ಮದುವೆ ಕಾರ್ಡ್ ಹಂಚಲು ತೆರಳಿದ ವರನ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ, ಸುಟ್ಟು ಭಸ್ಮ

ಮದುವೆಗೆ ಕೆಲ ದಿನ ಮಾತ್ರ ಬಾಕಿ. ಮದುವೆ ಆಮಂತ್ರಣ ಪತ್ರಿಕೆ ಹಿಡಿದು ಆಪ್ತರನ್ನು ಆಮಂತ್ರಿಸಲು ಕಾರಿನಲ್ಲಿ ತೆರಳಿದಾಗ ಬೆಂಕಿ ಅವಘಡ ಸಂಭವಿಸಿದೆ. ಮದುವೆಗೆ ಕೆಲವೇ ದಿನ ಬಾಕಿ ಇರುವಾಗಲೇ ವರ ಬೆಂಕಿಯ ಜ್ವಾಲೆಯಲ್ಲಿ ಸುಟ್ಟು ಕರಕಲಾದ ದುರಂತ ಘಟನೆ ನಡೆದಿದೆ.
 

Groom dies after car catches fire during wedding card distribution Delhi

ನವದೆಹಲಿ(ಜ.19) ಇಬ್ಬರಿಗೂ ಪರಿಚಯ, ಈ ಪರಿಚಯ ಪ್ರೀತಿಯಾಗಿ ತಿರುಗಿತ್ತು. ಇವರ ಪ್ರೀತಿಗೆ ಮನೆಯವರಿಂದಲೂ ಒಪ್ಪಿಗೆ ಸಿಕ್ಕಿತ್ತು. ಯಾವುದೇ ಅಡೆ ತಡೆ ಇಲ್ಲದೆ ಮದುವೆ ಕಾರ್ಯಗಳು ಆರಂಭಗೊಂಡಿತ್ತು. ಮದುವೆ ದಿನಾಂಕ ಫಿಕ್ಸ್ ಆಗಿತ್ತು. ತಯಾರಿಗಳು ಆರಂಭಗೊಂಡಿತ್ತು. ಇದರ ನಡುವೆ ವರ, ಆಪ್ತರು, ಕುಟುಂಬಸ್ಥರು ಹಾಗೂ ಗೆಳೆಯರಿಗೆ ಮದುವೆ ಆಮಂತ್ರಣ ಪತ್ರಿಕೆ ಹಂಚಲು ತನ್ನ ಮಾರುತಿ ಸುಜುಕಿ ವ್ಯಾಗನ್ಆರ್ ಕಾರಿನಲ್ಲಿ ತೆರಳಿದ್ದಾನೆ. ಆದರೆ ವರ ಯಾರಿಗೂ ಮದುವೆ ಕಾರ್ಡ್ ಹಂಚಲಿಲ್ಲ, ಮನೆಗೂ ವಾಪಸ್ ಬರಲಿಲ್ಲ. ಕಾರಣ ಮನೆಯಿಂದ ಹೊರಟ ವರನ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ದಿಢೀರ್ ಬೆಂಕಿ ಜ್ವಾಲೆಯಾಗಿದೆ. ಇತ್ತ ಕಾರಿನಿಂದ ಹೊರಬರಲು ಸಾಧ್ಯವಾಗದೆ ವರ ಸುಟ್ಟು ಕರಕಲಾದ ಘಟನೆ ನವ ದೆಹಲಿಯಲ್ಲಿ ನಡೆದಿದೆ.

ಅನಿಲ್ ಮದುವೆ ಫೆಬ್ರವರಿ 14ಕ್ಕೆ ನಿಗಧಿಯಾಗಿತ್ತು. ಅನಿಲ್ ಹಾಗೂ ಯೋಗೇಶ್ ಇಬ್ಬರು ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಯೋಗೇಶ್ ಸಹೋದರಿಯನ್ನೇ ಅನಿಲ್‌ಗೆ ಮದುವೆ ಮಾಡಿಸಲು ಎಲ್ಲರು ನಿಶ್ಚಯಿಸಿದ್ದರು. ಎಲ್ಲಾ ಮಾತುಕತೆ ಬಳಿಕ ಫೆಬ್ರವರಿ 14ರಂದು ಮದುವೆ ನಿಗಧಿಯಾಗಿತ್ತು. ತಯಾರಿಗಳು ಭರದಿಂದ ಸಾಗಿತ್ತು. ಆಮಂತ್ರಣ ಪತ್ರಿಕೆಯೂ ರೆಡಿಯಾಗಿತ್ತು. ಇನ್ನು ಕೆಲ ದಿನಗಳಿರುವ ಕಾರಣ ಹಲವು ಆಪ್ತರನ್ನು ಆಮಂತ್ರಿಸಲು ಕಾರ್ಡ್ ಹಂಚುವ ಪ್ರಕ್ರಿಯೆ ಆರಂಭಗೊಂಡಿತ್ತು.

