ನಿದ್ರೆ ಹಾಳು ಮಾಡಿದ್ದಕ್ಕೆ ಗೆಳೆಯನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರ ಹತ್ಯೆ ಮಾಡಿದ ಪಾಪಿ!
ಮೃತ ವ್ಯಕ್ತಿ ತಿರುಚ್ಚಿಯ ಪಾರ್ತಿಬನ್ ಚೆಂಗಲ್‌ಪೇಟ್‌ನಲ್ಲಿ ವಾಸಿಸುತ್ತಿದ್ದರು ಮತ್ತು ವಿದ್ಯುಚ್ಛಕ್ತಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಮಿಳುನಾಡು ಪೊಲೀಸರು ಮಾಹಿತಿ ನೀಡಿದ್ದಾರೆ.
ಚೆನ್ನೈ (ಏಪ್ರಿಲ್ 26, 2023): ಸವಿ ನಿದ್ರೆಯಲ್ಲಿದ್ದಾಗ ಯಾರಾದ್ರೂ ಎಬ್ಬಿಸಿದ್ರೆ ಎಷ್ಟು ಕೋಪ ಬರುತ್ತಲ್ವಾ. ಇಲ್ಲೊಬ್ಬ ವ್ಯಕ್ತಿ ತನ್ನ ಗೆಳೆಯ ನಿದ್ರೆ ಹಾಳು ಮಾಡಿದ ಅಂತ ಆತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಇಬ್ಬರೂ ಮಲಗಿದ್ದಾಗ ಆರೋಪಿ ಮೇಲೆ ಕಾಲು ಇಟ್ಟಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ 45 ವರ್ಷದ ಸ್ನೇಹಿತನನ್ನು ಕಲ್ಲಿನಿಂದ ಆತನ ತಲೆಯ ಮೇಲೆ ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸೋಮವಾರ ತಮಿಳುನಾಡಿನಲ್ಲಿ ನಡೆದಿದೆ.
ಮೃತ ವ್ಯಕ್ತಿ ತಿರುಚ್ಚಿಯ ಪಾರ್ತಿಬನ್ ಚೆಂಗಲ್‌ಪೇಟ್‌ನಲ್ಲಿ ವಾಸಿಸುತ್ತಿದ್ದರು ಮತ್ತು ವಿದ್ಯುಚ್ಛಕ್ತಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಮಿಳುನಾಡು ಪೊಲೀಸರು ಮಾಹಿತಿ ನೀಡಿದ್ದಾರೆ. ಭಾನುವಾರ ರಾತ್ರಿ ಕೆಲಸ ಮುಗಿಸಿಕೊಂಡು ಪಾರ್ಥಸಾರಥಿ ಬೀದಿಯಲ್ಲಿರುವ ರೆಹಮಾನ್ ಶೆರೀಫ್ ಮಾಲೀಕತ್ವದ ಮನೆಯ ವರಾಂಡದಲ್ಲಿ ಮದ್ಯ ಸೇವಿಸಿ ಮಲಗಿದ್ದರು. ಆದರೆ, ಸೋಮವಾರ ಬೆಳಗ್ಗೆ ತಲೆಗೆ ಗಾಯಗಳಾಗಿ ಅವರು ಶವವಾಗಿ ಪತ್ತೆಯಾಗಿದ್ದರು ಎಂದೂ ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: ಗ್ಯಾಂಗ್‌ಸ್ಟರ್‌ನ ಮತ್ತಷ್ಟು ರಹಸ್ಯ ಬಯಲು: ಅತೀಕ್ ಕಚೇರಿಯಲ್ಲಿ ರಕ್ತಸಿಕ್ತ ಚಾಕು, ರಕ್ತದ ಕಲೆಯ ದುಪ್ಪಟ್ಟಾ ಪತ್ತೆ
ರೆಹಮಾನ್ ಶೆರೀಫ್ ಚೆಂಗಲ್ ಪೇಟೆ ಟೌನ್ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ನಂತರ ತಂಡವು ಸ್ಥಳಕ್ಕೆ ತಲುಪಿದೆ. ಬಳಿಕ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ ನಂತರ, ಪೊಲೀಸರು ಮೃತ ವ್ಯಕ್ತಿಯ ಸ್ನೇಹಿತ ಪ್ರಭಾಕರನನ್ನು ಈ ಬಗ್ಗೆ ಪ್ರಶ್ನಿಸಿದ್ದಾರೆ. ಅವರು ಸಾಮಾನ್ಯವಾಗಿ ಸ್ವಲ್ಪ ಹೊತ್ತು ಹರಟೆ ಹೊಡೆದ ನಂತರ ವರಾಂಡಾದಲ್ಲಿ ಅವರ ಪಕ್ಕದಲ್ಲಿ ಮಲಗುತ್ತಿದ್ದರು ಎಂಬುದು ಗೊತ್ತಾದ ಬಳಿಕ ಪೊಲೀಸರು ಅವರನ್ನು ಪ್ರಶ್ನೆ ಮಾಡಿದ್ದಾರೆ.
