ಗುಂಪೊಂದು ಮಹಿಳಾ ಸಾಫ್‌್ಟವೇರ್‌ ಎಂಜಿನಿಯರ್‌ ಅವರನ್ನು ರೇಗಿಸಿದ್ದಲ್ಲದೆ ಅವರ ಕಾರಿನ ಗ್ಲಾಸ್‌ ಒಡೆದು ಹಾಕಿರುವ ಘಟನೆ ಪೀಣ್ಯ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪೀಣ್ಯ ದಾಸರಹಳ್ಳಿ (ಜು.17) :  ಗುಂಪೊಂದು ಮಹಿಳಾ ಸಾಫ್‌್ಟವೇರ್‌ ಎಂಜಿನಿಯರ್‌ ಅವರನ್ನು ರೇಗಿಸಿದ್ದಲ್ಲದೆ ಅವರ ಕಾರಿನ ಗ್ಲಾಸ್‌ ಒಡೆದು ಹಾಕಿರುವ ಘಟನೆ ಪೀಣ್ಯ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಹಿಳಾ ಟೆಕ್ಕಿಯೊಬ್ಬರು ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಾಗ ಆಕೆಯನ್ನು ಹಿಂಬಾಲಿಸಿದ ನಾಲ್ಕು ಜನ ಆರೋಪಿಗಳ ಗುಂಪು ಆಕೆಯ ಮೊಬೈಲ್‌ ನಂಬರ್‌ ಕೇಳಿದ್ದಾರೆ. ನನ್ನ ಮೊಬೈಲ್‌ ನಂಬರ್‌ ನಿಮಗೇಕೆ ಕೊಡಬೇಕು ಎಂದಾಗ ಸುಮ್ಮನೆ ಟೈಂ ಪಾಸ್‌ಗೆ ಕೊಡಿ ಎಂದಿದ್ದಾರೆ. ಈ ವೇಳೆ ಟೆಕ್ಕಿ ಪ್ರತಿಕ್ರಿಯಿಸದೆ ಅಲ್ಲಿಂದ ಮನೆಗೆ ತೆರಳಿದ್ದಾರೆ.

Bengaluru: ಭಿಕ್ಷಾಟನೆ ಬಿಟ್ಟು ರಾಬರಿಗಿಳಿದ ಮಂಗಳಮುಖಿಯರು: ಟೆಕ್ಕಿಗಳೇ ಇವರ ಟಾರ್ಗೆಟ್‌

ಇದಾದ ಕೆಲವೇ ಹೊತ್ತಲ್ಲಿ ಆಕೆಯ ಮನೆ ಬಳಿಗೆ ನಡೆದುಕೊಂಡು ಬರುವ ಇಬ್ಬರು ವ್ಯಕ್ತಿಗಳು ಕಲ್ಲು ತೆಗೆದುಕೊಂಡು ಕಾರಿನ ಹಿಂಬದಿ ಗಾಜನ್ನು ಒಡೆದಿದ್ದಾರೆ. ಇದಾದ ಐದೇ ನಿಮಿಷಗಳಲ್ಲಿ ಮತ್ತಿಬ್ಬರು ಬೈಕ್‌ನಲ್ಲಿ ಬಂದು ತಾವೇ ತಂದಿದ್ದ ಕಲ್ಲನ್ನು ಕಾರಿನ ಗಾಜಿಗೆ ಎಸೆದು ಪರಾರಿಯಾಗಿದ್ದಾರೆ. ಈ ಘಟನೆ ನಡೆದಿರುವುದು ಯಾವುದೋ ಹಳೇ ದ್ವೇಷಕ್ಕೆ ಇರಬಹುದು ಎಂದು ಪೀಣ್ಯ ಪೊಲೀಸರು ಶಂಕಿಸಿದ್ದಾರೆ. ಘಟನೆಯ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರೋಪಿಗಳಲ್ಲಿ ಒಬ್ಬ ವೆಂಕಟೇಶ್‌ ಎಂದು ಪೊಲೀಸರು ಗುರುತಿಸಿದ್ದಾರೆ.

ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಭೇಟಿಯಾದ ಚೆಲುವೆ ನಂಬ್ಕೊಂಡು 92 ಲಕ್ಷ ಕಳ್ಕೊಂಡ ಟೆಕ್ಕಿ: ಮದ್ವೆನೂ ಆಗ್ಲಿಲ್ಲ, ಹಣನೂ ಇಲ್ಲ!

ಸದ್ಯ ಘಟನೆಗೆ ಸಂಬಂಧಿಸಿದಂತೆ ಪೀಣ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗಾಗಿ ಪೀಣ್ಯ ಪೊಲೀಸರು ಬಲೆ ಬೀಸಿದ್ದಾರೆ.