Asianet Suvarna News Asianet Suvarna News

ಅಶ್ಲೀಲ ಭಂಗಿಯಲ್ಲಿ ಹಿಂದು ದೇವತೆಗಳು.. ಕಾಮಸೂತ್ರ ಸುಟ್ಟರು!

*  ಕಾಮಸೂತ್ರದಲ್ಲಿ ಹಿಂದೂ ದೇವರಿಗೆ ಅವಮಾನ
*  ಪುಸ್ತಕದ ಪ್ರತಿಗಳನ್ನು ಸುಟ್ಟು  ಹಾಕಿದರು
*   ಅಂಗಡಿಯೊಂದಕ್ಕೆ ನುಗ್ಗಿ ಕಾಮಸೂತ್ರದ ಪ್ರತಿಗಳನ್ನು ಎತ್ತಿಕೊಂಡು  ಬಂದರು
* ಹಿಂದು ದೇವತೆಗಳಿಗೆ ಅವಮಾನ ಮಾಡಿದರು

Gujarat Bajrang Dal Burns Kama Sutra Copy for Insulting Hindu Deities mah
Author
Bengaluru, First Published Aug 30, 2021, 8:29 PM IST
  • Facebook
  • Twitter
  • Whatsapp

ಅಹಮದಾಬಾದ್(ಆ. 30)  ಭಜರಂಗ ದಳದ ಕಾರ್ಯಕರ್ತರು  ಆಕ್ರೋಶ ಹೊರಹಾಕಿದ್ದಾರೆ. ಕಾಮಸೂತ್ರದ  ಪುಸ್ತಕವನ್ನು ಸುಟ್ಟು ಹಾಕಿದ್ದಾರೆ.  ಗುಜರಾತ್ ನ ಅಹಮದಾಬಾದ್ ನಲ್ಲಿ ಘಟನೆ ನಡೆದಿದೆ. ಹಿಂದು ದೇವತೆಗಳನ್ನು ಪುಸ್ತಕದಲ್ಲಿ ಕೆಟ್ಟದಾಗಿ ಚಿತ್ರಿಸಿದ್ದಾರೆ ಎಂದು  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದು ದೇವತೆಗಳನ್ನು ಅಶ್ಲೀಲ  ಭಂಗಿಯಲ್ಲಿ ತೋರಿಸಲಾಗಿದೆ ಎಂದು  ಪುಸ್ತಕದ ಅಂಗಡಿಯೊಂದಕ್ಕೆ ನುಗ್ಗಿ ಕಾಮಸೂತ್ರದ ಪ್ರತಿಗಳನ್ನು ಹರಿದು ಹಾಕಿದ್ದಾರೆ.

ಹೊಸ ದಾಖಲೆ ಸೃಷ್ಟಿಸಿದ ಕಾಮಸೂತ್ರ

ತತ್ವಜ್ಞಾನಿ ವಾತ್ಸಾಯನ ಬರೆದ ಕಾಮಸೂತ್ರ  ಲೈಂಗಿಕತೆಯ ಸೂತ್ರಗಳನ್ನು ಹಣೆದಿರುವ ಪುಸ್ತಕ.  ಪುಸ್ತಕ ಸುಡುವಾಗ  ಜೈ ಶ್ರೀರಾಮ್ ಮತ್ತು ಹರ ಹರ ಮಹದೇವ್ ಎಂದು ಘೋಷಣೆ ಕೂಗಿದ್ದಾರೆ.  ಈ ವಿಡಿಯೋಗಳು ವೈರಲ್ ಆಗುತ್ತಿವೆ.

ಕಾರ್ಯಕರ್ತರು ಯಾವ  ಅಂಗಡಿಯಿಂದ ತಂದಿದ್ದಾರೆ ಎನ್ನುವುದು ಗೊತ್ತಾಗಿಲ್ಲ. ಇಂಥ ಪುಸ್ತಕಗಳನ್ನು ಮಾರಾಟ ಮಾಡಿದರೆ ಬೆಂಕಿ ಹಚ್ಚುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.  ಈ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿಯವರೆಗೆ  ಯಾವುದೇ ದೂರು ದಾಖಲಾಗಿಲ್ಲ. 

 

 

Follow Us:
Download App:
  • android
  • ios