Asianet Suvarna News Asianet Suvarna News

Crime: ಕಾಡುಗಳ್ಳ ವೀರಪ್ಪನ್‌ ಸಹಚರ ಜ್ಞಾನಪ್ರಕಾಶ್‌ಗೆ ಜಾಮೀನು

ರಾಜ್ಯದ ಕುಖ್ಯಾತ ಕಾಡುಗಳ್ಳಿ ವೀರಪ್ಪನ್ ಸಹಚರ ಜ್ಞಾನಪ್ರಕಾಶ್ (68) ಬಿಡುಗಡೆಯಾದ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾನೆ. ಜ್ಞಾನ ಪ್ರಕಾಶ್‌ 1993 ರಲ್ಲಿ ನಡೆದಿದ್ದ ಪಾಲಾರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯೂ ಆಗಿದ್ದನು.

Gangster Veerappan accomplice Gnanaprakash granted bail sat
Author
First Published Dec 20, 2022, 3:09 PM IST

ಚಾಮರಾಜನಗರ (ಡಿ.20): ರಾಜ್ಯದ ಕುಖ್ಯಾತ ಕಾಡುಗಳ್ಳಿ ವೀರಪ್ಪನ್ ಸಹಚರ ಜ್ಞಾನಪ್ರಕಾಶ್ (68) ಬಿಡುಗಡೆಯಾದ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾನೆ. ಜ್ಞಾನ ಪ್ರಕಾಶ್‌ 1993 ರಲ್ಲಿ ನಡೆದಿದ್ದ ಪಾಲಾರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯೂ ಆಗಿದ್ದನು. ಆದರೆ, ಮಾನವೀಯತೆ ಆಧಾರದ ಮೇಲೆ ಜಾಮೀನು ಮಂಜೂರು‌ ಮಾಡಲಾಗಿದೆ ಎಂದು ತಿಳಿದುಬಂದಿದೆ.

ತಮಿಳುನಾಡು, ಕರ್ನಾಟಕ ಮತ್ತು ಕೇರಳ ರಾಜ್ಯಗಳ ಗಡಿಯಲ್ಲಿನ ಕಾಡುಗಳಲ್ಲಿ ಅವಿತು ಶ್ರೀಗಂಧ ಮರ ಕಡಿದು ಸಾಗಣೆ, ಆನೆದಂತ, ಕಾಡು ಪ್ರಾಣಿಗಳ ಚರ್ಮಗಳನ್ನು ಸ್ಮಗ್ಲಿಂಗ್‌ ಮಾಡುತ್ತಿದ್ದ ವೀರಪ್ಪನ್‌ ಅನ್ನು ಹಿಡಿಯಲು ಪೊಲೀಸರು ಮಾಡಿದ ಸಾಹಸ ಅಷ್ಟಿಷ್ಟೇನಲ್ಲ. ಪ್ರತಿಬಾರಿ ದಾಳಿ ಮಾಡಿದಾಗಲೂ ಹಲವು ಪೊಲೀಸರು ಸಾವನ್ನಪ್ಪಿದ್ದರು. ಹೀಗೆ ಪೊಲೀಸರ ದಾಳಿ ವೇಳೆ ಸಿಕ್ಕಿದ್ದ ಜ್ಞಾನ ಪ್ರಕಾಶ್‌ನನ್ನು ಪೊಲೀಸರು ಬಂಧಿಸಿದ್ದರು. ನಂತರ ಶಿಕ್ಷೆಗೆ ಗುರಿಪಡಿಸಲಾಗಿತ್ತು. ಜೈಲಿನಲ್ಲಿದ್ದ ಜ್ಞಾನ ಪ್ರಕಾಶ್‌ ಹಲವು ದಿನಗಳಿಂದ ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದನು.

