ಹೆಸರಿನ ಜೊತೆ ಅಣ್ಣಾ ಸೇರಿಸುವ ಮೂಲಕ ಗೌರವ ಸೂಚಿಸುವುದು ಸಾಮಾನ್ಯ. ಆದರೆ ಒಂದೇ ಗುಂಪಿನಲ್ಲಿ ಇದೇ ಗೌರವ ನೀಡದ ಕಾರಣಕ್ಕೆ ಜಗಳ ನಡೆದಿದೆ. ತನಗೆ ಅಣ್ಣಾ ಎಂದು ಕರೆಯುವ ಬದಲು ಹೆಸರಿಟ್ಟು ಕರೆದಿದ್ದಾನೆ ಎಂದು ಗುಂಡಿನ ಚಕಮಕಿ ನಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟರೇ ಸೋ ಕಾಲ್ಡ್ ಅಣ್ಣಾ ಗಂಭೀರವಾಗಿ ಗಾಯಗೊಂಡಿದ್ದಾನೆ. 

ದೆಹಲಿ(ಅ.10) ಅಣ್ಣಾ ಎಂದು ಕರೆಯುವ ಬದಲು ತನ್ನ ಹೆಸರಿಟ್ಟು ಕರೆದಿದ್ದಾನೆ ಅನ್ನೋ ಕಾರಣಕ್ಕೆ ಗ್ಯಾಂಗ್‌ಸ್ಟರ್ ಗುಂಪಿನೊಳಗೆ ಮಾತಿನ ಚಕಮಕಿ ನಡೆದು ಗುಂಡಿನ ದಾಳಿಯಾಗಿದೆ.ಪರಿಣಾಮ ಇಬ್ಬರು ಮೃತಪಟ್ಟಿದ್ದರೆ, ಮತ್ತೊರ್ವ ಗಂಭೀರವಾಗಿ ಗಾಯಗೊಂಡ ಘಟನೆ ದೆಹಲಿಯಲ್ಲಿ ನಡೆದಿದೆ. ಗ್ಯಾಂಗ್‌ಸ್ಟರ್ ಗುಂಪಿನ ಇಬ್ಬರು, ಅದೇ ಗುಂಪಿನ ಹಿರಿಯ ಸದಸ್ಯನೊಬ್ಬನನ್ನು ಭೇಟಿಯಾಗಿ ಮಹತ್ವದ ಮಾತುಕತೆಗೆ ತೆರಳಿದ್ದಾರೆ. ಆದರೆ ಭೇಟಿ ವೇಳೆ ತನಗೆ ಅಣ್ಣಾ ಎಂದು ಕರೆಯದ ಕಾರಣ ಕುಪಿತಗೊಂಡ ಹಿರಿಯ ಸದಸ್ಯ ಹಾಗೂ ಇತರ ಇಬ್ಬರ ನಡುವೆ ಗುಂಡಿನ ಕಾಳಗ ನಡೆದಿದೆ.

ದೆಹಲಿಯ ಅಶೋಕ ನಗರ ವಲಯದಲ್ಲಿ ಈ ಘಟನೆ ನಡೆದಿದೆ. ಗ್ಯಾಂಗ್‌ಸ್ಟರ್ ಗುಂಪಿನ ರಘು ಹಾಗೂ ಬುರಾ ಅನ್ನೋ ಇಬ್ಬರು ಅದೇ ಗುಂಪಿನ ಹಿರಿಯ ಸದಸ್ಯ ರವಿಕಾಂತ್ ಅಲಿಯಾಸ್ ದಾಬ್ಲು ಭೇಟಿಯಾಗಲು ತೆರಳಿದ್ದಾರೆ. ಸೋಮವಾರ ರಾತ್ರಿ ಅಶೋಕನಗರ ತಲುಪಿದ ರಘು ಹಾಗೂ ಬುರಾ , ದಾಬ್ಲುವನ್ನು ಭೇಟಿಯಾಗಿದಾದರೆ. ಇಬ್ಬರು ಕಾಯುತ್ತು ಕುಳಿತಿರುವಾಗ ದಾಬ್ಲು ಆಗಮಿಸಿದ್ದಾನೆ. ಈ ವೇಳೆ ಬುರಾ ಎದ್ದು ನಿಂತು ದಾಬ್ಲು ಬಾಯಿ(ದಾಬ್ಲು ಅಣ್ಣಾ) ಎಂದು ಕರೆದಿದ್ದಾನೆ. ಆದರೆ ರಘು ನೋಡೋ ದಾಬ್ಲು, ಇದು ನಮ್ ಪ್ಲಾನ್ ಎಂದು ಮಾತು ಆರಂಭಿಸಿದ್ದಾನೆ.

