ಮನೆ ಲೀಜ್‌ಗೆ ಲಭ್ಯವಿದೆ ಎಂದು ಟ್ರೋಲೆಕ್ಸ್ ಕಂಪನಿ ಮೂಲಕ ಜಾಹೀರಾತು ಹೊರಡಿಸಿ ಲೀಜ್‌ಗೆ ಬಂದವರಿಗೆ ಮನೆ ನೀಡದೆ ಹಣ ಪಡೆದು ವಂಚಿಸುತ್ತಿದ್ದ ನಯ ವಂಚಕ ದಂಪತಿಯನ್ನು ಆನೇಕಲ್ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.

ಆನೇಕಲ್ (ಫೆ.20): ಮನೆ ಲೀಜ್‌ಗೆ ಲಭ್ಯವಿದೆ ಎಂದು ಟ್ರೋಲೆಕ್ಸ್ ಕಂಪನಿ ಮೂಲಕ ಜಾಹೀರಾತು ಹೊರಡಿಸಿ ಲೀಜ್‌ಗೆ ಬಂದವರಿಗೆ ಮನೆ ನೀಡದೆ ಹಣ ಪಡೆದು ವಂಚಿಸುತ್ತಿದ್ದ ನಯ ವಂಚಕ ದಂಪತಿಯನ್ನು ಆನೇಕಲ್ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣದ ವಿವರ:

ಮೂಲತಃ ಕೋಲಾರ ಜಿಲ್ಲೆಯ ವಂಚಕ ದಂಪತಿ ಸುಜಾತಾ, ಅಜಿತ್‌ ಬಂಧಿತರು. ಆನೇಕಲ್ ಠಾಣಾ ವ್ಯಾಪ್ತಿಯ ವಿಬಿಎಚ್‌ಸಿ ಗುಂಪು ಮನೆಗಳ ಪೈಕಿ ಸುಜಾತಾ ಹೆಸರಲ್ಲಿ 2, ಆಕೆಯ ತಂಗಿ ಗೀತಾ ರೆಡ್ಡಿ ಹೆಸರಲ್ಲಿ ಒಂದು ಮನೆಯಿದೆ. ಈ ಮನೆಗಳ ಮೇಲೆ ಬೊಮ್ಮನಹಳ್ಳಿಯ ಐಸಿಐಸಿಐ ಬ್ಯಾಂಕ್‌ನಿಂದ ಸಾಲ ಪಡೆದಿದ್ದು, ಅದರ ಅಸಲು, ಬಡ್ಡಿ, ಓಡಿ, ಚೆಕ್ ಇತರೇ ವೆಚ್ಚ ಸೇರಿ ಬೃಹತ್ ಮೊತ್ತವಾಗಿದೆ.

ನಿರ್ಮಾಪಕಿಯಿಂದ ಹಣ ಸುಲಿಯಲು ಕಿಡ್ನಾಪ್‌ ಕಥೆ ಕಟ್ಟಿದ ಕಾರು ಚಾಲಕ; ಮುಂದೆ ನಡೆದಿದ್ದೇನು?

ಹಣಕ್ಕಾಗಿ ದಂಪತಿ 6ರಿಂದ 8 ಲಕ್ಷ ರು. ಪಡೆದು ಮನೆಯನ್ನು ಹಸ್ತಾಂತರಿಸಿದ್ದಾರೆ. ಉತ್ತರ ಕರ್ನಾಟಕ ಮೂಲದ ಬಯೋಕಾನ್ ಉದ್ಯೋಗಸ್ತೆ ಲಕ್ಷ್ಮಿ ಲೀಜ್‌ ಪಡೆದು ಮನೆಗೆ ಬಂದ ಕೇವಲ 3 ತಿಂಗಳಲ್ಲಿ ಬ್ಯಾಂಕಿನವರು ಬಂದು ಮನೆ ಖಾಲಿ ಮಾಡಲು ತಿಳಿಸಿದ್ದಾರೆ. ಹಣ ಹಿಂದಿರುಗಿಸುವಂತೆ ಲಕ್ಷ್ಮಿ ಕೇಳಿದ್ದು, ಹಣ ವಾಪಸ್ ಕೊಡಲು ಸ್ವಲ್ಪ ಕಾಲಾವಕಾಶ ನೀಡಿ ಎಂದಿದ್ದಾರೆ. ನಂತರ, ಬಂಧುಗಳು ಬರಬೇಕು, ವ್ಯಾಪಾರದಲ್ಲಿ ತೊಡಗಿಸಿದ್ದೇನೆ ಎಂದು ಕಾಲ ತಳ್ಳಿದ್ದಾರೆ. ಜೋರು ಮಾಡಿ ಕೇಳಿದಾಗ ಯಾವುದಾದರೂ ಬಂದರೆ ಕೊಡುವೆ, ಇಲ್ಲ ಅಂದರೆ ಏನಾದರೂ ಮಾಡಿಕೊಳ್ಳಿ ಎಂದು ಬೆದರಿಸಿದ್ದಾರೆ.

ಬೆಂಗಳೂರು: ಪಾರ್ಟ್‌ಟೈಂ ಕೆಲಸದ ಸೋಗಲ್ಲಿ 1.07 ಲಕ್ಷ ವಂಚನೆ, ಕಂಗಾಲಾದ ಯುವತಿ

ಲಕ್ಷ್ಮಿ ಪೊಲೀಸರಿಗೆ ದೂರು ನೀಡಿದಾಗ ವಂಚಕ ದಂಪತಿಯ ಅಸಲೀಯತ್ತು ಬಯಲಾಗಿದೆ. ದಂಪತಿ ಇದೇ ರೀತಿ ಹಲವಾರು ಜನರಿಗೆ ವಂಚಿಸಿದ್ದು, ಒಟ್ಟು ಮೊತ್ತ ₹50 ಲಕ್ಷ ದಾಟಿದೆ ಎಂದು ಅಂದಾಜಿಸಲಾಗಿದೆ.

ಸೂರ್ಯ ನಗರ ಸಮೀಪ ಟ್ರೊಲೆಕ್ಸ್ ಶಾಪ್ ತೆರೆದಿದ್ದು, ಕಟ್ಟಡ ಮಾಲೀಕರಿಂದ ಹಣ ಪಡೆದು ಉಂಡೆನಾಮ ತಿದ್ದಿದ್ದಾರೆ ಎಂದೂ ಪೊಲೀಸರು ತಿಳಿಸಿದ್ದಾರೆ.