ಸಿಡ್ನಿಯ ಶಾಪಿಂಗ್ ಮಾಲ್‌ನಲ್ಲಿ ಸಿಕ್ಕಸಿಕ್ಕವರಿಗೆ ಚೂರಿ ಇರಿದ ವ್ಯಕ್ತಿ, ಐವರ ಸಾವು!
ಆಸ್ಟ್ರೇಲಿಯಾದ ಸಿಡ್ನಿಯ ಬ್ಯುಸಿ ಶಾಪಿಂಗ್ ಮಾಲ್‌ಗೆ ನುಗ್ಗಿದ ಆಗಂತುಕ ಸಿಕ್ಕಸಿಕ್ಕವರಿಗೆ ಚೂರಿ ಇರಿದಿದ್ದಾನೆ. ಇದರಿಂದಾಗಿ ಐವರು ಸಾವು ಕಂಡಿದ್ದಾರೆ. ಜನರ ಮೇಲೆ ಚೂರಿ ದಾಳಿ ನಡೆಸಿದ್ದ ವ್ಯಕ್ತಿ ಬಳಿಕ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಈ ವೇಳೆ ಪೊಲೀಸರ ಗುಂಡಿಗೆ ಆತ ಬಲಿಯಾಗಿದ್ದಾನೆ.
ನವದೆಹಲಿ (ಏ.13): ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಅಮಾನವೀಯ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ಬ್ಯುಸಿ ಶಾಪಿಂಗ್ ಮಾಲ್‌ನಲ್ಲಿ ಸಿಕ್ಕಸಿಕ್ಕವರಿಗೆ ಚೂರಿ ಇರಿದಿದ್ದಾನೆ. ಈ ಘಟನೆಯಲ್ಲಿ ಐದು ಮಂದಿ ಸಾವು ಕಂಡಿದ್ದಾರೆ ಎಂದು ವರದಿಯಾಗಿದೆ. ಈತನನ್ನು ಬಂಧಿಸುವ ನಿಟ್ಟಿನಲ್ಲಿ ಪೊಲೀಸರು ಪ್ರಯತ್ನ ಮಾಡಿದಾಗ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಪೊಲೀಸರ ಗುಂಡಿನ ದಾಳಿಯಲ್ಲಿ ಈತ ಹತನಾಗಿದ್ದಾನೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿದೆ. ಚೂರಿ ಇರಿತ ಮತ್ತು ಗುಂಡಿನ ದಾಳಿ ನಡೆದ ಕಾರಣ ಬೋಂಡಿ ಬೀಚ್ ಬಳಿಯ ವೆಸ್ಟ್‌ಫೀಲ್ಡ್ ಬೋಂಡಿ ಜಂಕ್ಷನ್‌ನಿಂದ ನೂರಾರು ಜನರನ್ನು ಸ್ಥಳಾಂತರಿಸಲಾಗಿದೆ. ಇನ್ನು ಎಂಟು ಮಂದಿ ಗಾಯಗೊಂಡಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ. ಐವರು ವ್ಯಕ್ತಿಯನ್ನು ಚೂರಿ ಇರಿದು ಕೊಲ್ಲಲಾಗಿದೆ. ಶಂಕಿತ ವ್ಯಕ್ತಿಯನ್ನು ನ್ಯೂ ಸೌತ್ ವೇಲ್ಸ್ ಪೋಲಿಸ್‌ನ ಮಹಿಳಾ ಅಧಿಕಾರಿಯೊಬ್ಬರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಈ ದಾಳಿಯು ನಗರದ ಪೂರ್ವ ಉಪನಗರಗಳಲ್ಲಿ ಮಧ್ಯಾಹ್ನ 3:40 ರ ಸುಮಾರಿಗೆ (ಸ್ಥಳೀಯ ಕಾಲಮಾನ) ನಡೆದಿದೆ. ಚೂರಿ ಇರಿದು ಸಾಕಷ್ಟು ಮಂದಿ ಗಾಯಗೊಂಡ ಬೆನ್ನಲ್ಲಿಯೇ 4 ಗಂಟೆ ವೇಳೆಗೆ ಎಮರ್ಜೆನ್ಸಿ ಸರ್ವೀಸ್‌ಅನ್ನು ಕರೆಸಲಾಗಿತ್ತು.