ಮರಣದಂಡನೆ ಶಿಕ್ಷೆಯಿಂದ ಪಾರು: ಪೊಲೀಸರ ಕೈಗೆ ಸಿಕ್ಕಿದ್ದ ಜ್ಞಾನಪ್ರಕಾಶ್‌ಗೆ ಟಾಡಾ ನ್ಯಾಯಾಲಯದಿಂದ 1997 ರಲ್ಲಿ ಗಲ್ಲುಶಿಕ್ಷೆ ವಿಧಿಸಲಾಗಿತ್ತು. ಆದರೆ, ನಂತರ 2014 ರಲ್ಲಿ ಸುಪ್ರೀಂಕೋರ್ಟ್‌ನಿಂದ ಗಲ್ಲುಶಿಕ್ಷೆಯನ್ನು ಬದಲಿಸಿ ಜೀವಾವಧಿ ಶಿಕ್ಷೆಯಾಗಿ ಮಾರ್ಪಾಡು ಮಾಡಲಾಗಿತ್ತು. ಆದರೆ, ಸಂವಿಧಾನದಲ್ಲಿ ಯಾವೊಬ್ಬ ದೇಶದ ವ್ಯಕ್ತಿಯೂ ಅನಾರೋಗ್ಯದಿಂದ ಬಳಲಬಾರದು ಮತ್ತು ಸಾಯಬಾರದು ಎಂದು ತಿಳಿಸಲಾಗಿದೆ. ಇದಕ್ಕಾಗಿ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವಂತೆಯೂ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಜ್ಞಾನ ಪ್ರಕಾಶ್‌ಗೆ ಚಿಕಿತ್ಸೆ ಪಡೆಯಲು ಮತ್ತು ಇತರೆ ಕಾರಣಗಳಿಂದ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

Chamarajanagar: ನವೀಕರಣಗೊಂಡು ಸ್ಮಾರಕವಾಯಿತು ವೀರಪ್ಪನ್‌ನನ್ನು ಬಂಧಿಸಿದ್ದ ಹುತಾತ್ಮ ಅರಣ್ಯಾಧಿಕಾರಿಯ ಜೀಪ್!

ಎರಡು ವರ್ಷದ ಹಿಂದೆ ಸಾವನ್ನಪ್ಪಿದ್ದ ಒಬ್ಬ ಸಹಚರ: ದಂತಚೋರ ವೀರಪ್ಪನ್ ನೊಂದಿಗೆ ಪಾಲಾರ್ ಬಾಂಬ್ ಸ್ಪೋಟ ಪ್ರಕರಣದಲ್ಲಿ ಭಾಗಿಯಾಗಿ ಜೀವವಧಿ ಶಿಕ್ಷೆ ಅನುಭವಿಸುತ್ತಿದ್ದ ಬಿಲವೇಂದ್ರನ್(70) ಮೈಸೂರಿನ‌ ಕೆ.ಆರ್.ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ತಾಲೂಕಿನ ಮಾರ್ಟಳ್ಳಿ ಗ್ರಾಮದ ಬಿಲವೇಂದ್ರನ್  ಗಲ್ಲು ಶಿಕ್ಷೆಯಿಂದ ಪಾರಾಗಿ ಮೈಸೂರು ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರು. ಇದೀಗ ಅನಾರೋಗ್ಯದಿಂದ ಬಿಲವೇಂದ್ರ ಸಾವಿಗೀಡಾಗಿದ್ದಾರೆ. ವೀರಪ್ಪನ್ ಜೊತೆಗೆ ಗುರುತಿಸಿಕೊಂಡು ಅನೇಕ ಕುಕೃತ್ಯಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದರು. ಜೈಲಿನಲ್ಲಿ ಪ್ರಜ್ಞೆ ತಪ್ಪಿದ ಹಿನ್ನೆಲೆ ಅಪರಾಧಿಯನ್ನು ಕೆ.ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಿಲವೇಂದ್ರನ್ ಸಾವಿಗೀಡಾಗಿದ್ದಾರೆ.

Follow Us:
Download App:
  • android
  • ios