ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ರೋಮಿಲ್‌ಗೆ ಆ.25ರಂದು ಫೆಡೆಕ್ಸ್‌ ಹೆಸರಿನಲ್ಲಿ ಅಪರಿಚಿತ ವ್ಯಕ್ತಿ ಕರೆ ಮಾಡಿ ಮುಂಬೈನ ಅಂದೇರಿ ಡಿಸಿಪಿಗೆ ಕಾಲ್‌ ಕನೆಕ್ಟ್ ಮಾಡುವುದಾಗಿ ಹೇಳಿ ಅಪರಿಚಿತ ವ್ಯಕ್ತಿಗೆ ಕಾಲ್‌ ಕನೆಕ್ಟ್ ಮಾಡಿದ್ದಾನೆ. ಈ ವೇಳೆ ಡಿಸಿಪಿ ಸೋಗಿನಲ್ಲಿ ಮಾತನಾಡಿದ ವ್ಯಕ್ತಿ, ‘ನಿಮ್ಮ ಬ್ಯಾಂಕ್‌ ಖಾತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಳಕೆಯಾಗಿದೆ’ ಎಂದು ಬೆದರಿಸಿದ್ದಾನೆ.

ಬೆಂಗಳೂರು(ಆ.30): ಸೈಬರ್‌ ಕಳ್ಳರು ‘ನಿಮ್ಮ ಬ್ಯಾಂಕ್‌ ಖಾತೆಯು ಅಕ್ರಮ ಹಣ ವರ್ಗಾವಣೆಗೆ ಬಳಕೆಯಾಗಿದೆ’ ಎಂದು ಸಾಫ್ಟ್‌ವೇರ್‌ ಎಂಜಿನಿಯರ್‌ ಒಬ್ಬರನ್ನು ಬೆದರಿಸಿ .2.68 ಲಕ್ಷ ವರ್ಗಾಯಿಸಿಕೊಂಡು ವಂಚಿಸಿರುವ ಸಂಬಂಧ ಕೇಂದ್ರ ವಿಭಾಗದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಕನ್ನಿಂಗ್‌ಹ್ಯಾಮ್‌ ರಸ್ತೆಯ ಅಪಾರ್ಟ್‌ಮೆಂಟ್‌ ನಿವಾಸಿ ರೋಮಿಲ್‌ ತಿವಾರಿ (30) ವಂಚನೆಗೆ ಒಳಗಾದವರು. ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ರೋಮಿಲ್‌ಗೆ ಆ.25ರಂದು ಫೆಡೆಕ್ಸ್‌ ಹೆಸರಿನಲ್ಲಿ ಅಪರಿಚಿತ ವ್ಯಕ್ತಿ ಕರೆ ಮಾಡಿ ಮುಂಬೈನ ಅಂದೇರಿ ಡಿಸಿಪಿಗೆ ಕಾಲ್‌ ಕನೆಕ್ಟ್ ಮಾಡುವುದಾಗಿ ಹೇಳಿ ಅಪರಿಚಿತ ವ್ಯಕ್ತಿಗೆ ಕಾಲ್‌ ಕನೆಕ್ಟ್ ಮಾಡಿದ್ದಾನೆ. ಈ ವೇಳೆ ಡಿಸಿಪಿ ಸೋಗಿನಲ್ಲಿ ಮಾತನಾಡಿದ ವ್ಯಕ್ತಿ, ‘ನಿಮ್ಮ ಬ್ಯಾಂಕ್‌ ಖಾತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಳಕೆಯಾಗಿದೆ’ ಎಂದು ಬೆದರಿಸಿದ್ದಾನೆ.

Hyderabad: ಮಗಳಿಲ್ಲದ ಭೂಮಿಯಲ್ಲಿ ಬದುಕೋಕೆ ಸಾಧ್ಯವಿಲ್ಲ ಎಂದ ತಂದೆ, ರೈಲಿಗೆ ಸಿಕ್ಕು ಆತ್ಮಹತ್ಯೆ

‘ಈಗ ನನಗೆ ಹಣ ನೀಡಿದರೆ ನಿನಗೆ ತೊಂದರೆಯಾಗದಂತೆ ನೋಡಿಕೊಳ್ಳುವೆ’ ಎಂದು ಹೇಳಿದ್ದಾನೆ. ಇದನ್ನು ನಂಬಿದ ರೋಮಿಲ್‌, ಡಿಸಿಪಿ ಸೋಗಿನ ವ್ಯಕ್ತಿ ನೀಡಿದ ಬ್ಯಾಂಕ್‌ ಖಾತೆಗೆ ವಿವಿಧ ಹಂತಗಳಲ್ಲಿ .2.68 ಲಕ್ಷ ವರ್ಗಾಯಿಸಿದ್ದಾರೆ. ಆದರೂ ಮತ್ತಷ್ಟುಹಣಕ್ಕೆ ಬೇಡಿಕೆ ಇರಿಸಿದಾಗ ರೋಮಿಲ್‌ಗೆ ಅನುಮಾನ ಬಂದಿದೆ. ತಾನು ಸೈಬರ್‌ ವಂಚಕರ ಜಾಲಕ್ಕೆ ಸಿಲುಕಿರುವುದು ಅರಿವಿಗೆ ಬಂದಿದೆ. ಬಳಿಕ ಕೇಂದ್ರ ವಿಭಾಗದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಸೈಬರ್‌ ವಂಚಕರ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.