ಹೈದರಾಬಾದ್, (ಮಾ.13): ತಾನೂ ಮನಸಾರೆ ಪ್ರೀತಿಸಿದ ಯುವಕನ ಮುಖವಾಡ ತಿಳಿದು ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಖಮ್ಮಮ್​ ಜಿಲ್ಲೆಯಲ್ಲಿ ನಡೆದಿದೆ.

ರತ್ನಕುಮಾರಿ (24) ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ಖಮ್ಮಮ್​ ಜಿಲ್ಲೆಯ ಮಲಬಂಜಾರಾ ಗ್ರಾಮದ ನಿವಾಸಿ. ಖಮ್ಮಮ್​ನಲ್ಲಿ ದೋಬಿಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಈಕೆಗೆ ಖಮ್ಮಮ್​ ಮೂಲದ ಆಟೋ ಚಾಲಕ ಸಂಜಯ್​ ಪರಿಚಯವಾಗಿತ್ತು.

16ರ ಸುಂದರಿಯ ಸಾವಿನಲ್ಲಿ ತೆರೆದುಕೊಂಡ ಲವ್ ಸ್ಟೋರಿ: ಚಲುವೆಯ ರಹಸ್ಯ...!

ಆದರೆ, ಸಂಜಯ್​ಗೆ ಈಗಾಗಲೇ ಮದುವೆ ಆಗಿತ್ತು. ವಾಸ್ತವವನ್ನು ಮರೆಮಾಚಿ ರತ್ನ ಕುಮಾರಿಗೆ ದ್ರೋಹವೆಸಗುತ್ತಿದ್ದ. ಮದುವೆ ಆಗಿರುವ ವಿಚಾರ ರತ್ನಕುಮಾರಿಗೆ ತಿಳಿದಿರಲಿಲ್ಲ. ಕೆಲವು ದಿನಗಳ ಹಿಂದೆ ಈ ವಿಚಾರ ರತ್ನಕುಮಾರಿಗೆ ತಿಳಿದಿದು ಭಾರಿ ಆಘಾತ ಅನುಭವಿಸಿದ್ದಳು.

ಈ ನೋವಿನಿಂದ ಹೊರಬಾರದ ರತ್ನಕುಮಾರಿ ಮಾರ್ಚ್​ 9ರಂದು ತಮ್ಮ ಗ್ರಾಮಕ್ಕೆ ಹಿಂದಿರುಗಿದ್ದಾಳೆ. ಮಾರ್ಚ್​ 10ರಂದು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

 ಆಕೆಯನ್ನು ಪಾಲಕರು ಖಮ್ಮಮ್​ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾಳೆ. ಇದೀಗ ಸಂಜಯ್​ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.