Asianet Suvarna News Asianet Suvarna News

'ಕೊಲೆಮಾಡಿದ್ದೀವಿ ಸಾರ್ ಬಾಡಿ ಆಟೋದಲ್ಲಿದೆ'  ಬೆಂಗ್ಳೂರಲ್ಲೊಂದು ಘೋರ ಹತ್ಯೆ!

* ಕೊಲೆಮಾಡಿದ್ದೀವಿ ಸಾರ್ ಬಾಡಿ ಆಟೋದಲ್ಲಿದೆ'
* ಬೆಂಗಳೂರಿನಲ್ಲಿ ಒಂದು ಬೆಚ್ಚಿ ಬೀಳಿಸುವ ಮರ್ಡರ್
* ಅಕ್ಕನ ಸಂಸಾರ ಹಾಳು ಮಾಡಿದ್ದ ಎಂಬ ಕಾರಣಕ್ಕೆ ಕೊಲೆ

4 men bludgeon youth to death over his relationship take body to police station mah
Author
Bengaluru, First Published Oct 17, 2021, 10:22 PM IST
  • Facebook
  • Twitter
  • Whatsapp

ಬೆಂಗಳೂರು(ಅ. 17)  ಪ್ರೇಯಸಿಯನ್ನ (Lover) ಕರೆದೊಯ್ಯಲು ಬಂದ ಪ್ರಿಯಕರ ಸಾವಿನ ಮನೆ ಸೇರಿದ್ದಾನೆ. ಕೊಲೆಯಾದವನ (Murder) ಮೃತ ದೇಹವನ್ನ ಠಾಣೆಗೆ ತಂದ ಆರೋಪಿಗಳು ಠಾಣೆಗೆ ಬಂದು 'ಕೊಲೆಮಾಡಿದ್ದೀವಿ ಸಾರ್ ಬಾಡಿ ಆಟೋದಲ್ಲಿದೆ' ಎಂದಿದ್ದಾರೆ.

ನನ್ನ ಅಕ್ಕ ಸುಧಾರಾಣಿ ಸಂಸಾರ ಹಾಳು ಮಾಡಿದ್ದ. ಅದಕ್ಕೆ ಅವನ ಕಥೆ ಮುಗಿಸಿದ್ವಿ ಸರ್ ಎಂದಿದ್ದಾರೆ. ಕೊಲೆಯಾದ ಭಾಸ್ಕರ್ ಜೊತೆಗಿನ ಅಕ್ರಮ ಸಂಬಂಧವೇ (Illicit Relationship
)ಸುಧಾರಾಣಿ ಸಂಸಾರ ಬಿರುಕು ಬಿಡಲು ಕಾರಣವಾಗಿತ್ತು. 15 ದಿನಗಳ ಹಿಂದೆ ತಾಯಿ ಮನೆಗೆ ಸುಧಾರಾಣಿ ಬಂದಿದ್ದರು. ಗಂಡನ ಜತೆ ಜಗಳವಾಡಿಕೊಂಡಿದ್ದಳು.

ಮಾಲೂರಿನಿಂದ (Malur) ಬೆಂಗಳೂರಿನ(Bengaluru) ತಾಯಿಮನೆಗೆ ಸುಧಾರಾಣಿ ಬಂದಿದ್ದಳು. ಫೋನ್ ನಲ್ಲಿ ನಿರಂತರ ಸಂಪರ್ಕ ಹೊಂದಿದ್ದ ಭಾಸ್ಕರ್ ಹಾಗೂ ಸುಧಾರಾಣಿ ಮಾತನಾಡುತ್ತಿದ್ದರು ತಾಯಿ ಮನೆಯಿಂದ ಸುಧಾರಾಣಿಯನ್ನ ಕರೆದೊಯ್ಯಲು ಭಾಸ್ಕರ್ ಮುಂದಾಗಿದ್ದ.  ಹೊಸೂರಿನಲ್ಲೆ ಬೇರೊಂದು ಮನೆ ಮಾಡಿದ್ದೀನಿ ಅಲ್ಲೆ ಇದ್ದುಬಿಡೋಣ ಎಂದು ಹೇಳಿದ್ದ. ಹೀಗಾಗಿ ಸುಧಾರಾಣಿಯನ್ನ ಕರೆದೊಯ್ಯಲು ಬಂದಿದ್ದ.

ಪ್ರಕರಣದ ಬಗ್ಗೆ  ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟಿಲ್ ಹೇಳಿಕೆ ನೀಡಿದ್ದು, ನಿನ್ನೆ ಮಧ್ಯರಾತ್ರಿ ನಂತರ ಎಪಿ ನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಮೃತ ವ್ಯಕ್ತಿ ಹೊಸೂರು ಬಳಿಯ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದ. ಅಲ್ಲಿ ಒಂದು ಮಹಿಳೆಯ ಜೊತೆಗೆ ಪರಿಚಯ ಆಗಿತ್ತು. ಅಲ್ಲಿ ಆಕೆಯ ಜೊತೆಗೆ ಸ್ನೇಹ ಬೆಳೆಯುತ್ತೆ. ನಂತರ ಮಹಿಳೆ ತನ್ನ ಮನೆ ಬಿಟ್ಟು ತಾಯಿ ಮನೆಯಲ್ಲಿ ಇದ್ದಳು.  ಆಟೋದಲ್ಲಿ ಕರೆದುಕೊಂಡು ಹೋಗ್ತಿದ್ದ. ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಮಹಿಳೆ ತಮ್ಮ ಮುನಿರಾಜು ಆಟೋವನ್ನು ಅಡ್ಡಹಾಕಿದ್ದಾನೆ.

ಕೆಬ್ಬೆಹಾಳ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಆ ಮಹಿಳೆ ಕೂಡ ಹೊಸೂರು(Hosur) ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದಳು ಎಂದು ವಿವರ ನೀಡಿದ್ದಾರೆ.

 

 

Follow Us:
Download App:
  • android
  • ios