ಉಡುಪಿಯ ಪ್ರತಿಷ್ಠಿತ ಕಾಲೇಜಿನ ಶೌಚಗೃಹದಲ್ಲಿ ಹಿಂದೂ ವಿದ್ಯಾರ್ಥಿನಿಯರ ಅರೆನಗ್ನ ವೀಡಿಯೋ ಚಿತ್ರೀಕರಣ ಮಾಡಿದ ಮುಸ್ಲಿಂ ವಿದ್ಯಾರ್ಥಿನಿಯರ ಮೇಲೆ ಕೊನೆಗೂ ಉಡುಪಿ ಜಿಲ್ಲಾ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. 

ಉಡುಪಿ (ಜು.26): ಕಳೆದೊಂದು ವಾರದ ಹಿಂದೆ ಉಡುಪಿಯ ಪ್ರತಿಷ್ಠಿತ ಕಾಲೇಜಿನ ಶೌಚಗೃಹದಲ್ಲಿ ಹಿಂದೂ ವಿದ್ಯಾರ್ಥಿನಿಯರ ಅರೆನಗ್ನ ವೀಡಿಯೋ ಚಿತ್ರೀಕರಣ ಮಾಡಿದ ಮುಸ್ಲಿಂ ವಿದ್ಯಾರ್ಥಿನಿಯರ ಮೇಲೆ ಕೊನೆಗೂ ಉಡುಪಿ ಜಿಲ್ಲಾ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. 

ಉಡುಪಿಯ ನೇತ್ರಜ್ಯೋತಿ ಕಾಲೇಜಿನಲ್ಲಿ ಮಹಿಳಾ ಶೌಚಗೃಹದಲ್ಲಿ ಹಿಂದೂ ಹುಡುಗಿಯರ ಅರೆನಗ್ನ ವೀಡಿಯೋಗಳನ್ನು ಮಾಡಿ ಮುಸ್ಲಿಂ ಗುಂಪುಗಳಿಗೆ ಹರಿದು ಬಿಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ವಿಚಾರವನ್ನು ಕಾಲೇಜು ಆಡಳಿತ ಮಂಡಳಿಯು ವಿದ್ಯಾರ್ಥಿಗಳನ್ನು ವಿಚಾರಣೆ ಮಾಡಿ ವಿಡಿಯೋ ಡಿಲೀಟ್‌ ಆಗಿದೆಯೆಂದು ಪ್ರಕರಣವನ್ನು ಮುಚ್ಚಿಹಾಕಿದ್ದರು. ಆದರೆ, ಈ ಬಗ್ಗೆ ಜನಾಕ್ರೋಶ ಹೆಚ್ಚಾದ ಹಿನ್ನೆಲೆ ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಸುಮೋಟೋ ಕೇಸ್‌ ದಾಖಲಿಸಿಕೊಳ್ಳಲಾಗಿದೆ. 

ಉಡುಪಿ ಕಾಲೇಜು ಶೌಚಗೃಹದಲ್ಲಿ ಹಿಂದೂ ಯುವತಿಯರ ವೀಡಿಯೋ ಸೆರೆ: ಪ್ರಶ್ನಿಸಿದವರ ಮೇಲೆ ಪೊಲೀಸ್‌ ವಿಚಾರಣೆ

ಮೂವರು ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್‌: ವೀಡಿಯೋ ಮಾಡಿದ ಮುಸ್ಲಿಂ ಸಮುದಾಯದ ಮೂವರು ವಿದ್ಯಾರ್ಥಿಗಳಾದ ಅಲಿಮತುಲ್ ಶೈಫಾ, ಶಬಾನಾಜ್ ಮತ್ತು ಆಲಿಯಾ ವಿರುದ್ಧ ಹಾಗೂ ನೇತ್ರಜ್ಯೋತಿ ಆಡಳಿತ ಮಂಡಳಿಯ ವಿರುದ್ಧ ಸಾಕ್ಷ್ಯನಾಶ ಆರೋಪದಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಸೆಕ್ಷನ್‌ 509, 204, 175,34, ಸೇರಿ ವಿವಿಧ ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. ಈ ಮೂಲಕ ರಾಜ್ಯಾದ್ಯಂತ ಬಿಜೆಪಿ ನಾಯಕರು, ಹಲವು ಹಿಂದೂ ಸಂಘಟನೆಗಳು, ಮಹಿಳೆಯರಿಂದ ಭಾರಿ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ವಿಚಾರಣೆಯನ್ನು ಆರಂಭಿಸಲಿದ್ದಾರೆ. 