ಇರಿತಕ್ಕೆ ಒಳಗಾದವರಲ್ಲಿ ತಾಯಿ ಮತ್ತು ಆಕೆಯ ಒಂಬತ್ತು ತಿಂಗಳ ಮಗು ಕೂಡ ಸೇರಿದೆ. ಆದರೆ, ಇಬ್ಬರು ವ್ಯಕ್ತಿಗಳು ಸೇರಿ ಚೂರಿ ಇರಿಯುತ್ತಿದ್ದ ವ್ಯಕ್ತಿಯ ಪ್ರಯತ್ನವನ್ನು ವಿಫಲಗೊಳಿಸಿದ್ದರು. ರಕ್ತದ ಮಡುವಿನಲ್ಲಿದ್ದ ಮಗುವನ್ನು ರಕ್ಷಿಸಲು ಅದೇ ಮಾಲ್‌ನಲ್ಲಿದ್ದ ಬಟ್ಟೆಗಳನ್ನು ಬಳಸಿದ್ದರು. ಈ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ಸದ್ದು ಕೂಡ ಕೇಳಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸಾಮಾಜಿಕ ಮೀಡಿಯಾದಲ್ಲಿನ ಹಲವು ಪೋಸ್ಟ್‌ಗಳು ಜನರು ಭಯಭೀತರಾಗಿ ಮಾಲ್‌ನಿಂದ ಹೊರಬರುತ್ತಿರುವ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಅದರೊಂದಿಗೆ ಪೊಲೀಸ್ ಕಾರುಗಳು ಮತ್ತು ತುರ್ತು ಸೇವೆಗಳು ತಕ್ಷಣವೇ ಮಾಲ್ ಬಳಿ ಬಂದಿದ್ದವು. ಆಸ್ಟ್ರೇಲಿಯನ್ ಫೆಡರಲ್ ಪೋಲೀಸ್ (AFP) ಸಿಡ್ನಿಯಲ್ಲಿ ನಡೆದ ದಾಳಿಯ ಬಗ್ಗೆ ಕ್ಯಾನ್‌ಬೆರಾದಲ್ಲಿ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್‌ಗೆ ವಿವರಣೆ ನೀಡಿದ್ದಾರೆ.
ಶಿವಮೊಗ್ಗ: ಆರು ವರ್ಷದಿಂದ ಪ್ರೇತಿಸುತ್ತಿದ್ದ ಹುಡುಗಿಗೆ ಚಾಕು ಚುಚ್ಚಿದ ಪಾಗಲ್ ಪ್ರೇಮಿ
ಪ್ರತ್ಯಕ್ಷದರ್ಶಿಯಾಗಿರುವ 21 ವರ್ಷದ ಎಲ್ಲೀ ವಿಲಿಯಮ್ಸ್, ಮಾಲ್‌ನ ಮೇಲಿನ ಮಹಡಿಯಲ್ಲಿರುವ ಫುಡ್ ಕೋರ್ಟ್‌ನಲ್ಲಿ ಊಟ ಮಾಡುತ್ತಿದ್ದಾಗ ಜನರು ಕಿರುಚುತ್ತಾ ಓಡಿಹೋಗುತ್ತಿದ್ದದ್ದನ್ನು ನೋಡಿದ್ದೆ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಕೆಗೆ ತಿಳಿಸಿದ್ದಾರೆ. ದಾಳಿ ಮಾಡಿದ ವ್ಯಕ್ತಿ ಹುಡ್ಡಿ ಧರಿಸಿದ್ದ ಹಾಗೂ ಕೈಯಲ್ಲಿ ಚಾಕು ಹಿಡಿದು ವ್ಯಕ್ತಿಗಳ ಬೆನ್ನಟ್ಟುತ್ತಿದ್ದ ಎಂದಿದ್ದಾರೆ.
ಕ್ರಿಸ್ಮಸ್ ಸಂಭ್ರಮದಲ್ಲಿದ್ದವರಿಗೆ ಶಾಕ್: ಇಬ್ಬರು ಹುಡುಗಿಯರನ್ನು ಇರಿದು ಬಿಳಿಯರನ್ನೆಲ್ಲ ಸಾಯಿಸ್ಬೇಕೆಂದ ದಾಳಿಕೋರ