ಗೇಮ್ ಆಡೋಕೆ ಮೊಬೈಲ್ ಕೊಡದ 12 ವರ್ಷದ ತಮ್ಮನನ್ನು ಕೊಂದ 15 ವರ್ಷದ ಅಕ್ಕ!
ಮಕ್ಕಳ ಮೊಬೈಲ್ ಗೀಳು ಯಾವ ಮಟ್ಟಕ್ಕೆ ಹೋಗಿದೆ ಅನ್ನೋದಕ್ಕೆ ಈ ಸುದ್ದಿ ಸಾಕ್ಷಿ. ಗೇಮ್ ಆಡೋಕೆ ಮೊಬೈಲ್ ಕೊಡದ ತಮ್ಮನನ್ನು 15 ವರ್ಷದ ಅಕ್ಕ ಕೊಂದು ಹಾಕಿರುವ ಘಟನೆ ಉತ್ತರ ಪ್ರದೇಶದ ಫರೀದಾಬಾದ್‌ನಲ್ಲಿ ನಡೆದಿದೆ.
ನವದೆಹಲಿ (ಜೂ.1): ಗೇಮ್ ಆಡಲು ಮೊಬೈಲ್ ಕೊಡದ ಕಾರಣಕ್ಕೆ 15 ವರ್ಷದ ಅಕ್ಕ ತನ್ನ 12 ವರ್ಷದ ತಮ್ಮನನ್ನೇ ಕೊಲೆ ಮಾಡಿರುವ ಘಟನೆ ಹರಿಯಾಣದ ಫರೀದಾಬಾದ್‌ನಲ್ಲಿ ನಡೆದಿದೆ. ತಮ್ಮನನ್ನು ಸಾಯಿಸಿದ ಬಳಿಕ ಆತನನ್ನು ಬೆಡ್‌ನ ಮೇಲೆ ಮಲಗಿಸಿದ್ದ ಆಕೆ, ಆತನ ಮೇಲೆ ಶೀಟ್‌ಅನ್ನು ಮುಚ್ಚಿದ್ದಳು. ಪೊಲೀಸರು ಬಾಲಕಿಯ ವಿಚಾರಣೆ ನಡೆಸಿದ ಬಳಿಕ, ಗೇಮ್ ಆಡಲು ತಮ್ಮ ಮೊಬೈಲ್ ನೀಡುತ್ತಿರಲಿಲ್ಲ. ಪರಿಪರಿಯಾಗಿ ಬೇಡಿಕೊಂಡರು ಮೊಬೈಲ್ ಮಾತ್ರ ಕೊಡುತ್ತಿರಲಿಲ್ಲ. ಅದಕ್ಕಾಗಿ ಕೊಲೆ ಮಾಡಿದೆ ಎಂದು ಹೇಳಿದ್ದಾಳೆ. ಅದಲ್ಲದೆ, ನನ್ನ ತಂದೆ-ತಾಯಿ ಕೂಡ ತಮ್ಮನನ್ನು ಅತಿಯಾತಿ ಪ್ರೀತಿ ಮಾಡುತ್ತಾರೆ. ಆತ ಕೇಳಿದಾಗಲೆಲ್ಲಾ ಮೊಬೈಲ್ ಕೊಡುತ್ತಾರೆ. ಹಾಗೇನಾದರೂ ನಾನು ಗೇಮ್ ಆಡಲು ಮೊಬೈಲ್ ಕೇಳಿದರೆ ನನಗೆ ಬೈಯುತ್ತಿದ್ದರು ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ. ಫರೀದಾಬಾದ್‌ನ ಕೋಲಿವಾಡದಲ್ಲಿ ಕುಟುಂಬ ವಾಸವಾಗಿದ್ದು ಗುರುವಾರ ತಂದೆ-ತಾಯಿ ಇಬ್ಬರೂ ಕೆಲಸಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ. ಅಕ್ಕ-ತಮ್ಮ ಇಬ್ಬರನ್ನೂ ಮನೆಯಲ್ಲಿ ಬಿಟ್ಟು ಇವರು ಕೆಲಸಕ್ಕೆ ತೆರಳಿದ್ದರು.
ಮಗನ ಸಾವಿನ ಕುರಿತಾಗಿ ಮಾತನಾಡಿರುವ ತಾಯಿ, 'ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ, ಮಗ ಬೆಡ್‌ನ ಮೇಲೆ ಇದ್ದದ್ದನ್ನು ನೋಡಿದ್ದೆ. ಆಗ ನಾನು ಈತ ಮಲಗಿಕೊಂಡಿರಬಹುದು ಎಂದು ಭಾವಿಸಿದ್ದೆ. ಬಹಳ ಹೊತ್ತಾದರೂ ಆತ ಏಳದ ಹಿನ್ನಲೆಯಲ್ಲಿ ನಾನು ಆತನನ್ನು ಎಬ್ಬಿಸಲು ಪ್ರಯತ್ನಿಸಿದೆ. ಈ ವೇಳೆ ಆತನ ಕುತ್ತಿಗೆಯ ಬಳಿ ಕೆಲ ಮಾರ್ಕ್‌ಗಳು ಕಂಡವು. ಆಗ ನನಗೆ ಅನುಮಾನ ಇನ್ನೂ ಹೆಚ್ಚಾಯಿತು. ಈ ವೇಳೆಗಾಗಲೇ ಅಕ್ಕಪಕ್ಕದ ಮನೆಯವರು ಮನಯೆ ಬಳಿ ಗುಂಪು ಸೇರಿದ್ದರು' ಎಂದಿದ್ದಾರೆ.