ರಾಷ್ಟ್ರೀಯ ಮಹಿಳಾ ಆಯೋಗದಿಂದಲೂ ತನಿಖೆ: ಉಡುಪಿ ಕಾಲೇಜಿನ ಟಾಯ್ಲೆಟ್‌ನಲ್ಲಿ ನಡೆದ ವೀಡಿಯೋ ಚಿತ್ರೀಕರಣದ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಹಿಳಾ‌ ಆಯೋಗದಿಂದ ತನಿಖೆ ಮಾಡಲು ಮುಂದಾಗಿದೆ. ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ‌ವೀಡಿಯೋ ಚಿತ್ರೀಕರಣ ಪ್ರಕರಣದ ಬಗ್ಗೆ ಈಗ ಉಡುಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಆಗಮಿಸಲಿದೆ. ರಾಷ್ಟ್ರೀಯ ಮಹಿಳಾ ಆಯೋಗದ ದಕ್ಷಿಣ ಭಾರತ ಸದಸ್ಯೆ ಖುಷ್ಬು ಸುಂದರ್ ನೇತೃತ್ವದಲ್ಲಿ ತನಿಖೆ ಮಾಡಲಾಗುತ್ತದೆ. ಖುಷ್ಬು ಸುಂದರ್ ಅವರು ಉಡುಪಿಗೆ ಆಗಮಿಸಿ ವಿಚಾರಣೆ ನಡೆಸಲಿದ್ದಾರೆ. ಈ ಬಗ್ಗೆ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್ ಮಾಹಿತಿ ನೀಡಿದ್ದಾರೆ. 

ಉಡುಪಿ ಕಾಲೇಜು ಶೌಚಗೃಹದಲ್ಲಿ ಹಿಂದೂ ಹುಡ್ಗೀರ ಚಿತ್ರೀಕರಣ: ಮುಸ್ಲಿಂ ಯುವತಿಯರ ಕೃತ್ಯ ಒಪ್ಪಿಕೊಂಡ ಕಾಲೇಜು

ಯುವತಿಯರಿಗೆ ಬ್ಲ್ಯಾಕ್‌ಮೇಲ್‌ ಮಾಡಿ ದುರ್ಬಳಕೆ ಸಾಧ್ಯತೆ:
ಯುವತಿಯರ ವೀಡಿಯೋ ರೆಕಾರ್ಡ್‌ ಮಾಡಿದ್ದನ್ನು ಫೋನಿನಿಂದ ಡಿಲೀಟ್‌ ಆಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ಈ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಡಿಲೀಟ್‌ ಮಾಡಿದ ಫೊರೆನ್ಸಿಕ್‌ ತನಿಖೆಯಾಗಿಲ್ಲ. ಕೂಡಲೇ ಫೊರೆನ್ಸಿಕ್‌ ತನಿಖೆ ಮಾಡಿ ಪೊಲೀಸರು ಸ್ಪಷ್ಟಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಯಾವ ಸಂದರ್ಭದಲ್ಲಿ ಯುವತಿಯರನ್ನು ಬ್ಲ್ಯಾಕ್‌ ಮೇಲ್‌ ಮಾಡಿ ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಊಹಿಸಲೂ ಸಾಧ್ಯವಿಲ್ಲ. 
- ರಶ್ಮಿ ಸಮಂತ್‌ ಭಟ್‌, ಸಾಮಾಜಿಕ ಹೋರಾಟಗಾರ್ತಿ

ಉಡುಪಿ ಕಾಲೇಜು ಘಟನೆ ಚಿಕ್ಕದು ಎಂದ ಗೃಹ ಸಚಿವ ಪರಮೇಶ್ವರ್‌: ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಅವರು, ಉಡುಪಿ ಘಟನೆ ಬಹಳ ಸಣ್ಣದು. ಅದನ್ನು ರಾಜಕೀಯ ಬಣ್ಣ ಕೊಡುವುದು ಯಾಕೆ? ಸಣ್ಣ ಘಟನೆಗೆ ರಾಜಕೀಯ ಬಣ್ಣ ಕೊಡುವುದು ಯಾಕೆ? ಕಾಲೇಜಿನ ಪ್ರಿನ್ಸಿಪಾಲ್ ಇದಾರೆ ಕಾಲೇಜು ಸಮಿತಿ ಇದೆ. ದೂರು ಏನೂ ದಾಖಲಾಗಿಲ್ಲ. ರಾಜಕೀಯ ಮಾಡುವುದನ್ನು ಬಿಜೆಪಿಯವರು ಮೊದಲು ನಿಲ್ಲಿಸಬೇಕು. ಹಿಂದೆಲ್ಲ ಕಾಲೇಜುಗಳಲ್ಲಿ ಇದೆಲ್ಲ ನಡೆಯುತ್ತಿರಲಿಲ್ವಾ? ಬೇರೆ ಬೇರೆ ಕೆಲಸಗಳೆಲ್ಲ ಇದೆ. ಇಂಥ ಸಣ್ಣ ಸಣ್ಣ ರಾಜಕೀಯ ಮಾಡ್ತಿದ್ದಾರೆ ಅದನ್ನು ಬಿಜೆಪಿಯವರು ಬಿಡಬೇಕು ಎಂದು ಹೇಳಿದ್ದಾರೆ.

Scroll to load tweet…