ಬೆಂಗಳೂರು(ಡಿ. 26)  ಬೆಂಗಳೂರಿನಲ್ಲಿ ನಾಲ್ವರು ವಿದ್ಯಾರ್ಥಿಗಳು ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ತರುಣ್ (16), ಸೃಜನ್ (16), ಗೋಕುಲ್ ಆದಿತ್ಯ (16) ಹಾಗೂ ಸಿಂಹಾದ್ರಿ (17)ನಾಪತ್ತೆಯಾದವರು.

ಮಸಾಜ್ ಪಾರ್ಲರ್ ರೇಡ್: ಸಿಕ್ಕಿ ಬಿದ್ದ ಪೊಲೀಸರು!

ನಾಪತ್ತೆಯಾದವರು ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯ ಸಿಂಗಸಂದ್ರದವರು. ಎಸ್ಎಸ್ಎಲ್ ಸಿ  ಓದುತ್ತಿದ್ದ ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ.

ಮೊನ್ನೆ(ಮಂಗಳವಾರ)ಯಿಂದ ನಾಪತ್ತೆಯಾಗಿರುವ ನಾಲ್ವರ ಸಂಬಂಧ ಪೋಷಕರು ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.