ಚಿಕ್ಕಮಗಳೂರು: ಗಾಂಜಾ ಮತ್ತಿನಲ್ಲಿ ಗನ್ ಹಿಡಿದು ಹುಚ್ಚಾಟ ಮೆರೆಯುತ್ತಿದ್ದ ಯುವಕ ಅರೆಸ್ಟ್‌

ಗ್ಯಾಂಗ್‌ಸ್ಟರ್ ಗುಂಪಿನ ಹಿರಿಯ ಸದಸ್ಯ ನಾನು. ಎಲ್ಲರೂ ನನ್ನನ್ನು ದಾಬ್ಲು ಭಾಯ್ ಎಂದು ಕರೆಯುತ್ತಾರೆ. ಆದರೆ ನನ್ನ ಜೂನಿಯರ್ ರಘು ಮಾತ್ರ ಏಕವಚನದಲ್ಲೇ ಹೆಸರನ್ನು ಕರೆದಿದ್ದಾನೆ ಎಂದು ಉರಿದು ಬಿದ್ದಿದ್ದಾನೆ. ಇದೇ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದೆ. ಇತ್ತ ಕೋಪಗೊಂಡ ರಘು ಪಿಸ್ತೂಲ್ ತೆಗೆದು ದಾಬ್ಲು ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ.

ಅಷ್ಟರಲ್ಲೇ ದಾಬ್ಲು ಪಕ್ಕದಲ್ಲಿದ್ದ ಸಹಚರರು ಪ್ರತಿದಾಳಿ ನಡೆಸಿ ರಘು ಹತ್ಯೆ ಮಾಡಿದ್ದಾರೆ. ಇತ್ತ ಇವರಿಬ್ಬರ ಜಗಳದ ನಡುವೆ ಸಿಲುಕಿಕೊಂಡ ಬುರಾ ಮೇಲೆ ಚಾಕು ಇರಿಯಲಾಗಿದೆ. ಇಬ್ಬರು ಸ್ಥಳದಲ್ಲೆ ಮೃತಪಟ್ಟರೆ, ಇತ್ತ ದಾಬ್ಲು ಗಂಭೀರವಾಗಿ ಗಾಯಗೊಂಡಿದ್ದಾನೆ. ದಾಬ್ಲು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆದರೆ ಪರಿಸ್ಥಿತಿ ಗಂಭೀರವಾಗಿದೆ.

ಕೊಲ್ಲುವ ಮೊದಲು ಅತ್ಯಾಚಾರವೆಸಗಿದ್ದನಾ ಪಾಪಿ..? ಆ ರಾತ್ರಿ ಮೈಸೂರಿನಲ್ಲಿ ನಡೆದಿದ್ದೇನು..?

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕೇವಲ ಕೊಲೆ ಪ್ರಕರಣ ಮಾತ್ರ ದಾಖಲಾಗಿಲ್ಲ. ಗ್ಯಾಂಗ್‌ಸ್ಟರ್ ತಂಡದ ವಿರುದ್ಧವೂ ಪ್ರಕರಣ ದಾಖಲಾಗಿದೆ. ಇದೀಗ ಪೊಲೀಸರು ಇವರ ಪ್ಲಾನ್ ಏನು ಅನ್ನೋದನ್ನು ಬಹಿರಂಗಪಡಿಸಲು ಮುಂದಾಗಿದ್ದಾರೆ.