ನವದೆಹಲಿ(ಅ. 07) ನಾಗಾಲ್ಯಾಂಡ್ ಮಾಜಿ ರಾಜ್ಯಪಾಲ, ಸಿಬಿಐ ಮಾಜಿ ನಿರ್ದೇಶಕ, ಹಿಮಾಚಲ ಪ್ರದೇಶದ ಮಾಜಿ ಡಿಜಿಪಿ ಅಶ್ವಾನಿ ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಶಿಮ್ಲಾದ ಬ್ರಾಕ್‌ಹಾರ್ಸ್ಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತುಂಬಾ ದಿನಗಳಿಂದ ಕುಮಾರ್ ಖಿನ್ನತೆಯಲ್ಲಿದ್ದು  ಎಂದು ವರದಿಯಾಗಿದೆ.  ಘಟನೆ ನಂತರ ಪೊಲೀಸರು ಮತ್ತು ಅಧಿಕಾರಿಗಳು ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ಟಿಕ್ ಟಾಕ್ ಲವ್ ಸ್ಟೋರಿ ಆತ್ಮಹತ್ಯೆಯಲ್ಲಿ ಅಂತ್ಯ

ಇದೊಂದು  ಆಘಾತಕಾರಿ ಮತ್ತು ವಿಷಾದದ ಘಟನೆ ಎಂದು ಶಿಮ್ಲಾ ಎಸ್‌ಪಿ ಮೋಹಿತ್ ಚಾವ್ಲಾ ಹೇಳಿದ್ದಾರೆ.  ಘಟನೆ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.