ್ಯಂತ ಆಪ್ತವಾಗಿತ್ತು. ನಿಜಾಮನ ಪ್ರಧಾನಿಯಾಗಿದ್ದ ಮೀರ್ ತುರಾಬ್ ಬಹಳ ಕಾಲವನ್ನು ಇಲ್ಲಿಯೇ ಕಳೆದಿದ್ದರು. ಬ್ರಿಟಿಷರು ಈ ಕ್ಲಬ್‌ಗೆ ಹೊಸ ರೂಪ ನೀಡಿದ್ದರು. ಸ್ವಾತಂತ್ರ್ಯ ಸಿಗುವವರೆಗೂ ಈ ಕ್ಲಬ್ ಗೆ ಕೇವಲ ಬ್ರಿಟಿಷರು ಮಾತ್ರ ಸದಸ್ಯರಾಗುತ್ತಿದ್ದರು. ನಂತರ ಭಾರತೀಯರಿಗೆ ಅವಕಾಶ ಸಿಕ್ಕಿತು. ಅಗ್ನಿ ಆಕಸ್ಮಿಕಕ್ಕೆ ಒಂದು ಪಾರಂಪರಿಕ ಕಟ್ಟಡವನ್ನು ಕಳೆದುಕೊಂಡಂತೆ ಆಗಿದೆ. ಎಂಟು ಸಾವಿರಕ್ಕೂ ಅಧಿಕ ಮಂದಿ ಸದಸ್ಯರಿದ್ದಾರೆ. 

ನಿರಾಣಿ ಕಾರ್ಖಾನೆಯಲ್ಲಿ ಬೆಂಕಿ: ಸಚಿವ ನಿರಾಣಿ ಒಡೆತನದ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಆಕಸ್ಮಿಕವಾಗಿ ಮೂವರು ಕಾರ್ಮಿಕರಿಗೆ ಬೆಂಕಿ ತಗುಲಿತ್ತು. ಬೆಂಕಿ ಹೊತ್ತಿದ್ದರೂ ಕಾರ್ಮಿಕ ಜೀವ ಭಯದಿಂದ ಕಾರ್ಖಾನೆಯಲ್ಲಿ ನೀರಿಗಾಗಿ ಓಡಾಡಿದದ್ದರು.. ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿಯ ಕೇದಾರನಾಥ ಸಕ್ಕರೆ ಕಾರ್ಖಾನೆಯಲ್ಲಿ ಈ ದುರಂತ ನಡೆದಿತ್ತು.

ಆಕಸ್ಮಿಕವಾಗಿ ಮೂವರು ಕಾರ್ಮಿಕರಿಗೆ ಬೆಂಕಿ ಹೊತ್ತಿಕೊಂಡಿದ್ದು ಬೆಂಕಿಯ ಜ್ವಾಲೆಯಲ್ಲಿಯೇ ಓಡಾಡಿದ ಕಾರ್ಮಿಕರು ನಂತರ ಕಾರ್ಖಾನೆಯಲ್ಲಿದ್ದ ಕೊಳವೆ ಬಾವಿಯ ನೀರಿಗೆ ಹೋಗಿ ಬೆಂಕಿ ನಂದಿಸಿಕೊಂಡಿದ್ದಾರೆ. ಒಬ್ಬ ಕಾರ್ಮಿಕನ ಸ್ಥಿತಿ ಗಂಭೀರವಾಗಿದ್ದು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸಾಲ ಸಿಗದ ಸಿಟ್ಟು: ಸಾಲ(Bank Loan) ಸಿಗುತ್ತಿಲ್ಲವೆಂದು ಬೇಸರಗೊಂಡ ವ್ಯಕ್ತಿಯೊಬ್ಬ ಕೆನರಾ ಬ್ಯಾಂಕ್ ಶಾಖೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಜ.08 ರಂದು ಹಾವೇರಿ(Haveri) ಜಿಲ್ಲೆ ಬ್ಯಾಡಗಿ ತಾಲೂಕಿನ ಹೆಡಿಗ್ಗೊಂಡ ಗ್ರಾಮದಲ್ಲಿ ನಡೆದಿತ್ತು. 

ರಟ್ಟಿಹಳ್ಳಿ ನಿವಾಸಿ ವಸೀಮ್ ಮುಲ್ಲಾ (33) ಬ್ಯಾಂಕ್ ಗೆ ಬೆಂಕಿಯಿಟ್ಟ ಆರೋಪಿ. ಬೆಂಕಿ ಕೆನ್ನಾಲಿಗೆಗೆ ಬ್ಯಾಂಕ್ ನ ಬಹುತೇಕ ಭಾಗ ಸುಟ್ಟು ಕರಕಲಾಗಿದ್ದು, ಕಾಗದ ಪತ್ರಗಳು ಬೆಂಕಿಗಾಹುತಿಯಾಗಿವೆ. ಬ್ಯಾಂಕಿಗೆ(Bank) ಬೆಂಕಿ(Fire) ಹಚ್ಚಿ ಪರಾರಿಯಾಗುತ್ತಿದ್ದ ಆರೋಪಿಗೆ ಧರ್ಮದೇಟು ನೀಡಿದ ಗ್ರಾಮಸ್ಥರು, ಪೊಲೀಸರಿಗೆ ಒಪ್ಪಿಸಿದ್ದಾರೆ.ಬ್ಯಾಂಕ್‌ನಲ್ಲಿದ್ದ ಕಾಗದ ಪತ್ರಗಳು, ಕಂಪ್ಯೂಟರ್ ಸುಟ್ಡಿವೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಕಾಗಿನೆಲೆ ಪೊಲೀಸರು ಆರೋಪಿಯ ವಿಚಾರಣೆ ನಡೆಸಿದ್ದರು. 

Scroll to load tweet…