ಶನಿವಾರ ವರ ಅನಿಲ್ ತನ್ನ ವ್ಯಾಗನ್ಆರ್ ಕಾರಿನಲ್ಲಿ ಮದುವೆ ಆಮಂತ್ರಣ ಪತ್ರಿಕೆ ತೆಗೆದುಕೊಂಡು ತೆರಳಿದ್ದರು. ಗ್ರೇಟರ್ ನೋಯ್ಡಾದ ನವಾಡದಲ್ಲಿರುವ ಮನೆಯಿಂದ ಹೊರಟ ಅನಿಲ್ ಎಷ್ಟು ಹೊತ್ತಾದರೂ ಮನೆಗೆ ಮರಳಲಿಲ್ಲ. ಅನಿಲ್ ಸಹೋದರ ಸುಮಿತ್ ಸತತವಾಗಿ ಕರೆ ಮಾಡಿ ಸಂಪರ್ಕ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಫೋನ್ ಸ್ವಿಚ್ ಆಫ್ ಆಗಿದೆ. ಕುಟುಂಬಸ್ಥರು ಎಲ್ಲರ ಮನೆಗೆ ತೆರಳಿ ಕಾರ್ಡ್ ಹಂಚಿ ಬರುವಾಗ ಕೊಂಚ ತಡವಾಗಬಹುದು ಎಂದು ಸಮಾಧಾನ ಮಾಡಿಕೊಂಡಿದ್ದಾರೆ. ಆದರೆ ರಾತ್ರಿಯಾದರೂ ಅನಿಲ್ ಮರಳಲಿಲ್ಲ. ಫೋನ್ ಕೂಡ ಸಿಗುತ್ತಿಲ್ಲ. ಇದು ಆತಂಕ ಹೆಚ್ಚಿಸಿದೆ.

ಭರ್ಜರಿ ಪಟಾಕಿ ಸಿಡಿಸಿ ಮದುವೆ ಮನೆಯಲ್ಲಿ ಸಂಭ್ರಮ, 18 ದಿನದ ನವಜಾತ ಶಿಶು ಆಸ್ಪತ್ರೆಗೆ ದಾಖಲು!

ಅನಿಲ್ ಸಹೋದರ್ ತಕ್ಷಣವೇ ಪೊಲೀಸ್ ಠಾಣೆಗೆ ತೆರಳಿ ಈ ಕುರಿತು ಮಾಹಿತಿ ನೀಡಿದ್ದಾರೆ. ಇತ್ತ ಪೊಲೀಸರು ನಾಪತ್ತೆಯಾಗಿರುವ ಅನಿಲ್ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಇತ್ತ ಕುಟುಂಬಸ್ಥರು ಹಲವು ಆಪ್ತರು, ಕುಟುಂಬಸ್ಥರಿಗೆ ಕರೆ ಮಾಡಿ ಮಾಹಿತಿ ಕೇಳಿದ್ದಾರೆ. ಆದರೆ ಯಾರಿಗೂ  ಅನಿಲ್ ಕುರಿತ ಮಾಹಿತಿ ಇಲ್ಲ. ರಾತ್ರಿ 11.30ರ ವೇಳೆಗೆ ಪೊಲೀಸರು ಕರೆ ಮಾಡಿ ಕಾರು ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾದ ವ್ಯಕ್ತಿಯೊಬ್ಬರ ಮೃತದೇಹ ಆಸ್ಪತ್ರೆಯಲ್ಲಿದೆ.  ತಕ್ಷಣವೇ ಆಸ್ಪತ್ರೆಗೆ ಬರಲು ಸೂಚಿಸಿದ್ದಾರೆ.

ಕುಟುಂಬಸ್ಥರು ಆಸ್ಪತ್ರೆ ದೌಡಾಯಿಸಿದ್ದಾರೆ. ಈ ವೇಳೆ ಅನಿಲ್ ಮೃತದೇಹ ಪತ್ತೆ ಹಚ್ಚಿದ್ದಾರೆ. ಈ ಮಾಹಿತಿ ತಿಳಿದು ಅನಿಲ್ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.ಇತ್ತ ಅನಿಲ್ ಮದುವೆಯಾಗಲು ನಿರ್ಧರಿಸಿದ್ದ ಹುಡುಗಿ ಹಾಗೂ ಕುಟುಂಬಸ್ಥರು ಆಘಾತಗೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಹೇಗೆ ಅನ್ನೋ ಕುರಿತು ತನಿಖೆ ನಡೆಯುತ್ತಿದೆ.

ಅವು ನನ್ನ ಕುಟುಂಬ ದಯವಿಟ್ಟು ಉಳಿಸಿಕೊಡಿ: ಬೆಂಕಿಗೆ ಸಿಕ್ಕ ಶ್ವಾನಗಳ ರಕ್ಷಣೆಗೆ ಕಣ್ಣೀರಿಟ್ಟ ಯುವಕ
 

Latest Videos
Follow Us:
Download App:
  • android
  • ios