ರೀಲ್ಸ್ ಸ್ಟಾರ್ ಡಿಜೆ ದೀಪು ಹೆಸರಲ್ಲಿ ವಂಚನೆ ಪ್ರಕರಣ; ಆರೋಪಿ ಪ್ರದೀಪ್‌ನ ಮತ್ತೊಂದು ಮುಖವಾಡ ಬಯಲು!
ರೀಲ್ಸ್ ಸ್ಟಾರ್ ಡಿಜೆ ದೀಪು ಹೆಸರಲ್ಲಿ ನಕಲಿ ಅಕೌಂಟ್ ಸೃಷ್ಟಿಸಿ ಯುವತಿಯರಿಗೆ ವಂಚಿಸುತ್ತಿದ್ದ ಆರೋಪಿ ಪ್ರದೀಪ್‌ನ ಮತ್ತೊಂದು ಮುಖವಾಡ ಬಯಲಾಗಿದೆ.

ಬೆಂಗಳೂರು (ಸೆ.10): ರೀಲ್ಸ್ ಸ್ಟಾರ್ ಡಿಜೆ ದೀಪು ಹೆಸರಲ್ಲಿ ನಕಲಿ ಅಕೌಂಟ್ ಸೃಷ್ಟಿಸಿ ಯುವತಿಯರಿಗೆ ವಂಚಿಸುತ್ತಿದ್ದ ಆರೋಪಿ ಪ್ರದೀಪ್‌ನ ಮತ್ತೊಂದು ಮುಖವಾಡ ಬಯಲಾಗಿದೆ.
ಓ ಎಲ್ ಎಕ್ಸ್ ಗ್ರಾಹಕರನ್ನ ಟಾರ್ಗೇಟ್ ಮಾಡುತ್ತಿದ್ದ ಆರೋಪಿ ಓಎಲ್‌ಎಕ್ಸ್ ಪ್ರದೀಪ್ ಅಂತಲೇ ಫೇಮಸ್ ಇವನು. ಓಎಲ್ ಎಕ್ಸ್ ನಲ್ಲಿ ಬೈಕ್ ಮಾರಾಟಕ್ಕಿದೆ ಎಂದು ಜಾಹಿರಾತುಗಳನ್ನ ಗಮನಿಸುತ್ತಿದ್ದ ಆರೋಪಿ. ಬೈಕ್ ಮಾಲೀಕರಿಗೆ ಕರೆ ಮಾಡ್ತಿದ್ದ. ನಿಮ್ಮ ಬೈಕ್ ಬೇಕಾಗಿದೆ ಒಮ್ಮೆ ನೋಡಬೇಕು ವಿಳಾಸ ಹೇಳಿ ಅಂತಾ ಪಡೆದು ಅವರ ಮನೆ ಬಳಿ ಹೋಗುತ್ತಿದ್ದ. ಬೈಕ್ ಖರೀದಿಸುವವನಂತೆ ಮಾಲೀಕರೊಂದಿಗೆ ಮಾತುಕತೆ ನಡೆಸಿ ನಂಬಿಕೆ ಹುಟ್ಟಿಸುತ್ತಿದ್ದ. ನಂತರ ಟೆಸ್ಟ್ ಡ್ರೈವ್ ನೆಪದಲ್ಲಿ ಬೈಕ್ ಪಡೆದು ಖದೀಮ ಎಸ್ಕೇಪ್ ಆಗಿಬಿಡುತ್ತಿದ್ದ. ಇದೇ ರೀತಿ ಪೀಣ್ಯ ಒಂದರಲ್ಲೇ 8ಬೈಕ್ ಕದ್ದ ಪ್ರಕರಣಗಳು ಇವನ ಮೇಲೆ ಇವೆ ಎಂದರೆ ಊಹಿಸಿ ಪ್ರದೀಪ್ ಎಂಥ ಚಾಲಕಿ ಕಳ್ಳ ಇರಬಹುದು ಅಂತಾ ಗೊತ್ತಾಗುತ್ತದೆ.
ಸೈಬರ್ ವಂಚಕರ ಹೆಡೆಮುರಿ ಕಟ್ಟಲು ಬೆಂಗಳೂರು ನಗರ ಪೊಲೀಸರ ಮೆಗಾ ಪ್ಲಾನ್; ಇದು ರಾಜ್ಯದಲ್ಲೇ ಮೊದಲು!