ಮಗನ ಕುತ್ತಿಗೆಯ ಬಳಿ ಇರುವ ಮಾರ್ಕ್‌ಗಳನ್ನು ಕಂಡ ಬಳಿಕ ನಾನು ಮಗಳನ್ನು ಕರೆದಿದು ವಿಚಾರಿಸಿದೆ. ಈ ವೇಳೆ ಆಕೆ ನನಗೆ ಏನೂ ಗೊತ್ತಿಲ್ಲ ಎಂದು ಹೇಳಿದ್ದಳು. ನಾನು ಕೆಲ ಹೊತ್ತು ಟೆರಸ್‌ನ ಮೇಲೆ ಇದ್ದೆ. ಇಲ್ಲಿ ಏನಾಯಿತು ಅನ್ನೋದು ಗೊತ್ತಿಲ್ಲ ಎಂದಿದ್ದಳು. ಅದಲ್ಲದೆ, ಮನೆಗೆ ಯಾರೂ ಕೂಡ ಬಂದಿರಲಿಲ್ಲ. ಆದರೆ, ತನ್ನ ತಮ್ಮನಿಗೆ ಏನಾಗಿದೆ ಅನ್ನೋದು ತನಗೂ ಗೊತ್ತಿಲ್ಲ ಎಂದು ಹೇಳಿದ್ದಳು ಎಂದು ತಾಯಿ ತಿಳಿಸಿದ್ದಾರೆ.
ಸೋಶಿಯಲ್ ಮೀಡಿಯಾ 'ಕ್ರೋಮಿಂಗ್' ಟ್ರೆಂಡ್‌ಗೆ ಬಲಿಯಾದ 13 ವರ್ಷದ ಬಾಲಕಿ!
ಇದರ ಬೆನ್ನಲ್ಲಿಯೇ ಮಗನ ವಿಚಾರದಲ್ಲಿ ಏನೂ ಆಗಿದೆ ಎನ್ನುವುದು ತಾಯಿಗೆ ಗೊತ್ತಾಗಿತ್ತು. ಶೀಘ್ರವೇ ತಾಯಿ ಪೊಲೀಸರಿಗೆ ಇದರ ಮಾಹಿತಿ ನೀಡಿದ್ದರು. ಪೊಲೀಸರು ಇಡೀ ಮನೆಯನ್ನು ಶೋಧ ಕಾರ್ಯ ನಡೆಸಿದ ಬಳಿಕ, ಮನೆಗೆ ಹೊರಗಿನಿಂದ ಯಾರೊಬ್ಬರೂ ಬರದೇ ಇರುವುದು ಖಚಿತವಾಗಿತ್ತು. ಇದರ ಬೆನ್ನಲ್ಲಿಯೇ ಅಕ್ಕನ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು.
ಒಪ್ಪಿಕೊಂಡ ಅಕ್ಕ: ಆರಂಭದಲ್ಲಿ ಅಕ್ಕ ತಾನು ಕೊನೆ ಮಾಡಿದ್ದನ್ನು ಒಪ್ಪಿಕೊಂಡಿರಲಿಲ್ಲ. ಆದರೆ, ಕಠಿಣ ವಿಚಾರಣೆ ಮಾಡುವ ಎಚ್ಚರಿಕೆ ನೀಡಿದ ಬೆನ್ನಲ್ಲಿಯೇ, ಮೊಬೈಲ್‌ನಲ್ಲಿ ತಮ್ಮ ಆಟವಾಡುತ್ತಿದ್ದ. ಈ ವೇಳೆ ನನಗೆ ಮೊಬೈಲ್ ಕೊಡುವಂತೆ ಹೇಳಿದ್ದೆ. ಸ್ವಲ್ಪ ಸಮಯದ ಬಳಿಕ ಕೊಡುತ್ತೇನೆ ಎಂದು ಹೇಳಿದ್ದ. ಕೆಲ ಸಮಯದ ಬಳಿಕವೂ ಆತ ಮೊಬೈಲ್ ಕೊಡಲು ನಿರಾಕರಿಸಿದ ಕಾರಣ, ನಾನು ಆತನನ್ನು ಕೊಲೆ ಮಾಡಿದೆ ಎಂದು ಹೇಳಿದ್ದಾಳೆ.
ಫೋನ್ ನೋಡ್ಬೇಡ ಅಂದಿದ್ದೇ ತಪ್ಪಾಯ್ತಾ? ಅಮ್ಮ ಬೈದ್ರು ಅಂತ ನೇಣು ಹಾಕಿಕೊಂಡು ಸತ್ತ 13 ವರ್ಷದ ಬಾಲಕಿ
ಸದ್ಯ ಅಪ್ರಾಪ್ತ ಬಾಲಕಿಯ ವಿಚಾರಣೆ ನಡೆಯುತ್ತಿದೆ. ಕಾನೂನು ಪ್ರಕ್ರಿಯೆಯ ನಂತರ ಅಪ್ರಾಪ್ತ ಬಾಲಕಿಯನ್ನು ಬಾಲನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು ಎಂದು ಹೇಳಲಾಗಿದೆ.