ಪುದುಚೇರಿ(ಅ. 19) ಆನ್ ಲೈನ್ ಜೂಜಿನ ಜಾಹೀರಾತುಗಳು ಲೆಕ್ಕವಿಲ್ಲದಷ್ಟು ಬರುತ್ತಿವೆ.  ಅದಕ್ಕೆ ಮರುಳಾಗಿ ಒಮ್ಮೆ ಚಟಕ್ಕೆ ಅಂಟಿಕೊಂಡರೆ  ಅಷ್ಟೆ ಕತೆ. ಆನ್ ಲೈನ್ ಜೂಜಿಗೆ ದಾಸನಾಗಿದ್ದ ವ್ಯಕ್ತಿಯೊಬ್ಬರು 30 ಲಕ್ಷ ರೂ. ನಷ್ಟ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ವಿಜಯ್ ಕುಮಾರ್ ಸುಸೈಡ್‌ ಗೂ ಮುನ್ನ ವೈಸ್ ಮೆಸೇಜ್ ಹೆಂಡತಿಗೆ ಕಳಿಸಿ ತಮ್ಮ ಘೋರ ನಿರ್ಧಾರದ ಬಗ್ಗೆ ತಿಳಿಸಿದ್ದಾರೆ.

ಆನ್ ಲೈನ್ ಗ್ಯಾಂಬ್ಲಿಂಗ್ ಆವರಿಸಿಕೊಳ್ಳುವುದು ಹೇಗೆ?

ಸಾಕಷ್ಟು ಸಾಲ ಮಾಡಿಕೊಂಡಿದ್ದ ವಿಜಯ್ ಕುಮಾರ್ ಸಂಕಷ್ಟ ಅನುಭವಿಸುತ್ತಿದ್ದರು. ದಯವಿಟ್ಟು ಯಾರೂ ಆನ್ ಲೈನ್ ಜೂಜಾಟದ ದಾಸರಾಗಬೇಡಿ ಎಂದು ವಿಜಯ್ ಕುಮಾರ್ ಸಾಯುವುದಕ್ಕೂ ಮುನ್ನ ಮನವಿ ಮಾಡಿಕೊಂಡಿದ್ದಾರೆ.

ಮಂಗಳಂ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಟ್ಟು ಕರಕಲಾಗಿದ್ದ ವಿಜಯ್ ಕುಮಾರ್ ದೇಹವನ್ನು ಮರಣೋತ್ತರ ಪ್ರರೀಕ್ಷೆಗೆ ಕಳಿಸಲಾಗಿದೆ.