ಅಥಣಿ: ವ್ಯಕ್ತಿ ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ನಾಲ್ವರ ಬಂಧನ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖಣದಾಳ ಗ್ರಾಮದ ಶಾಂತವ್ವಾ ಭೂಪಾಲ ಆಜೂರೆ ಅವರು ಫೆ.11ರಂದು ನನ್ನ ಗಂಡನನ್ನು ಅಡ್ಡಗಟ್ಟಿಯಾರೋ ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ತೊರಿಸಿ ಹೆದರಿಸಿ ಕಾರಿನಲ್ಲಿ ಅಪರಹರಣ ಮಾಡಿದ್ದಾರೆ ಎಂದು ಹಾರುಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. 

Four Arrested for Kidnap Case at Athani in Belagavi grg

ಅಥಣಿ(ಫೆ.22):  ವ್ಯಕ್ತಿಯೊರ್ವನನ್ನು ಅಪಹರಿಸಿ .15 ಲಕ್ಷಕ್ಕೆ ಬೇಡಿಕೆ ಇಟ್ಟು, ಅದು ಸಿಕ್ಕ ಮೇಲೆ ಮತ್ತೆ .30 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಕರ್ನಾಟಕ-ಮಹಾರಾಷ್ಟ್ರ ಗಡಿ ಪ್ರದೇಶವಾದ ಶಿರಗುಪ್ಪಿಯಲ್ಲಿ ಬಂಧಿಸಿದ್ದಾರೆ. ಈ ವೇಳೆ ಅಪಹರಣಕ್ಕೊಳಗಾದ ವ್ಯಕ್ತಿಯನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ.

ರಾಯಬಾಗ ತಾಲೂಕಿನ ಖಣದಾಳದ ವಾಸುದೇವ ಸಹದೇವ ನಾಯ್ಕರ(40) ಬಹುಜಗ್ಗ ತುಕಾರಾಮ ಜಾಧವ(35), ಚಿಕ್ಕೋಡಿ ತಾಲೂಕಿನ ಕೆರೂರ ಗ್ರಾಮದ ಈರಯ್ಯಾ ಸತ್ಯಯ್ಯಾ ಹಿರೇಮಠ(35) ಹಾಗೂ ಅಥಣಿ ತಾಲೂಕಿನ ಶಿವಾನಂದ ನಾಗಪ್ಪ ಸಲಖಾನ(32) ಬಂಧಿತ ಆರೋಪಿಗಳು.

Uttara Kannada: ನೆರೆಮನೆಯಾತನ ಕಾಟದಿಂದ ಗೃಹಬಂಧನದಲ್ಲಿ ಮೂರು ಕುಟುಂಬ!

ಪ್ರಕರಣದ ಹಿನ್ನೆಲೆ:

ರಾಯಬಾಗ ತಾಲೂಕಿನ ಖಣದಾಳ ಗ್ರಾಮದ ಶಾಂತವ್ವಾ ಭೂಪಾಲ ಆಜೂರೆ ಅವರು ಫೆ.11ರಂದು ನನ್ನ ಗಂಡನನ್ನು ಅಡ್ಡಗಟ್ಟಿಯಾರೋ ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ತೊರಿಸಿ ಹೆದರಿಸಿ ಕಾರಿನಲ್ಲಿ ಅಪರಹರಣ ಮಾಡಿದ್ದಾರೆ ಎಂದು ಹಾರುಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಫೆ.11ರಂದು ವ್ಯಕ್ತಿಯನ್ನು ಅಪಹರಣ ಮಾಡಿ ಕರ್ನಾಟಕ-ಮಹಾರಾಷ್ಟ್ರ ಗಡಿ ಪ್ರದೇಶವಾದ ಶಿರಗುಪ್ಪಿಯ ಒಂದು ಕೋಳಿ ಪಾಮ್‌ರ್‍ನಲ್ಲಿ ವ್ಯಕ್ತಿಯನ್ನು ಬಂಧಿಸಿಟ್ಟಿದ್ದರು. ಮೊದಲ ಬಾರಿ .15 ಲಕ್ಷ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದರು. ಇದಕ್ಕೆ ಒಪ್ಪಿ ಹಣ ಕೊಟ್ಟಿದ್ದರು. ಇದಾದ ಮೇಲೆ ಮತ್ತೆ .30 ಲಕ್ಷ ಹಣ ಬೇಡಿಕೆ ಇಟ್ಟರು. ಒಂದು ವೇಳೆ ಹಣ ನೀಡದಿದ್ದರೆ ನಿನ್ನ ಗಂಡನ ಹೆಣ ನೋಡಬೇಕಾಗುತ್ತದೆ ಎಂಬ ಬೆದರಿಕೆ ಹಾಕಿದ್ದರು. ಹೀಗಾಗಿ ಮಹಿಳೆ ಪೊಲೀಸರಿಗೆ ದೂರು ನೀಡಿದಳು. ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳ ಚಲನವಲನಗಳನ್ನು ಗಮನಿಸಿ ಅವರನ್ನು ಬಂಧಿಸಲು ಯಶಸ್ವಿಯಾದರು. ಬಂಧಿತರಿಂದ ವಾಹನ, .4.10 ಲಕ್ಷ ನಗದು, ಏಳು ಮೊಬೈಲ್‌ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಆರೋಪಿಗಳು ಆರು ತಿಂಗಳ ಹಿಂದೆ ಅಪಹರಣಕ್ಕೊಳಗಾದವನ ಮಗನನ್ನು ಕೊಲೆ ಮಾಡಿದ್ದರು ಎಂಬ ಮಾಹಿತಿ ಕೂಡಾ ಬೆಳಕಿಗೆ ಬಂದಿದೆ ಎಂಬ ಮಾಹಿತಿ ಇದೆ.

Chikkamagaluru : 21 ದ್ವಿಚಕ್ರ ವಾಹನ ಕಳವು ಮಾಡಿದ್ದ 4 ಮಂದಿ ಆರೋಪಿಗಳ ಬಂಧನ

ಎಸ್ಪಿ ಡಾ.ಸಂಜೀವ ಪಾಟೀಲ ಮತ್ತು ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಎಂ.ವೇಣುಗೋಪಾಲ ಅವರ ಮಾರ್ಗದರ್ಶದಲ್ಲಿ ಅಥಣಿ ಡಿವೈಎಸ್ಪಿ ಶ್ರೀಪಾದ ಜಲ್ದೆ ಅವರು ನೇತೃತ್ವದಲ್ಲಿ ಹಾರುಗೇರಿ ಸಿ.ಪಿ.ಐ ರವಿಚಂದ್ರ ಡಿ.ಬಿ. ಅಥಣಿ ಸಿಪಿಐ ರವೀಂದ್ರ ನಾಯ್ಕೋಡಿ ಅವರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಆರೋಪಿಗಳ ಮೇಲೆ ಸುಮಾರು 20ಕ್ಕೂ ಹೆಚ್ಚು ಪ್ರಕರಣಗಳು ಬೆಳಗಾವಿ, ಬಾಗಲಕೋಟೆ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಕಳ್ಳತನ ಮತ್ತು ಒಂದು ಕೊಲೆ ಆರೋಪದ ಪ್ರಕರಣ ಕೂಡಾ ದಾಖಲಾಗಿವೆ.

Latest Videos
Follow Us:
Download App:
  • android
  • ios