Asianet Suvarna News Asianet Suvarna News

'ಹುಡುಗ-ಹುಡುಗಿಯರ ಸರ್ವಿಸ್ ಬೇಕಾ?' ಎಂದು ಮೆಸೇಜ್ ಕರೆ ಮಾಡುತ್ತಿದ್ದ ಆರೋಪಿ ಬಂಧನ

ಹುಡುಗ ಹಾಗೂ ಹುಡುಗಿಯರ ಸರ್ವಿಸ್ ಬೇಕಾ ಎಂದು ಮೆಸೇಜ್, ಕರೆ ಮಾಡಿ ತೊಂದರೆ ಕೊಡುತ್ತಿದ್ದ ಆರೋಪಿಯನ್ನು ಪೂರ್ವ ವಿಭಾಗದ ಸೆನ್ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಆನಂದ್ ಶರ್ಮಾ, ಬಂಧಿತ ಆರೋಪಿ.

Harassment case accused anand sharma arrested by SEN police t bengaluru rav
Author
First Published Jul 7, 2024, 8:44 PM IST | Last Updated Jul 8, 2024, 11:08 AM IST

ಬೆಂಗಳೂರು (ಜು.7) ಹುಡುಗ ಹಾಗೂ ಹುಡುಗಿಯರ ಸರ್ವಿಸ್ ಬೇಕಾ ಎಂದು ಮೆಸೇಜ್, ಕರೆ ಮಾಡಿ ತೊಂದರೆ ಕೊಡುತ್ತಿದ್ದ ಆರೋಪಿಯನ್ನು ಪೂರ್ವ ವಿಭಾಗದ ಸೆನ್ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಆನಂದ್ ಶರ್ಮಾ, ಬಂಧಿತ ಆರೋಪಿ. ಯುವಕ ಯುವತಿಯರ ನಂಬರ್ ಸಂಗ್ರಹಿಸಿ ಬೇರೆ ಬೇರೆ ಸಿಮ್‌ ಕಾರ್ಡ್ ಬಳಸಿ ಹುಡುಗಿಯರ ಸರ್ವಿಸ್ ಬೇಕಾ ಎಂದು ಕರೆ ಮಾಡುತ್ತಿದ್ದ ಆರೋಪಿ. ಹುಡುಗಿಯರಿಗೂ ಕರೆ ಮಾಡಿ ಹುಡುಗರ ಸರ್ವಿಸ್ ಬೇಕಾ ಎಂದು ಕೇಳುತ್ತಿದ್ದ ಆಸಾಮಿ. ಒಬ್ಬೊಬ್ಬರಿಗೂ ಒಂದೊಂದು ನಂಬರ್‌ನಿಂದ ಕರೆ, ಮಸೇಜ್ ಮಾಡುತ್ತಿದ್ದ ಆರೋಪಿ. 

ಮೂವರ ಮೇಲೆ ದಾಳಿ ನಡೆಸಿದ್ದ ಚಿರತೆ; ಕಂಡ ಕ್ಷಣವೇ ಅಟ್ಟಾಡಿಸಿ ಕೊಚ್ಚಿ ಕೊಂದ ಗ್ರಾಮಸ್ಥರು!

ಸುಭಿ ಎಂಬಾಕೆಗೂ 'ಸರ್ವಿಸ್ ಬೇಕಾ?' ಎಂದು ಕರೆ ಮಾಡಿದ್ದ ಆರೋಪಿ. ಬೇರೆ ಬೇರೆ ನಂಬರ್‌ಗಳಿಂದ ಪದೇಪದೆ ಕರೆ ಮಾಡಿ ಆರೋಪಿಯಿಂದ ತೊಂದರೆ. ಇದರಿಂದ ಬೇಸತ್ತು ಪೊಲೀಸ್ ಠಾಣೆಗೆ ದೂರು ನೀಡಿದ ಮಹಿಳೆ. ದೂರು ದಾಖಲಿಸಿಕೊಂಡ ಪೂರ್ವ ವಿಭಾಗ ಸೆನ್ ಪೊಲೀಸರು. ಆರೋಪಿ ಬಳಸಿದ ಮೊಬೈಲ್  ನಂಬರ್, ಲೋಕೇಶನ್ ಟ್ರ್ಯಾಕ್ ಮಾಡಿ ಶೇಷಾದ್ರಿಪುರಂ ವಿ ಸ್ಟೇಜ್ ಪಿಜಿ ಬಳಿ ಆರೋಪಿಯನ್ನ ಬಂಧಿಸಿದ ಸೆನ್ ಪೊಲೀಸರು.

ಕೃತ್ಯಕ್ಕೆ ಬಳಸುತ್ತಿದ್ದ ಆರೋಪಿಯ ಮೊಬೈಲ್, ಹಲವಾರು ಸಿಮ್‌ಗಳು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದೇ ರೀತಿ ಯಾರಾರಿಗೆ ಕರೆ ಮಾಡಿ್ದ್ದಾನೆ, ಇದರ ಹಿಂದೆ ಜಾಲವೇ ಕೆಲಸ ಮಾಡ್ತಿದೆಯಾ? ಎಂಬ ಬಗ್ಗೆ ತನಿಖೆ ಮಾಡಲಿರುವ ಪೊಲೀಸರು. 

Latest Videos
Follow Us:
Download App:
  • android
  • ios