Tumakuru: ಮಹಿಳಾ ಪೋಷಕರನ್ನು ಮಂಚಕ್ಕೆ ಕರೆದ ಕಾಮುಕ ಶಿಕ್ಷಕ ಸಸ್ಪೆಂಡ್
ಸಹಾಯ ಮಾಡುವ ನೆಪದಲ್ಲಿ ಮಕ್ಕಳ ತಾಯಂದಿರ ಪೋನ್ ನಂಬರ್ ಪಡೆದು ಆಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ ಕಾಮುಕ ಶಿಕ್ಷಕನನ್ನು ಅಮಾನತು ಮಾಡಲಾಗಿದೆ.
ತುಮಕೂರು (ಜೂ.29): ಸಹಾಯ ಮಾಡುವ ನೆಪದಲ್ಲಿ ಮಕ್ಕಳ ತಾಯಂದಿರ ಪೋನ್ ನಂಬರ್ ಪಡೆದು ಆಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ ಕಾಮುಕ ಶಿಕ್ಷಕನನ್ನು ಅಮಾನತು ಮಾಡಲಾಗಿದೆ. ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ದೊಡ್ಡಹಟ್ಟಿಯಲ್ಲಿ ಘಟನೆ ನಡೆದಿದೆ. ಇಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯ ಮುಖ್ಯ ಶಿಕ್ಷಕ ಸುರೇಶ್ ಅಮಾನತ್ತಾದ ಮೇಷ್ಟ್ರು. ಶಾಲಾ ದಾಖಲೆಗಳನ್ನು ಪಡೆದುಕೊಳ್ಳಲು ಬರುತ್ತಿದ್ದ ವಿದ್ಯಾರ್ಥಿಗಳ ತಾಯಂದಿರ ಜೊತೆ ಕೂಡ ಶಿಕ್ಷಕ ಸುರೇಶ್ ಮೆಸೇಜ್ ಮಾಡುತ್ತಿದ್ದ.
ಇದೀಗ ಶಿಕ್ಷಕನ ಈ ಮೆಸೇಜ್‌ಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿದೆ. ಜೊತೆಗೆ ಗ್ರಾಮದಲ್ಲಿ ಯುವಕರಿಗೆ ಮಧ್ಯಪಾನ ಮಾಡಿಸಿ ರಾಜಕೀಯ ಮಾಡುತ್ತಿದ್ದ ಎಂಬ ಗಂಭೀರ ಆರೋಪ ಕೂಡ ಕೇಳಿ ಬಂದಿದೆ. ಹೀಗೆ ಶಾಲೆಗೆ ಸರಿಯಾಗಿ ಹಾಜರಾಗದೆ ಕರ್ತವ್ಯ ಲೋಪ ಎಸಗಿದ ಸುರೇಶ್ ಬಗ್ಗೆ ಗ್ರಾಮಸ್ಥರು ಮಧುಗಿರಿ ಡಿಡಿಪಿಐಗೆ ದೂರು ನೀಡಿದ್ದರು, ದೂರು ಪರಿಶೀಲಿಸಿದ ಡಿಡಿಪಿಐ ರೇವಣ್ಣ ಸಿದ್ದಪ್ಪ ಅಮಾನತು ಆದೇಶ ಹೊರಡಿಸಿದ್ದಾರೆ.
ಹೊರ ರಾಜ್ಯದ ವಾಹನ ತಡೆದು ಹಣ ಸುಲಿಗೆ: ಎಎಸ್‌ಐ ಅಮಾನತು
ಮಹಿಳೆಯ ಮೊಬೈಲಿಗೆ ಅಶ್ಲೀಲ ವಿಡಿಯೋ ರವಾನಿಸಿದವನ ಬಂಧನ: ಮಹಿಳೆಯ ಮೊಬೈಲಿಗೆ ಅಶ್ಲೀಲ ವಿಡಿಯೋ ರವಾನಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ರಿಪ್ಪನ್ ಪೇಟೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಜೋಯ್ದ ತಾಲೂಕಿನ ಜಳಕಟ್ಟಿ ದೇವುಳ್ಳಿ ಗ್ರಾಮದ ಬಾಬು ಭೈರು ಗವಳಿ ( 23) ಬಂಧಿತ ಆರೋಪಿಯಾಗಿದ್ದು, ಈತ ರಿಪ್ಪನ್‌ಪೇಟೆಯ ಗವಟೂರು ಬಡಾವಣೆಯ ಮಹಿಳೆಗೆ ಮೊಬೈಲ್‌ನಿಂದ ಅಶ್ಲೀಲ ವಿಡಿಯೋ ರವಾನೆ ಮಾಡಿದ್ದ. ಮೇ 10 ರಿಂದ ಸತತವಾಗಿ ಎರಡು ನಂಬರ್ ಮೂಲಕ ಅಶ್ಲೀಲ ವಿಡಿಯೋ ಚಿತ್ರಗಳನ್ನು ರವಾನಿಸಿದ್ದ.
ಕೇಂದ್ರ ಸಚಿವ ಭಗವಂತ ಖೂಬಾಗೆ ಕರೆ ಮಾಡಿ ಗೊಬ್ಬರ ಕೇಳಿದ್ದ ಶಿಕ್ಷಕ ಸಸ್ಪೆಂಡ್
ಅಲ್ಲದೇ ಮೇಲಿಂದ ಮೇಲೆ ಫೋನ್ ಮಾಡಿ ಮಾನಸಿಕ ಕಿರುಕುಳ ಕೂಡಾ ನೀಡುತ್ತಿದ್ದ. ಈ ಬಗ್ಗೆ ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಆರೋಪಿ ಬಾಬು ಭೈರು ಗವಳಿ ತನ್ನ ಹೆಸರಿನಲ್ಲಿ ಸಿಮ್ ಖರೀದಿಸಿರಲಿಲ್ಲ. ಇದರಿಂದ ಪೊಲೀಸರಿಗೆ ಆರೋಪಿ ಪತ್ತೆ ಮಾಡುವುದು ಸಮಸ್ಯೆಯಾಗಿತ್ತು. ಆದರೆ ಸಿಮ್ ಖರೀದಿಗೆ ಬಳಸಿದ್ದ ಆಧಾರ್ ನಂಬರ್ ಗಮನಿಸಿದಾಗ ಅದು ಬಾಬು ಭೈರು ಗಾವಳಿ ತಾಯಿಯದಾಗಿತ್ತು. ಹಾಗಾಗಿ ಆಕೆಯನ್ನು ವಿಚಾರಣೆ ನಡೆಸಿದಾಗ ಮಗನ ಬಳಿ ಮೊಬೈಲ್ ಇರುವ ಮಾಹಿತಿ ನೀಡಿದ್ದಳು. ನಂತ ಆರೋಪಿಯನ್ನು ಪೊಲೀಸರು ತನಿಖೆಗೆ ಒಳಪಡಿಸಿದಾಗ ಅಶ್ಲೀಲ ವಿಡಿಯೋ ಕಳುಹಿಸಿದ್ದಾಗಿ ಸತ್ಯಾಂಶ ಒಪ್ಪಿಕೊಂಡ.