ಫ್ಲೋರಿಡಾ( ಜ.  29) ಶಾಲಾ ಕೊಠಡಿಯಲ್ಲಿಯೇ ವಿದ್ಯಾರ್ಥಿನಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸುತ್ತಿದ್ದ ಆರೋಪದ ಮೇಲೆ ಫ್ಲೋರಿಡಾದಲ್ಲಿ ಶಿಕ್ಷಕನೊಬ್ಬನನ್ನು ಬಂಧಿಸಲಾಗಿದೆ. 

ವಿದ್ಯಾರ್ಥಿನಿಯೊಂದಿಗೆ ಶಿಕ್ಷಕ ಕನಿಷ್ಠ 10 ಸಂದರ್ಭಗಳಲ್ಲಿ ಕೊಠಡಿಯೊಳಗೆ ಮಾಡಬಾರದ ಕೆಲಸ ಮಾಡಿದ್ದ  ಎಂದು ಪೊಲೀಸರು ತಿಳಿಸಿದ್ದಾರೆ

ತಮ್ಮ ಮಗಳಿಗೆ ಶಿಕ್ಷಕನೊಂದಿಗೆ ವಿಶೇಷ ಒಲವು ಇರುವುದು ಪೋಷಕರ ಗಮನಕ್ಕೆ ಬಂದಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿದ್ದರು. ರಿಕ್ಸ್(29)  ಎಂಬ ಈ ಕಾಮುಕ ಶಿಕ್ಷಕ ಒಂಟಿಯಾಗಿರುವಾಗ ಕ್ಲಾಸಿಗೆ ಬರಲು ವಿದ್ಯಾರ್ಥಿನಿಗೆ ಪಾಸ್ ನೀಡಿದ್ದ ಎನ್ನಲಾಗಿದೆ. ಶಾಲಾ ಕೊಠಡಿಯಲ್ಲಿಯೇ ಇವರಿಬ್ಬರ ಆ ವ್ಯವಹಾರ ನಡೆಯುತ್ತಿತ್ತು.

ಸೆಕ್ಸ್ ನ ಉತ್ತುಂಗದಲ್ಲಿ ಇದ್ದಾಗ ಸಾವು.. ಹೀಗೂ ಆಗುತ್ತದೆ!

ಈ ಬಗ್ಗೆ ವಿದ್ಯಾರ್ಥಿನಿ ಸ್ನೇಹಿತರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಶಿಕ್ಷಕನೊಂದಿಗೆ ಈ ವಿದ್ಯಾರ್ಥಿನಿ ಅನುಚಿತವಾಗಿ ವರ್ತಿಸುವುದನ್ನು ಹಲವರು ಗಮನಿಸಿದ್ದಾರೆ. 12ರಿಂದ 18 ವರ್ಷದ ಹೆಣ್ಣು ಮಕ್ಕಳೊಂದಿಗೆ ಸಮ್ಮತಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದುವುದನ್ನೂ ಅತ್ಯಾಚಾರವೆಂದೇ ಪರಿಗಣಿಸಲಾಗುವುದರಿಂದ ಶಿಕ್ಷಕ ಸದ್ಯ ಪೊಲೀಸರ ವಶದಲ್ಲಿ ಇದ್ದಾನೆ.

ಬಾಸ್ಕೇಟ್ ಬಾಲ್ ಕೋಚ್ ಆಗಿಯೂ ಕೆಲಸ ಮಾಡುತ್ತಿದ್ದ ರಿಕ್ಸ್ ನ ರಾಜೀನಾಮೆಯನ್ನು ಶಾಲಾ ಮಂಡಳಿ ಪಡೆದುಕೊಂಡಿದೆ.  ಇದಕ್ಕೂ ಮುನ್ನ ವಿದ್ಯಾರ್ಥಿಯೊಬ್ಬರಿಗೆ ರಿಕ್ಸ್  ತನ್ನದೇ ಬೆತ್ತಲೆ ಫೋಟೋ ಕಳಿಸಿದ್ದ ಎಂಬ ಆರೋಪವೂ ಇದೆ. ಆದರೆ ಆ ಪ್ರಕರಣದಲ್ಲಿ ಈತ ಖುಲಾಸೆಯಾಗಿದ್ದ.