ಬೈಕ್ ಕಳ್ಳತನ ಬಿಟ್ಟು ಹೊಸ ದಂಧೆ:
ಪೀಣ್ಯ ಪೊಲೀಸರ ಕೈಗೆ ಸಿಕ್ಕಿಬಿದ್ದ ಬಳಿಕ ಬೈಕ್ ಕಳ್ಳತನ ನಿಲ್ಲಿಸಿ ಹೊಸದಂಧೆ ಶುರು ಮಾಡಿದ್ದ ಆರೋಪಿ ಪ್ರದೀಪ್ ಮಾಡ್ತಿದ್ದಿದ್ದೇನು ಗೊತ್ತೆ? ಸೆಲೆಬ್ರಿಟಿಗಳ ಹೆಸರಲ್ಲಿ ನಕಲಿ ಅಕೌಂಟ್ ಗಳನ್ನು ಕ್ರಿಯೆಟ್ ಮಾಡಿ ಹುಡುಗಿಯ ಜತೆ ಚಾಟ್, ಮೀಟ್ ಮಾಡುವ ಕೆಲಸ!
ರೀಲ್ಸ್ ಸ್ಟಾರ್ ಗಳ ಖಾತೆಯಿಂದ ಪೋಟೋ ವಿಡಿಯೋಗಳನ್ನ ಕದ್ದು ಅವರ ಹೆಸರಿನಲ್ಲೆ ನಕಲಿ ಖಾತೆ ಸೃಷ್ಟಿಸುತ್ತಿದ್ದ ಆರೋಪಿ. ಇತ್ತೀಚೆಗೆ ರೀಲ್ಸ್ ಸ್ಟಾರ್ ದೀಪು ಹೆಸರಲ್ಲಿ ಇನ್ಸ್‌ಟಾಗ್ರಾಂ ಕೂಡ ನಕಲಿ ಮಾಡಿದ್ದ. ಫೋಟೊ ವಿಡಿಯೋಸ್ ಕದ್ದು ದೀಪು ಹೆಸರಲ್ಲಿನ ನಕಲಿ ಅಕೌಂಟ್‌ಗಳಿಗೆ ಅಪ್‌ಲೋಡ್ ಮಾಡುತ್ತಿದ್ದ ಆರೋಪಿ ತಾನೂ ದೀಪು ಅಂತಲೇ ಹೇಳಿಕೊಂಡು ಯುವತಿಯರನ್ನು ಬುಟ್ಟಿಗೆ ಹಾಕೊಳ್ತಿದ್ದ ಖದೀಮ.
ಬೆಂಗಳೂರು: ಮುಂಬೈ ಡಿಸಿಪಿ ಸೋಗಿನಲ್ಲಿ ಟೆಕ್ಕಿಗೆ 2.68 ಲಕ್ಷ ವಂಚನೆ
ರೀಲ್ಸ್ ಸ್ಟಾರ್ ಅಂತಲೇ ಸ್ವಲ್ಪ ಸಲುಗೆ ಬೆಳಿಸಿಕೊಳ್ತಿದ್ದ ಯುವತಿಯರನ್ನು ಗುರುತಿಸಿ ಅವರೊಂದಿಗೆ ದೀಪು ಹೆಸರಲ್ಲಿ ಇನ್ಸ್‌ಟಾಗ್ರಾಂ ನಲ್ಲಿ ಚಾಟ್ ಮಾಡೋಕೆ ಶುರುಮಾಡ್ತಿದ್ದ ಹೀಗೆ ಹಲವು ಯುವತಿಯರನ್ನ ಬಲೆಗೆ ಬೀಳಿಸಿಕೊಂಡು ಮೀಟ್ ಆಗ್ತೀನಿ, ಲವ್ ಮಾಡ್ತೀನಿ ಎಂದು ಹಣ ಪಡೆದಿದ್ದಾನೆ ಖತರ್ನಾಕ ಪ್ರದೀಪ್. ಇದು ರೀಲ್ಸ್ ಸ್ಟಾರ್ ದೀಪುಗೆ ಗೊತ್ತಾಗ್ತಿದ್ದಂತೆ ಬೆಚ್ಚಿಬಿದ್ದು ಇನ್ನೂ ತಡಮಾಡಿದ್ರೆ ಮಾನ ಮಾರ್ಯಾದೆ ಮೂರುಕಾಸಿಗೆ ಹರಾಜು ಹಾಕ್ತಾನೆ ಬಡ್ಡಿಮಗ ಅಂದುಕೊಂಡು ಈ ವಂಚನೆ ಬಗ್ಗೆ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದ ದೀಪು. ಈ ವಿಚಾರ ತಿಳಿಯುತ್ತಿದ್ದಂತೆ ಪ್ರದೀಪ ಮತ್ತೆ ಆಕ್ಟಿವ್ ಆಗಿರುವ ಕುರಿತು ಮಾಹಿತಿ ಸಂಗ್ರಹಿಸಿರುವ ಪೀಣ್ಯ ಪೊಲೀಸರು. ಇವನನ್ನು ಬಂಧಿಸಿ ವಿಚಾರಣೆ ನಡೆಸಿದರೆ ಇನ್ನೆಷ್ಟು ಪ್ರಕರಣಗಳು ಬಯಲಿಗೆ ಬರಲಿವೆಯೋ!