ಗ್ಯಾಸ್ ಗೀಸರ್‌ ಬಳಸೋ ಮುನ್ನ ಎಚ್ಚರ; ಸ್ನಾನಕ್ಕೆ ಯುವತಿ ಮರಳಿ ಬರಲೇ ಇಲ್ಲ !

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚೆಗಷ್ಟೇ ಗೀಸರ್ ಗ್ಯಾಸ್​ ಸೋರಿಕೆಯಾಗಿ ಮಹಿಳೆ ಸಾವನ್ನಪ್ಪಿದ್ದರು, ಈ ಘಟನೆಯ ಬೆನ್ನಲ್ಲೇ ಇಂತಹದ್ದೇ ಮತ್ತೊಂದು ಘಟನೆ ವರದಿಯಾಗಿದೆ. ಗೀಸರ್ ಗ್ಯಾಸ್​​ ಸೋರಿಕೆಯಾಗಿ ಯುವತಿ ಸಾವನ್ನಪ್ಪಿದ ಘಟನೆ ಬಸವೇಶ್ವರ ನಗರದ ಕೃಷ್ಣ ಕಲ್ಯಾಣ ಮಂಟಪ ಬಳಿ ನಡೆದಿದೆ.

Gas geyser leak; Death of a young woman at Bengaluru rav

ಬೆಂಗಳೂರು (ಡಿ.26): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚೆಗಷ್ಟೇ ಗೀಸರ್ ಗ್ಯಾಸ್​ ಸೋರಿಕೆಯಾಗಿ ಮಹಿಳೆ ಸಾವನ್ನಪ್ಪಿದ್ದರು, ಈ ಘಟನೆಯ ಬೆನ್ನಲ್ಲೇ ಇಂತಹದ್ದೇ ಮತ್ತೊಂದು ಘಟನೆ ವರದಿಯಾಗಿದೆ.

ಗೀಸರ್ ಗ್ಯಾಸ್​​ ಸೋರಿಕೆಯಾಗಿ ಯುವತಿ ಸಾವನ್ನಪ್ಪಿದ ಘಟನೆ ಬಸವೇಶ್ವರ ನಗರದ ಕೃಷ್ಣ ಕಲ್ಯಾಣ ಮಂಟಪ ಬಳಿ ನಡೆದಿದೆ. ರಾಜೇಶ್ವರಿ (23) ಮೃತ ಯುವತಿ. ಮ್ಯಾಕ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ. ಅಣ್ಣನ ಮದುವೆ ಹಿನ್ನೆಲೆ ರಜೆ ಹಾಕಿ ಮನೆಯಲ್ಲಿದ್ದಳು. ಸ್ನಾನ ಮಾಡಲು ಹೋದಾಗ ನಡೆದಿರುವ ದುರಂತ. ಡಿಸೆಂಬರ್ 20 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ

ಡಿಸೆಂಬರ್ 20 ಮಧ್ಯಾಹ್ನ 1.45 ರಿಂದ 2 ಗಂಟೆ ಸುಮಾರಿಗೆ ಸ್ನಾನಕ್ಕೆ ತೆರಳಿದ್ದ ರಾಜೇಶ್ವರಿ ಬಹಳ ಸಮಯವಾದರೂ ಹೊರಗಡೆ ಬಂದಿರಲಿಲ್ಲ. ನಂತರ ಮನೆಯವರು ಬಾಗಿಲು ತೆಗೆದು ನೋಡಿದಾಗ ರಾಜೇಶ್ವರಿ ತೀವ್ರ ಅಸ್ವಸ್ಥಳಾಗಿ ಕೆಳಗೆ ಬಿದ್ದಿುವುದು ಕಂಡು ಬಂದಿದೆ. 

Gas Geyser Carbon Monoxide Leak : ಚಿಕ್ಕಬಾಣಾವರದ ತಾಯಿ-ಬಾಲಕಿ ಜೀವಕ್ಕೆ ಎರವಾದ ಗ್ಯಾಸ್ ಗೀಸರ್

ಕೂಡಲೇ ಆಕೆಯನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲೇ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಧೃಡಪಡಿಸಿದ್ದಾರೆ. ಘಟನೆ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ರಾಜೇಶ್ವರಿ ತಂದೆ ಹೇಳೋದೇನು? 

 ಗ್ಯಾಸ್ ಗೀಸರ್ ಸೈಲಂಟ್ ಕಿಲ್ಲರ್.. ಮುನ್ನೆಚ್ಚರಿಕೆ ಕ್ರಮ ಏನೇನು?

ನನ್ನ ಮಗನ ಮದುವೆ ಇದ್ದುದರಿಂದ ಮಗಳು ರಜೆ ಹಾಕಿದ್ದಳು. ಮ್ಯಾಕ್ಸ್ ನಲ್ಲಿ ಕೆಲಸ ಮಾಡುತ್ತಿದ್ದಳು. ಅಣ್ಣನ ಮದುವೆ ಮುಗಿಸಿಕೊಂಡು ಮನೆಗೆ ಬಂದಿದ್ದಳು. ಈ ವೇಳೆ ಸ್ನಾನ ಮಾಡಲು ಹೋಗಿದ್ದಾಳೆ. ಆಗ ಗ್ಯಾಸ್ ಗೀಸರ್ ಲೀಕ್ ಆಗಿದೆ. ಅರ್ಧಗಂಟೆಯಾದ್ರು ಸ್ನಾನದ ಕೋಣೆಯಿಂದ ಹೊರ ಬಂದಿರಲಿಲ್ಲ. ಹೀಗಾಗಿ ನನ್ನ ಮಗ ಬಾಗಿಲು ಬಡಿದಿದ್ದಾನೆ. ಬಳಿಕ ಒಳಗೆ ನೋಡಿದಾಗ ತೀವ್ರ ಅಸ್ವಸ್ಥಳಾಗಿ ಬಿದ್ದಿದ್ದ ಮಗಳು. ನನ್ನ ಮಗ ನೋಡಿ ಕೂಡಲೇ ಆಸ್ಪತ್ರೆಗೆ ತೆಗೆದುಕೊಂಡು ಹೋದ. ಆದ್ರೆ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ವೈದ್ಯರು. ಈಗಾಗಲೇ ಮೃತ ಪಟ್ಟಿದ್ದಾಳೆಂದು ತಿಳಿಸಿದ್ರು. ದಯವಿಟ್ಟು ಯಾರು ಗ್ಯಾಸ್ ಗೀಸರ್ ಬಳಸಬೇಡಿ. ನನ್ನ ಮಗಳಿಗೆ ಆದಂತೆ ಬೇರೆಯವರಿಗೆ ಆಗಬಾರದು. ಮಗಳು ರಾಜೇಶ್ವರಿ ಕಣ್ಣನ್ನು ದಾನ ಮಾಡಿದ್ದೇವೆ ಎಂದ ತಂದೆ ಶ್ರೀಧರ್.

Latest Videos
Follow Us:
Download App:
  • android
  • ios