Asianet Suvarna News Asianet Suvarna News
breaking news image

ಹಾವೇರಿ ದುರಂತದ ಕಣ್ಣೀರ ಕತೆ, ವಾಹನ ಪೂಜೆ ಮಾಡಿಸಿ ಮರಳುವಾಗ ಭೀಕರ ಅಪಘಾತ!

 ವಾಹನ  ಪೂಜೆ ಮಾಡಿಸಿ ಮರಳುವಾಗ ಈ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡ ಅಜ್ಜಿ ಹಾಗೂ ಮೊಮ್ಮಗಳ ಪರಿಸ್ಥಿತಿ ಗಂಭೀರವಾಗಿದೆ.
 

Haveri Road Accident tragedy 13 killed 4 injured after TT vehicle rams to truck at National Highway ckm
Author
First Published Jun 28, 2024, 9:43 AM IST

ಹಾವೇರಿ(ಜೂ.28) ಹಾವೇರಿ ದುರಂತ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಬೆಳಗಿನ ಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ 17 ಮಂದಿ ಪೈಕಿ 13 ಮಂದಿ ಮೃತಪಟ್ಟಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೊಸ ವಾಹನ ಖರೀದಿಸಿ ಪೂಜೆ ಮಾಡಿ ಮರಳುವಾಗ ಈ ಘಟನೆ ನಡೆದಿದೆ.  ವಾಹನ ಟಿಟಿ ಖರೀದಿಸಿ ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡಿಸಿ ಮರಳುವಾಗ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 17 ಮಂದಿ ಪೈಕಿ 13 ಮಂದಿ ಮೃತಪಟ್ಟಿದ್ದಾರೆ. ಬದುಕುಳಿದ ನಾಲ್ವರ ಪರಿಸ್ಥಿತಿ ಗಂಭೀರವಾಗಿದೆ. 

ಹಾವೇರಿಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಈ ಅಪಘಾತ ನಡೆಸಿದೆ. ಪುಣೆ ಬೆಂಗಳೂರು ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಟಿಟಿ ಡಿಕ್ಕಿಯಾದ ಪರಿಣಾಮ ಅಪಘಾತದ ತೀವ್ರತೆ ಹೆಚ್ಚಾಗಿದೆ. ಮೃತರು ಶಿವಮೊಗ್ಗ ಜಿಲ್ಲೆಯ ಭದ್ರವಾತಿ ತಾಲೂಕಿನ ಹೊಳೆ ಹೊನ್ನೂರಿನವರು ಎಂದು ಗುರುತಿಸಲಾಗಿದೆ. ಹೊಸ ಟಿಟಿ ವಾಹನ ಖರೀದಿಸಿದ ಬಳಿಕ 17 ಮಂದಿ ವಾಹನ ಪೂಜೆ ಹಾಗೂ ದೇವರ ದರ್ಶನಕ್ಕೆ ತೆರಳಿದ್ದರು. ಚಿಂಚೊಳ್ಳಿ ಮಾಯಮ್ಮನ ದೇವಸ್ಥಾನದಲ್ಲಿ ವಾಹನ ಪೂಜೆ ಹಾಗೂ ದೇವರ ದರ್ಶನ ಮಾಡಿ ಮರಳುವಾಗ ಈ ಘಟನೆ ನಡೆದಿದೆ.

ಹಾವೇರಿಯಲ್ಲಿ ಭೀಕರ ಅಪಘಾತ: ನಿಂತಿದ್ದ ಲಾರಿಗೆ ಟಿಟಿ ವಾಹನ ಡಿಕ್ಕಿ, 13 ಜನರ ದುರ್ಮರಣ

ಚಾಲಕ ಆದರ್ಶ್ ಹೊಸ ಟಿಟಿ ವಾಹನ ಖರೀದಿಸಿ ಕುಟುಂಬ ಸಮೇತ ದೇವರ ದರ್ಶನ ಹಾಗೂ ವಾಹನ ಪೂಜೆ ಮಾಡಿಸಲು ತೆರಳಿದ್ದರು.  ನಿನ್ನೆ ಮಹಾರಾಷ್ಟ್ರ ತಿವಾರಿ ಲಕ್ಷ್ಮೀ ಟೆಂಪಲ್ ನಲ್ಲಿ ವಾಹನ ಪೂಜೆ ಮಾಡಿಸಲಾಗಿತ್ತು. ಹಿಂದಿರುವ ವೇಳೆ ಮಾಯಮ್ಮನ ದೇವಸ್ಥಾನಕ್ಕೆ ತೆರಳಿ ದರ್ಶನ್ ಪಡೆಯಲಾಗಿತ್ತು. ಚಾಲಕ ಆದರ್ಶ್ ವಾಹನ ಪೂಜೆ ಫೋಟೋಗಳನ್ನು ವ್ಯಾಟ್ಸ್ಆ್ಯಪ್ ಸ್ಟೇಟಸ್ ಹಾಕಿಕೊಂಡಿದ್ದ.  

ನಾಲ್ವರು ಗಾಯಳುಗಳನ್ನು ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  ಘಟನೆಯಲ್ಲಿ 4 ವರ್ಷದ ಹಾಗೂ 6 ವರ್ಷದ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಒಟ್ಟು 13 ಮಂದಿ ಮೃತಪಟ್ಟಿದ್ದಾರೆ.  ಪರಶುರಾಮ್ (45), ಭಾಗ್ಯ (40), ನಾಗೇಶ್(50), ವಿಶಾಲಾಕ್ಷಿ(50)ಸುಭದ್ರಾ ಭಾಯಿ(65), ಪುಣ್ಯ( 50), ಮಂಜುಳಾ ಭಾಯಿ( 57), ಚಾಲಕ ಆದರ್ಶ್ ( 23), ಮಾನಸಾ( 24), ರೂಪಾ( 40),ಮಂಜುಳಾ( 50) ಮೃತಪಟ್ಟಿದ್ದಾರೆ.

ಟಿಟಿ ಸಂಪೂರ್ಣ ನಜ್ಜು ಗುಜ್ಜಾಗಿದೆ. ಅತೀ ವೇಗದಿಂದ ಬಂದ ಟಿಟಿ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಮುಕ್ಕಾಲು ಭಾಗ ಡಿಡಿ ಲಾರಿಅಡಿಗೆಯಲ್ಲಿ ಜಖಂ ಆಗಿತ್ತು. ಪೊಲೀಸರು ವಾಹನ ಕತ್ತರಿಸಿ ಒಳಗಿದ್ದವರನ್ನು ಹೊರತೆಗೆದಿದ್ದಾರೆ. ಅಷ್ಟೊತ್ತಿಗಾಗಲೇ ಹಲವರು ಮೃತಪಟ್ಟಿದ್ದರು.  

ಚಲಿಸುತ್ತಿರುವ ರೈಲಿನಲ್ಲಿ ಕುಸಿದು ಬಿದ್ದ ಮಿಡಲ್‌ ಬರ್ತ್‌, ಪ್ರಯಾಣಿಕನ ದಾರುಣ ಸಾವು!
 

Latest Videos
Follow Us:
Download App:
  • android
  • ios