ಕುಡಿದ ಅಮಲಿನಲ್ಲಿದ್ದ ಪ್ರಭಾಕರನ್ ಪೊಲೀಸರಿಗೆ ತಾನು ಕಲ್ಲು ಎತ್ತಿ ಹಾಕಿದ್ದು ನಿಜವೆಂದು ಒಪ್ಪಿಕೊಂಡಿದ್ದಾರೆ. ಆದರೆ, ತನ್ನ ಸ್ನೇಹಿತ ಮೃತಪಟ್ಟಿರುವ ಬಗ್ಗೆ ಪೊಲೀಸರು ಪ್ರಶ್ನೆ ಮಾಡುವವರೆಗೆ ಆರೋಪಿಗೆ ಗೊತ್ತೇ ಇರಲಿಲ್ವಂತೆ. ಪಾರ್ತಿಬನ್ ತನ್ನ ಕಾಲುಗಳನ್ನು ನನ್ನ ಮೇಲೆ ಹಾಕುತ್ತಿದ್ದನು, ಆ ವೇಳೆ ಗಾಬರಿಯಿಂದ ನಾನು ಎಚ್ಚರಗೊಂಡೆ. ಇದು ತನ್ನ ನಿದ್ರೆಗೆ ಭಂಗ ತರುತ್ತಿದೆ ಎಂದು ಪಾರ್ತಿಬನ್‌ಗೆ ಹೇಳಿ ಮತ್ತೆ ಮಲಗಿದೆ.
ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಕೇಸ್: ‘ಕೈ’ ನಾಯಕ ಶ್ರೀನಿವಾಸ್ ವಿರುದ್ಧ ಎಫ್‌ಐಆರ್; ಅಸ್ಸಾಂ ಪೊಲೀಸರಿಂದ ಬಂಧನ ಸಾಧ್ಯತೆ
ಆದರೂ, ಪಾರ್ತಿಬನ್ ತನ್ನ ಕಾಲುಗಳನ್ನು ನನ್ನ ಮೇಲೆ ಹಾಕುವುದನ್ನು ಮುಂದುವರಿಸಿದಾಗ, ಆತನ ಜತೆ ವಾದ ಮಾಡಿ, ಬಳಿಕ ಆತನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಹೊರಟುಹೋದೆ. ಪೊಲೀಸರು ಆತನನ್ನು ವಿಚಾರಣೆಗೆ ಕರೆದುಕೊಂಡು ಹೋಗುವವರೆಗೂ ಪ್ರಭಾಕರನ್ ಸತ್ತಿರುವುದು ಗೊತ್ತಿರಲಿಲ್ಲ ಎಂದು ಆರೋಪಿ ಬಾಯ್ಬಿಟ್ಟಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. .
ಕಳೆದ ಕೆಲವು ಸಂದರ್ಭಗಳಲ್ಲಿಯೂ ಪಾರ್ತಿಬನ್ ತನ್ನ ಮೇಲೆ ಕಾಲು ಇಡುತ್ತಿದ್ದ. ಈ ಅಭ್ಯಾಸದಿಂದ ಹಲವು ಬಾರಿ ವಾದಗಳಿಗೆ ಕಾರಣವಾಗಿದೆ ಮತ್ತು ಜಗಳದಲ್ಲಿ ಕೊನೆಗೊಂಡಿದೆ ಎಂದೂ ಆರೋಪಿ ಪೊಲೀಸರಿಗೆ ತಿಳಿಸಿದ್ದಾರೆ. ಅಲ್ಲದೆ, ಹೀಗೆ ನೀವಿಬ್ಬರೂ ಜಗಳ ಮುಂದುವರಿಸಿದರೆ ಮನೆ ಖಾಲಿ ಮಾಡುವಂತೆ ಮನೆ ಮಾಲೀಕರು ಎಚ್ಚರಿಸಿದ್ರು ಎಂದೂ ಆರೋಪಿ ಹೇಳಿದ್ದಾರೆ.
ಇದನ್ನೂ ಓದಿ: ಕತ್ತು ಹಿಸುಕಿ ಪ್ರೇಮಿಯ ಕೊಲೆ: ಸೋದರಿ ಸಹಾಯದಿಂದ ಶವವನ್ನು 12 ಕಿ.ಮೀ. ದೂರ ಎಸೆದ ಪಾಪಿ!
ಪ್ರಭಾಕರನ್ ವಿರುದ್ಧ ಕೊಲೆ ಆರೋಪ ಹಿನ್ನೆಲೆ ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ಜೈಲಿಗೆ ಕಳಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಮಗಳ ಚಿಕಿತ್ಸೆಗೆ ಹಣ ಹೊಂದಿಸಲು ರಕ್ತ ಮಾರ್ತಿದ್ದ ತಂದೆ: ದುಡ್ಡು ಹೊಂದಿಸಲಾಗದೆ ಆತ್ಮಹತ್ಯೆ ಮಾಡ್ಕೊಂಡ್ರು!