Asianet Suvarna News Asianet Suvarna News

Bengaluru: ರಾಜ್ಯಪಾಲರ ಹೆಸರಲ್ಲಿ ಮಹಾಮೋಸ: ವಿಧಾನಸೌಧ ಪೊಲೀಸರಿಂದ ಆರೋಪಿ ಬಂಧನ

ರಾಜ್ಯಪಾಲರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಮಹಾ ಮೋಸ ಮಾಡಲಾಗಿದೆ. ಯೂನಿವರ್ಸಿಟಿ ಸಿಂಡಿಕೇಟ್ ಮೆಂಬರ್ ಮಾಡುತ್ತೇನೆ ಎಂದು ವಂಚನೆ ಮಾಡುತ್ತಿದ್ದ ಆರೋಪಿಯನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ. 

Fraud in the name of Governor thavar chand gehlot Accused arrested gvd
Author
Bangalore, First Published Aug 6, 2022, 4:18 PM IST

ಬೆಂಗಳೂರು (ಆ.06): ರಾಜ್ಯಪಾಲರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಮಹಾ ಮೋಸ ಮಾಡಲಾಗಿದೆ. ಯೂನಿವರ್ಸಿಟಿ ಸಿಂಡಿಕೇಟ್ ಮೆಂಬರ್ ಮಾಡುತ್ತೇನೆ ಎಂದು ವಂಚನೆ ಮಾಡುತ್ತಿದ್ದ ಆರೋಪಿಯನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಗವರ್ನರ್ ಅಧೀನ ಕಾರ್ಯದರ್ಶಿ ಎಂದು ಹೇಳಿಕೊಂಡು ವಂಚನೆ ಮಾಡಿದ್ದಾನೆ. ತಾನು ಎಲ್ಲಾ ಯೂನಿವರ್ಸಿಟಿಗಳಿಗೆ ಸೆನೆಟ್ ಸದಸ್ಯ ಎಂದು ಹೇಳಿಕೊಂಡಿದ್ದ. 

ರಾಜ್ಯಪಾಲರಿಂದ ನೇಮಕಗೊಂಡ ಸೆನೆಟ್ ಸದಸ್ಯ ಎಂದು ಹೇಳಿ ಅದೇ ರೀತಿ ನಕಲಿ ಗುರುತಿನ ಚೀಟಿ ಮಾಡಿಕೊಂಡು ಓಡಾಡುತ್ತಿದ್ದ. ಗುರುತಿನ ಚೀಟಿ ತೋರಿಸಿ ಹಲವರಿಂದ ಅಕ್ರಮವಾಗಿ ಹಣ ಪಡೆದು ವಂಚನೆ ಮಾಡಿದ್ದಾನೆ. ಈ ಬಗ್ಗೆ ರಾಜ್ಯಪಾಲರ ಕಚೇರಿ ಅಧಿಕಾರಿಯಿಂದ ದೂರು ನೀಡಿದರು. ಇತ್ತೀಚೆಗೆ ಮಹಿಳೆಯೊಬ್ಬರನ್ನ ಸಂಪರ್ಕಿಸಿದ್ದ ಅಸಾಮಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಮಾಡುವುದಾಗಿ ಆಮಿಷ ಹೊಡ್ಡಿದ್ದ. 

Gadag: ಶ್ರಾವಣ ಶನಿವಾರವೇ ಹನುಮ ಮೂರ್ತಿಯನ್ನು ಕಳ್ಳತನ ಮಾಡಿದ ಕಿಡಿಗೇಡಿಗಳು

ಅದಕ್ಕಾಗಿ ನಕಲಿ ನೇಮಕಾತಿ ಪತ್ರ ರೆಡಿ ಮಾಡಿದ್ದ. ರಾಜ್ಯಪಾಲರು ಮತ್ತು ಕಚೇರಿ ಹೆಸರಿನಲ್ಲಿ ವಂಚನೆಗೆ ಮುಂದಾಗಿದ್ದ. ನಕಲಿ ಪತ್ರಗಳನ್ನ ತಯಾರಿಸಿ ಸಾರ್ವಜನಿಕರಿಗೆ ತೋರಿಸಿ ಹಣ ಪಡೆದು ವಂಚನೆ ಮಾಡುತ್ತಿದ್ದ. ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಫ್ರಭುಶಂಕರ್ ಅವರಿಂದ ದೂರು ನೀಡಿದರು. 

ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಸಿಸಿಬಿ ಪೊಲೀಸರು ಬಳ್ಳಾರಿ ಮೂಲದ ಸದರುಲ್ಲಾ ಖಾನ್ ಎಂಬಾತನ ಬಂಧಿಸಿದ್ದಾರೆ. ಉನ್ನತ ವ್ಯಾಸಂಗ ಮಾಡಿರುವ ಆರೋಪಿ ಸದರುಲ್ಲಾ ಖಾನ್ ಟ್ಯೂಷನ್ ಮಾಡುತ್ತಾ ಜೀವನ ನಡೆಸುತ್ತಿದ್ದ. ಆದರೆ ಕೊರೊನಾ ಕಾಲದಲ್ಲಿ ಟ್ಯೂಷನ್ ಕ್ಲೋಸ್ ಆಗಿತ್ತು. ಈ ವೇಳೆ ಸಂಕಷ್ಟಕ್ಕೆ ಸಿಲುಕಿ ಕಳ್ಳ ದಾರಿ ಹಿಡಿದಿದ್ದ. ಇದೇ ರೀತಿ ಹಲವರಿಗೆ ಸಣ್ಣ ಪುಟ್ಟ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡಿದ್ದಾನೆ. 

ಯಾದಗಿರಿಗೂ ಅಂಟಿದ ಪಿಎಸ್ಐ ಅಕ್ರಮ ನಂಟು: ಸಿದ್ದುಗೌಡ ಅರೆಸ್ಟ್

ನಂತರ ಯೂನಿವರ್ಸಿಟಿ ಸಿಂಡಿಕೇಟ್ ಸದಸ್ಯರನ್ನಾಗಿ ಮಾಡುತ್ತೇನೆ ಎಂದು ಹೊಸ ಡೀಲ್ ಶುರು ಮಾಡಿದ್ದ. ರಾಜ್ಯಪಾಲರ ಕಚೇರಿ ಹೆಸರು ಬಳಸಿಕೊಂಡು ವಂಚಿಸುತ್ತಿದ್ದ. ಈ ವಿಚಾರ ತಿಳಿದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.ಇನ್ನೂ ರಾಜ್ಯಪಾಲರ ಹೆಸರು ಹೇಳಿದರೆ ಜನ ಬೇಗ ನಂಬುತ್ತಾರೆ. ಯಾರು ತನ್ನ ಮೇಲೆ ಅನುಮಾನ ಪಡೋದಿಲ್ಲ ಎಂದು ರಾಜ್ಯಪಾಲರ ಹೆಸರು ಬಳಕೆ ಮಾಡಿ ಟೋಪಿ ಹಾಕಿದ್ದಾನೆ ಎನ್ನಲಾಗಿದೆ. 

Follow Us:
Download App:
  • android
  • ios