Asianet Suvarna News

ಹಿಂದಿನಿಂದ ಬಂದು ಕತ್ತಿಗೆ ಇರಿದ ಸ್ನೇಹಿತ, ಆಸ್ಪತ್ರೆಯಲ್ಲಿ ಸಿಪಾಯಿ

* ರಸ್ತೆ ಮಧ್ಯೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿ
* ಸ್ನೇಹ ತೆಗೆಯಲು ಬಂದ ವ್ಯಕ್ತ ಪರಾರಿಯಾಗಿದ್ದಾನೆ
*ಹಣಕಾಸಿನ ವಿಚಾರಕ್ಕೆ  ಕೊಲೆ ಯತ್ನವಾಗಿದೆ

Friend stabbed man neck T Narasipura mysuru mah
Author
Bengaluru, First Published Jun 20, 2021, 10:13 PM IST
  • Facebook
  • Twitter
  • Whatsapp

ಮೈಸೂರು(ಜೂ. 20) ರಸ್ತೆ ಬದಿ ವ್ಯಕ್ತಿಯೊಬ್ಬ ರಕ್ತದ ಮಡುವಿನಲ್ಲಿ ಇದಿದ್ದ. ಆತನ ಕುತ್ತಿಗೆ ಹಾಗೂ ಎದೆಗೆ ಚಾಕುವಿನಿಂದ ಇರಿದು ಗಾಯ ಮಾಡಲಾಗಿತ್ತು.ಕಾರಣ ಯಾರು ಅಂತ ಕೇಳಿದವರಿಗೆ ಕುಮಾರ, ಕುಮಾರ ಅಂತಷ್ಟೆ ಹೇಳ್ತಿದ್ದ. ಅಷ್ಟಕ್ಕೂ ಆ ವ್ಯಕ್ತಿಯ ಕೊಲೆಯತ್ನಕ್ಕೆ ಕಾರಣ ಹುಡುಕುತ್ತಾ ಹೋದರೆ ಅಕ್ರಮ ಸಂಬಂಧದ ವಾಸನೆ ಸುಳಿಯುತ್ತಿದೆ. ಆದ್ರೆ ಪೊಷಕರು ಮಾತ್ರ ಹಣಕಾಸು ವಿಚಾರಕ್ಕೆ‌ ಗಲಾಟೆ ನಡೆದಿದೆ ಎನ್ನುತ್ತಿದ್ದಾರೆ.

ಆಸ್ಪತ್ರೆ ಬೆಡ್ ಮೇಲೆ ಈಗೆ ಸಾವು ಬದುಕಿನ ನಡುವೆ ನರಳಾಡುತ್ತಿರುವ ವ್ಯಕ್ತಿ ಹೆಸರು ಸಿಪಾಯಿ. ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ವಾಟಾಳು ಗ್ರಾಮದ ನಿವಾಸಿ. ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿರುವ ಸಿಪಾಯಿಗೆ ತನ್ನದೇ ಗ್ರಾಮದ ಸ್ನೇಹಿತ ಕುಮಾರ್ ಚಾಕು ಹಾಕಿ ಕೊಲೆ ಮಾಡಲು ಯತ್ನಿಸಿದ್ದಾನೆ. ಶನಿವಾರ ಬೆಳಿಗ್ಗೆ ಊರ ಹೊರಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಹಿಂದಿನಿಂದ ಬಂದು ಕತ್ತಿಗೆ ಚಾಕುವಿನಿಂದ ಇರಿದಿದ್ದಾನೆ. ಸಿಪಾಯಿ ಕೆಳಗೆ ಬಿದ್ದ ನಂತರ ಆತನ ಎದೆಗೆ ಎರಡು ಬಾರಿ ಚುಚ್ಚಿ ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಿಪಾಯಿಯನ್ನು ಗ್ರಾಮಸ್ಥರು ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಮುಂದುವರಿದಿದೆ.

ಮೈಸೂರು; ಅತ್ತೆ ಕೊಂಕು ಮಾತಿಗೆ ಬೇಸತ್ತ ಸೊಸೆ ಸೀಮೆಎಣ್ಣೆ ಸುರಿದುಕೊಂಡಳು

ಅಷ್ಟಕ್ಕೂ ಸಿಪಾಯಿ ಹಾಗೂ ಕೂಮಾರ್ ಇಬ್ಬರೂ ಸ್ನೇಹಿತರಾಗಿದ್ದು, ಕೊಲೆಯತ್ನಕ್ಕೆ ಅಕ್ರಮ ಸಂಬಂದ ಕಾರಣ ಅಂತ ಹೇಳಲಾಗ್ತಿದೆ. ಕುಮಾರ್ ಪತ್ನಿ ಜೊತೆಗೆ ಸಿಪಾಯಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಅಂತ ಗ್ರಾಮದಲ್ಲಿ ಮಾತನಾಡಿಕೊಳ್ಳುತ್ತಿದ್ದ ಕಾರಣ ಕುಪಿತನಾದ ಕುಮಾರ್ ಈ ಕೃತ್ಯ ಮಾಡಿದ್ದಾನೆ ಎನ್ನಲಾಗಿದೆ. ಆದರೆ ಸಿಪಾಯಿ ಸಂಬಂಧಿಗಳು ಈ ವಿಚಾರವನ್ನು ಅಲ್ಲಗಳೆದಿದ್ದು, ಹಣಕಾಸಿನ ವಿಚಾರಕ್ಕೆ ಕೊಲೆಯತ್ನ ನಡೆದಿದೆ ಎನ್ನುತ್ತಾರೆ. ಕುಮಾರ್ ಹಾಗೂ ಸಿಪಾಯಿ ಇಬ್ಬರೂ ಡ್ರೈವರ್ ಕೆಲಸ ಮಾಡಿತ್ತಿದ್ದರು. ಕುಮಾರ್ ಸಿಪಾಯಿಗೆ ಕೆಲಸ ಕೊಡಿಸಿದ್ದ. ನಂತರ ಸರಿಯಾಗಿ ನಡೆದುಕೊಳ್ಳಲ್ಲ‌ ಎನ್ನುವ ಕಾರಣಕ್ಕೆ ಹಲ್ಲೆ ಮಾಡಿದ್ದಾನೆ ಎನ್ನುತ್ತಾರೆ.

ಒಟ್ಟಾರೆ ಕಾರಣ ಏನೇ ಇರಲಿ ಸ್ನೇಹದ ನಡುವೆ ಬಿರುಕು ಬಂದ ಕಾರಣಕ್ಕೇ ಕೊಲೆಯತ್ನ ನಡೆದಿದೆ. ಸ್ನೇಹಿತನ ಪ್ರಾಣ ತೆಗೆಯಲು ಬಂದವನು ಪರಾರಿಯಾಗಿದ್ದು, ಸಿಪಾಯಿ ಮಾತ್ರ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾನೆ.

 

Follow Us:
Download App:
  • android
  • ios