ಚೆನ್ನೈ(ಅ. 22) ಚಿನ್ನ -ಹಣ ತುಂಬಿದ ರೈಲು  ಅಥವಾ ಟ್ರಕ್ ದರೋಡೆ ಮಾಡುವುದನ್ನು ಇತಿಹಾಸದಲ್ಲಿ ನೋಡಿದ್ದೇವೆ. ಆದರೆ ಇದು ಎಲ್ಲದಕ್ಕಿಂತ ಭಿನ್ನ ಪ್ರಕರಣ  ಮೊಬೈಲ್ ಗಳು ತುಂಬಿದ್ದ ಲಾರಿಯನ್ನು ದರೋಡೆ ಮಾಡಲಾಗಿದೆ. 

ಮುಂಬೈನಿಂದ ಚೆನ್ನೈಗೆ ತೆರಳುತ್ತಿದ್ದ  ಡಿಎಚ್‌ಎಲ್ ಟ್ರಕ್ ಮೇಲೆ ಕಣ್ಣಿಟ್ಟಿದ್ದ ಕಳ್ಳರು, ಕೃಷ್ಣಗಿರಿ ಹೆದ್ದಾರಿಯಲ್ಲಿ ದೋಚಿದ್ದಾರೆ.  ಟ್ರಕ್ ತುಂಬಾ ಇದ್ದದ್ದು ಎಂಐ ಕಂಪನಿ ಮೊಬೈಲ್ ಫೋನ್, ಮೊಬೈಲ್ ಗಳ ಒಟ್ಟು ಮೌಲ್ಯ ಸುಮಾರು 15 ಕೋಟಿ ರು.! ಟ್ರಕ್ ಅಡ್ಡಗಟ್ಟಿ ಟ್ರಕ್ ನಲ್ಲಿದ್ದ ಸುಮಾರು 1,400 ಎಂಐ ಮೊಬೈಲ್ ಫೋನ್  ಅಪಹರಣ ಮಾಡಲಾಗಿದೆ.

15 ಕೋಟಿ ರೂ. ಮೊಬೈಲ್ ಗಳನ್ನು ಹೊತ್ತು ಸಾಗುತ್ತಿದ್ದ ಟ್ರಕ್‍ಅನ್ನು 10 ಮಂದಿ  ದರೋಡೆಕೋರರ ಗುಂಪು ಹೈಜಾಕ್  ಮಾಡಿದೆ.  ಡ್ರೈವರ್ ಸತೀಶ್ ಕುಮಾರ್, ಕ್ಲೀನರ್ ಅರುಣ್ ಮೊಬೈಲ್ ಘಟಕದಿಂದ ಲೋಡ್‍ನೊಂದಿಗೆ ಮಂಗಳವಾರ 3 ಗಂಟೆ ಸುಮಾರಿಗೆ ಮುಂಬೈಗೆ ಪ್ರಯಾಣ ಆರಂಭಿಸಿದ್ದರು. ವೆಲ್ಲೂರು ಬಳಿ ರಾತ್ರಿ ಊಟ ಮಾಡಿ ಟ್ರಕ್ ತೆಗೆದುಕೊಂಡು ಹೊರಟಿದ್ದರು.

ಕೋಟಿ ಮೊತ್ತದ ಚಿನ್ನ ಕದ್ದವ ಊರು ಸೇರುವ ಮುನ್ನವೇ ಸಿಕ್ಕಿಬಿದ್ದ

ಮೊದಲು ಟ್ರಕ್ ನಲ್ಲಿದ್ದ 6 ಜನ ಡ್ರೈವರ್, ಕ್ಲೀನರ್ ಮೇಲೆ ಹಲ್ಲೆ ನಡೆಸಿ ಹಗ್ಗದಿಂದ ಕಟ್ಟಿ ಹಾಕಲಾಗಿದೆ.  ಮತ್ತೊಂದು ವಾಹನದಲ್ಲಿ ಬಂದ ನಾಲ್ವರು ಅವರನ್ನು ಕಾರಿನಲ್ಲಿ ಹತ್ತಿಸಿಕೊಂಡು ಸ್ವಲ್ಪ ದೂರ ಮುಂದೇ ಸಾಗಿ ಬಳಿಕ ರಸ್ತೆ ಪಕ್ಕದ ಪೊದೆಗೆ ಎಲ್ಲರನ್ನು ಎಸೆದಿದ್ದಾರೆ.  ಆರೋಪಿಗಳೂ ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಟನಾ ಸ್ಥಳದಿಂದ ದರೋಡೆಕೋರರು ಹೈಜಾಕ್ ಮಾಡಿದ್ದ ಟ್ರಕ್ ಪತ್ತೆಯಾಗಿದ್ದು, ಮತ್ತೊಂದು ಟ್ರಕ್ ಮೂಲಕ ಕಳ್ಳರು ಮೊಮೈಲ್ ಗಳೊಂದಿಗೆ ಆಗಿದ್ದಾರೆ. ದರೋಡೆಕೋರರು ಮುಖ ಕಟ್ಟಿಕೊಂಡಿರಲಿಲ್ಲ, ಹದಿನೇಳು ಪೊಲೀಸ್ ತಂಡ ಮಾಡಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.