ಗ್ರಾಹಕರ ಸೋಗಿನಲ್ಲಿ ಬಂದ ಬುರ್ಖಾಧಾರಿ ಮಹಿಳೆಯರು ಚಿನ್ನದ ಖಡ್ಗ ಕದ್ದು ಎಸ್ಕೇಪ್!
ಗ್ರಾಹಕರ ಸೋಗಿನಲ್ಲಿ ಬಂದು ಬಂಗಾರದ ಖಡ್ಗ ಕದ್ದು ಪರಾರಿಯಾದ ಘಟನೆ ಕಲಬುರಗಿ ನಗರದ ಅನ್ನಪೂರ್ಣ ಕ್ರಾಸ್‌ನಲ್ಲಿರುವ ತನಿಷ್ಕ ಜ್ಯೂವೆಲ್ಲರಿ ಶಾಪ್‌ನಲ್ಲಿ ನಡೆದಿದೆ. ಬುರ್ಖಾ ಧರಿಸಿ ಗ್ರಾಹಕರ ಸೋಗಿನಲ್ಲಿ ಬಂದಿದ್ದ ಇಬ್ಬರು ಮಹಿಳೆಯರು. ಸಿಸಿಟಿವಿಯಲ್ಲಿ ಕಳ್ಳತನದ ದೃಶ್ಯ ಸೆರೆಯಾಗಿದೆ.
ಕಲಬುರಗಿ (ಮೇ.17): ಗ್ರಾಹಕರ ಸೋಗಿನಲ್ಲಿ ಬಂದು ಬಂಗಾರದ ಖಡ್ಗ ಕದ್ದು ಪರಾರಿಯಾದ ಘಟನೆ ಕಲಬುರಗಿ ನಗರದ ಅನ್ನಪೂರ್ಣ ಕ್ರಾಸ್‌ನಲ್ಲಿರುವ ತನಿಷ್ಕ ಜ್ಯೂವೆಲ್ಲರಿ ಶಾಪ್‌ನಲ್ಲಿ ನಡೆದಿದೆ.
ಬುರ್ಖಾ ಧರಿಸಿ ಗ್ರಾಹಕರ ಸೋಗಿನಲ್ಲಿ ಬಂದಿದ್ದ ಇಬ್ಬರು ಮಹಿಳೆಯರು. ಸಿಸಿಟಿವಿಯಲ್ಲಿ ಕಳ್ಳತನದ ದೃಶ್ಯ ಸೆರೆಯಾಗಿದೆ. ಸುಮಾರು 2 ಲಕ್ಷ 15 ಸಾವಿರ ರೂ. ಬೆಲೆಬಾಳುವ 30 ಗ್ರಾಂನ ಎರಡು ಚಿನ್ನದ ಖಡ್ಗ ಕದ್ದಿರುವ ಮಹಿಳೆಯರು.
ಹಾಡಹಗಲೇ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ದುಷ್ಕರ್ಮಿಗಳು ಪರಾರಿ!
ಚಿನ್ನಾಭರಣ ಖರೀದಿ ನೆಪದಲ್ಲಿ ಹಲವು ಒಡವೆಗಳನ್ನ ವಿಚಾರಿಸಿದ್ದ ಬುರ್ಖಾಧಾರಿ ಮಹಿಳೆಯರು. ಈ ವೇಳೆ ಚಿನ್ನಾಭರಣಗಳನ್ನು ತೆಗೆದಿದ್ದ ಶಾಪ್ ಸಿಬ್ಬಂದಿ. ಎಲ್ಲ ಒಡವೆಗಳನ್ನು ನೋಡುವಾಗ ಬಂಗಾರದ ಖಡ್ಗ ಕೈಯಲ್ಲೇ ಹಿಡಿದುಕೊಂಡಿರುವ ಮಹಿಳೆ. ಬಳಿಕ ಶಾಪ್ ಸಿಬ್ಬಂದಿ, ಯಾವುದೇ ಆಭರಣ ಇಷ್ಟವಾಗಿಲ್ಲ ಎಂದು ಮಹಿಳೆಯರು ಅಲ್ಲಿಂದ ಹೋಗಿದ್ದಾರೆ. ಆದರೆ ತನಿಷ್ಕ ಶಾಪ್ ಸೇಲ್ಸ್ ಮಹಿಳೆ ಬಂಗಾರದ ಒಡವೆಗಳನ್ನು ಒಳಗಡೆ ಇಡುವಾಗ ಬಂಗಾರದ ಖಡ್ಗ ಕಾಣದಿರುವುದು ಕಂಡು ಅನುಮಾನ ಬಂದಿದೆ. ಇನ್ನೊಮ್ಮೆ ಪರಿಶೀಲಿಸಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಅಷ್ಟೊತ್ತಿಗಾಗಲೇ ಶಾಪ್‌ನಿಂದ ಎಸ್ಕೇಪ್ ಆಗಿರುವ ಮಹಿಳೆಯರು.
ಸದ್ಯ ಚಿನ್ನಾಭರಣ ಕಳ್ಳತನ ಪ್ರಕರಣ ಸಂಬಂಧ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮಹಿಳೆಯರ ಸಿಸಿಟಿವಿ ದೃಶ್ಯ ಆಧರಿಸಿ ಚಲನವಲನ ಪತ್ತೆಹಚ್ಚಲು ಮುಂದಾಗಿರುವ ಪೊಲೀಸರು.