Drug Bust News: ಬೆಂಗ್ಳೂರಲ್ಲಿ ಬೈಕ್‌ನಲ್ಲಿ ಡ್ರಗ್ಸ್‌ ಮಾರಾಟಕ್ಕೆ ಯತ್ನ: ಐದು ಪೆಡ್ಲರ್‌ಗಳ ಬಂಧನ

*  ಆಫ್ರಿಕಾ ಮೂಲದ ಪೆಡ್ಲರ್‌ ಸೆರೆ: 8 ಲಕ್ಷದ ಡ್ರಗ್ಸ್‌ ವಶ
*  ನಾಲ್ವರು ಪೆಡ್ಲರ್‌ಗಳ ಸೆರೆ: 200 ಕೆ.ಜಿ.ಗಾಂಜಾ ಜಪ್ತಿ
*  ರೈಲಲ್ಲಿ 1.5 ಕೋಟಿ ಡ್ರಗ್ಸ್‌ ಸಾಗಿಸುತ್ತಿದ್ದ ಉಗಾಂಡಾ ಮಹಿಳೆ ಸೆರೆ
 

Five Peddlers Arrested For Drugs Cases in Bengaluru grg

ಬೆಂಗಳೂರು(ಜ.10):  ಲಾಲ್‌ಬಾಗ್‌ನ ಸಿದ್ದಾಪುರ ಕಲ್ಯಾಣಿಯ ಬಳಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ಆಫ್ರಿಕಾ(Africa) ಮೂಲದ ಡ್ರಗ್ಸ್‌ ಪೆಡ್ಲರ್‌ನನ್ನು(Drugs Peddler) ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜಾಗೋ(37) ಬಂಧಿತ ಡ್ರಗ್ಸ್‌ ಪೆಡ್ಲರ್‌ ಇತ್ತೀಚೆಗೆ ಸಿದ್ದಾಪುರ ಕಲ್ಯಾಣಿ ಬಳಿ ದ್ವಿಚಕ್ರವಾಹನದಲ್ಲಿ ಮಾದಕವಸ್ತು ಮಾರಾಟಕ್ಕೆ(Drugs) ಪ್ರಯತ್ನಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ದಾಳಿ(Raid) ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯಿಂದ(Accused) ಸುಮಾರು 8.24 ಲಕ್ಷ ರು. ಮೌಲ್ಯದ 103 ಗ್ರಾಂ ಕೊಕೇನ್‌, 2 ಸಾವಿರ ರು. ನಗದು, ದ್ವಿಚಕ್ರವಾಹನ ಹಾಗೂ ಮೊಬೈಲ್‌ ಸೇರಿದಂತೆ ಕೆಲವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು(Police) ತಿಳಿಸಿದ್ದಾರೆ.

Drugs Cases: ಕಳೆದ ವರ್ಷ ಅತೀ ಹೆಚ್ಚು ಡ್ರಗ್ಸ್‌ ಕೇಸ್‌ ದಾಖಲು!

ಆರೋಯು ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಮಾದಕವಸ್ತು ಮಾರಾಟಕ್ಕೆ ಇಳಿದಿದ್ದ. ಈ ಹಿಂದೆ ಹೆಣ್ಣೂರು ಹಾಗೂ ಸಂಜಯನಗರ ಠಾಣೆ ಪೊಲೀಸರು ಮಾದಕವಸ್ತು ಮಾರಾಟ ಪ್ರಕರಣಗಳಲ್ಲಿ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಬಳಿಕ ಆರೋಪಿಯು ಜೈಲಿನಿಂದ ಹೊರ ಬಂದ ಬಳಿಕವೂ ಕುಕೃತ್ಯ ಮುಂದುವರಿಸಿದ್ದ. ಈತನ ಹಿಂದೆ ವ್ಯವಸ್ಥಿತ ಡ್ರಗ್‌ ಪೆಡ್ಲಿಂಗ್‌ ಜಾಲ ಕಾರ್ಯ ನಿರ್ವಹಿಸುತ್ತಿರುವುದು ವಿಚಾರಣೆಯಿಂದ ತಿಳಿದು ಬಂದಿದೆ. ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ನಾಲ್ವರು ಪೆಡ್ಲರ್‌ಗಳ ಸೆರೆ: 200 ಕೆ.ಜಿ.ಗಾಂಜಾ ಜಪ್ತಿ

ಬೆಂಗಳೂರು: ಭಾರೀ ಪ್ರಮಾಣದ ಮಾದಕವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ಆಂಧ್ರಪ್ರದೇಶದ(Andhra Pradesh) ನಾಲ್ವರು ಪೆಡ್ಲರ್‌ಗಳನ್ನು ಕೆಂಪೇಗೌಡನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಪೋತಯ್ಯ(19), ಪಲ್ಲೆಂ ವರಪ್ರಸಾದ್‌(19), ವಂಥಲಾ ರಮೇಶ್‌(19), ಕೊಡಂಜಿ ಪ್ರಸಾದ್‌(19) ಬಂಧಿತರು. ಆರೋಪಿಗಳಿಂದ 60 ಲಕ್ಷ ರು. ಮೌಲ್ಯದ 200 ಕೆ.ಜಿ. ಗಾಂಜಾ ಹಾಗೂ ಟಾಟಾ ಏಸ್‌ ವಾಹನ ಜಪ್ತಿ ಮಾಡಲಾಗಿದೆ. 

ಆರೋಪಿಗಳು ಇತ್ತೀಚೆಗೆ ಕೆಂಪೇಗೌಡನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ದೋಬಿಘಾಟ್‌ ಮುಖ್ಯರಸ್ತೆಯ ಜಿಂಕೆ ಪಾರ್ಕ್ ಬಳಿ ವಾಹನ ನಿಲ್ಲಿಸಿಕೊಂಡು ಸಾರ್ವಜನಿಕರಿಗೆ ಗಾಂಜಾ(Marijuana) ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ದೊರೆತ ಮಾಹಿತಿ ಮೇರೆಗೆ ದಾಳಿ ನಡೆಸಿ ಮಾಲು ಸಹಿತ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Drugs Mafia: ಹೊಸ ವರ್ಷದ ಪಾರ್ಟಿಗೆ ಮಾದಕ ವಸ್ತು ಪೂರೈಕೆ: ಪೆಡ್ಲರ್‌ ಬಂಧನ

ಆರೋಪಿಗಳು ಆಂಧ್ರಪ್ರದೇಶದ ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆದಿದ್ದ ಗಾಂಜಾವನ್ನು ಬೃಹತ್‌ ಪ್ರಮಾಣದಲ್ಲಿ ