ಹುಬ್ಬಳ್ಳಿ(ಮಾ.14): ತನ್ನ ಪ್ರೀತಿ ತಿರಸ್ಕಾರ ಮಾಡಿದ್ದಾನೆಂಬ ಕಾರಣಕ್ಕೆ ಯುವಕನನ್ನು ಕರೆಸಿದ ಯುವತಿ ತನ್ನವರಿಂದ ಅಪಹರಣ ಮಾಡಿಸಿ ಹಲ್ಲೆ ಮಾಡಿಸಿದ್ದಲ್ಲದೆ 5 ಲಕ್ಷ ಕೊಡದಿದ್ದರೆ ಫೋಟೋ, ವಿಡಿಯೋವನ್ನು ಬಹಿರಂಗ ಮಾಡುವುದಾಗಿ ಹೆದರಿಸಿ ಜೀವ ಬೆದರಿಕೆ ಹಾಕಿಸಿದ ಪ್ರಕರಣ ನಗರದಲ್ಲಿ ನಡೆದಿದೆ. 

ಈ ಸಂಬಂಧ 10 ಜನರ ವಿರುದ್ಧ ಗೋಕುಲ ರಸ್ತೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಲಿಂಗರಾಜ ನಗರದ ಕುಮಾರಸ್ವಾಮಿ ರಾಚಯ್ಯ ಕೊಟಗಿಮಠ ಎಂಬುವರೇ ಹಲ್ಲೆಗೊಳಗಾದವರು. 

ಬಾಯ್​ಫ್ರೆಂಡ್​ನ ಅಸಲಿ ಮುಖವಾಡ ಬಯಲು: ಪ್ರಾಣಬಿಟ್ಟ ಪ್ರಿಯತಮೆ!

ಈ ಪ್ರಕರಣದಲ್ಲಿ 5ನೇ ಆರೋಪಿಯಾದ ಯುವತಿಯ ಜತೆಗೆ ಕುಮಾರಸ್ವಾಮಿ ಪ್ರೀತಿ ಪ್ರೇಮ ನಡೆದಿತ್ತು. ಕುಮಾರಸ್ವಾಮಿ ಆಕೆಯನ್ನು ತಿರಸ್ಕರಿಸಿದ್ದಾನೆ. ಇದರಿಂದ ಯುವಕನನ್ನು ಅಪಹರಣ ಮಾಡಿಸಿ ಹಲ್ಲೆ ಮಾಡಿಸಿದ್ದಾಳೆ ಮತ್ತು ಹಣ ಕೊಡದಿದ್ದರೆ ಜೊತೆಗಿರುವ ಫೋಟೋ, ವಿಡಿಯೋ ಬಹಿರಂಗ ಮಾಡುವುದಾಗಿ ಬೆದರಿಸಿದ್ದಾಳೆ ಎಂದು ಆರೋಪಿಸಿ ದೂರು ನೀಡಲಾಗಿದೆ.