ವಿಶ್ವದ ಸಿನಿಮಾಗಳನ್ನೇ ಹಿಂದಿಕ್ಕಿ ಹೊಸ ದಾಖಲೆ ಸೃಷ್ಟಿಸಿದ ಕಾಮಸೂತ್ರ

Kama Sutra trailer is 3rd most watched in history of YouTube
Highlights

  • ಅತೀ ಹೆಚ್ಚು ವೀಕ್ಷಣೆಗೊಳಪಟ್ಟ ವಿಶ್ವದ 3ನೇ ಸಿನಿಮಾ
  • 1996 ರಲ್ಲಿ ಬಿಡುಗಡೆಯಾದ ಚಿತ್ರದಲ್ಲಿ ರೇಖಾ, ಸರಿತಾ ಚೌಧರಿ ಅಭಿನಯ

ಮುಂಬೈ[ಜೂ.28]: ಎರಡು ದಶಕಗಳ ಹಿಂದೆ  ಹದಿಹರೆಯದ ಹುಡುಗರಲ್ಲಿ ಹೊಸ ಆಕರ್ಷಣೆ ಹುಟ್ಟಿಸಿದ ಚಿತ್ರ ಮೀರಾ ನಾಯರ್ ನಿರ್ದೇಶನದ ಕಾಮಸೂತ್ರ: ಎ ಟೇಲ್ ಆಪ್ ಲವ್.

ರೇಖಾ, ಸರಿತಾ ಚೌದರಿ, ನವೀನ್ ಆಂಡ್ರೋಸ್ ಪ್ರಮುಖ ತಾರಾ ಬಳಗದಲ್ಲಿ 1996ರಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಸಂಪ್ರದಾಯಿಗಳ ವಿರೋಧದ ಕಾರಣದಿಂದ ಭಾರತ ಮತ್ತು ಪಾಕಿಸ್ತಾನದಲ್ಲಿ ನಿಷೇಧಿಸಲಾಗಿತ್ತು. ಆದರೂ ವಿಶ್ವದ ಬೇರೆ ಕಡೆ ತೆರೆ ಕಂಡರೂ ನಮ್ಮ ದೇಶದ ಯುವಕರು ಆಗಿನ ಕಾಲದಲ್ಲಿ ಸಿಡಿಗಳಲ್ಲಿ ನೋಡಿ ಖುಷಿಪಟ್ಟಿದ್ದರು. ಈಗಲೂ ಯುಟ್ಯೂಬ್'ನಲ್ಲಿ  ಚಿತ್ರದ ಕೆಲವೊಂದು ದೃಶ್ಯಗಳು ಹರಿದಾಡುತ್ತಿವೆ.   

ಈಗ 22 ವರ್ಷಗಳ ನಂತರವೂ ಕಾಮಸೂತ್ರ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. ಈ ಚಿತ್ರದ ಟ್ರೈಲರ್ ಯುಟ್ಯೂಬ್'ನಲ್ಲಿ ಅತೀ ಹೆಚ್ಚು ವೀಕ್ಷಣೆಗೊಳಪಟ್ಟ ವಿಶ್ವದ ಮೂರನೇ ಚಿತ್ರವಾಗಿದೆ. ಕಾಮಸೂತ್ರದ ಟ್ರೈಲರ್ ಅನ್ನು ಇಲ್ಲಿಯವರೆಗೂ  9.2 ಕೋಟಿ ಮಂದಿ ವೀಕ್ಷಿಸಿದ್ದಾರೆ. ಮೊದಲೆರಡು ಸ್ಥಾನಗಳಲ್ಲಿ ಅವೆಂಜರ್ಸ್ [20 ಕೋಟಿ] ಹಾಗೂ ಸ್ಟಾರ್ ವಾರ್ಸ್[10 ಕೋಟಿ] ಚಿತ್ರಗಳಿವೆ. 

loader