ತಾಲೂಕಿನ ರೆಸಾರ್ಟ್‌ವೊಂದರ ಈಜುಕೊಳದಲ್ಲಿ ಕ್ಷುಲಕ ಕಾರಣಕ್ಕೆ 8 ಜನರು ಗಾಯಗೊಂಡ ಘಟನೆ ಭಾನುವಾರ ಸಂಜೆ ನಡೆದಿದೆ. ಈ ಘಟನೆಯಲ್ಲಿ ಕೊಪ್ಪಳದ ಮಹಿಳಾ ಪೇದೆ ಮೇಲೆ ಹಲ್ಲೆ ನಡೆದಿದ್ದು, ಅವರ ಚಿನ್ನದ ಸರ ನಾಪತ್ತೆಯಾಗಿದೆ.

ಗಂಗಾವತಿ (ಮೇ.17): ತಾಲೂಕಿನ ರೆಸಾರ್ಟ್‌ವೊಂದರ ಈಜುಕೊಳದಲ್ಲಿ ಕ್ಷುಲಕ ಕಾರಣಕ್ಕೆ 8 ಜನರು ಗಾಯಗೊಂಡ ಘಟನೆ ಭಾನುವಾರ ಸಂಜೆ ನಡೆದಿದೆ. ಈ ಘಟನೆಯಲ್ಲಿ ಕೊಪ್ಪಳದ ಮಹಿಳಾ ಪೇದೆ ಮೇಲೆ ಹಲ್ಲೆ ನಡೆದಿದ್ದು, ಅವರ ಚಿನ್ನದ ಸರ ನಾಪತ್ತೆಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಡೆದಿದ್ದೇನು: ತಾಲೂಕಿನ ಚಿಕ್ಕ ಜಂತಕಲ್ ಗ್ರಾಮದಿಂದ ರೆಸಾರ್ಟ್‌ಗೆ ಬಂದಿದ್ದ ಮಹಿಳೆಯರು ಸೇರಿದಂತೆ 8 ಜನರ ಗುಂಪು ಈಜುಗೊಳದಲ್ಲಿ ಇಳಿದಿದ್ದಾರೆ. ಇದೇ ಸಮಯದಲ್ಲಿ ಗಂಗಾವತಿಯಿಂದ ಬಂದಿದ್ದ ಕೆಲ ಯುವಕರು ನೀರಿನ ಬಾಟಲು ಎಸೆದಾಡುವ ಪ್ರಸಂಗ ನಡೆದು ವಿಕೋಪಕ್ಕೆ ಹೋಗಿದೆ. ನಂತರ ಅಂಜನಾದ್ರಿಯ ಬಳಿಯಲ್ಲಿ ಮಾತಿನ ಚಕಮಕಿ ನಡೆದು ಕೈ ಕೈ ಮಿಸಲಾಯಿಸಿದ್ದಾರೆ. ಇದರಲ್ಲಿ ಪೇದೆ ಮೇಲೆ ಹಲ್ಲೆ ನಡೆದಿದ್ದು, ಚಿನ್ನದ ಸರ ಕಿತ್ತುಕೊಂಡ್ಡಿದ್ದಾರೆ. ಸದ್ಯ ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಭಾರಿ ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ, ಗ್ರಾಮೀಣ ಪೋಲಿಸ್ ಠಾಣೆ ಸಿಪಿಐ ರಂಗಪ್ಪ ದೊಡ್ಮನಿ,ಗಂಗಾವತಿ ನಗರ ಪೋಲಿಸ್ ಠಾಣೆ ಪಿಐ ಪ್ರಕಾಶ ಯಾತನೂರ ನಗರದ ಸಾರ್ವಜನಿಕ ಆಸ್ಪತ್ರೆ ಭೇಟಿ ನೀಡಿ, ವಿಚಾರಣೆ ಕೈಗೊಂಡಿದ್ದಾರೆ.

ಪೊಲೀಸ್ ಬಿಗಿ ಭದ್ರತೆ

ಗಂಗಾವತಿ ಸಾರ್ವಜನಿಕ ಆಸ್ಪತ್ರೆಗೆ ಗಾಯಾಳುಗಳನ್ನು ವಿಚಾರಿಸಲು ಜನರು ಬರುತ್ತಿದ್ದಂತೆಯೇ ಗುಂಪುಗಳನ್ನು ಪೋಲಿಸರು ಚದುರಿಸಿದ್ದಾರೆ.