ರಾಯಚೂರು, (ಫೆ.24) : ಪ್ರೇಮಿಗಳ ದಿನಾಚರಣೆ ಮುನ್ನವೇ ಯುವ ಪ್ರೇಮಿಗಳಿಬ್ಬರು ಸಾರ್ವಜನಿಕ ಸ್ಥಳದಲ್ಲಿಯೇ ಮುತ್ತಿನ ಚುಂಬನದಲ್ಲಿ ಮೈಮರೆತ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ಬಸ್ ನಿಲ್ದಾಣದಲ್ಲಿ ನಡೆದಿತ್ತು. 

ಇದರ ಬೆನ್ನಲ್ಲೇ ಇದೇ ತರಹನಾದ ಘಟನೆಯೊಂದು ರಾಯಚೂರು ಜಿಲ್ಲೆಯ ಸಿಂಧನೂರು ಬಸ್ ನಿಲ್ದಾಣದಲ್ಲಿ ನಡೆದಿದೆ. ಜನ ಅಕ್ಕ-ಪಕ್ಕದಲ್ಲಿ ಇದ್ದರೂ ಸಹ ಈ ಜೋಡಿ ಮೈಮರೆತಿದೆ.

ಮುತ್ತಿನ ಮತ್ತೇ.. ಕೆಆರ್‌ ಪೇಟೆ ನಿಲ್ದಾಣದಲ್ಲಿಯೇ ಮೈಮರೆತ ಜೋಡಿ!  ವಿಡಿಯೋ ವೈರಲ್

ಹೌದು... ಸಿಂಧನೂರಿನ ಬಸ್ ನಿಲ್ದಾಣದಲ್ಲಿ ಯುವಕ ಯುವತಿ ಒಬ್ಬರನ್ನೊಬ್ಬರು ತಬ್ಬಿಕೊಂಡು ನಿಂತಿದ್ದಾರೆ. ಅಲ್ಲದೇ ಎಲ್ಲರೂ ನೋಡ ನೋಡುತ್ತಿದ್ದಂತೆ ಈ ಜೋಡಿ ಒಂದು ಹೆಜ್ಜೆ ಮುಂದು ಹೋಗಿ ಒಬ್ಬರನ್ನೊಬ್ಬರು ಲಿಪ್ ಲಾಕ್ ಮಾಡಿದ್ದಾರೆ. 

ಬಸ್ ನಿಲ್ದಾಣದಲ್ಲಿಯೇ ಸಾರ್ವಜನಿಕವಾಗಿ ಈ ಜೋಡಿ ಮೈ ಮರೆತು ಕಿಸ್ಸಿಂಗ್ ದೃಶ್ಯ ಸಾರ್ವಜನಿರೊಬ್ಬರು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
"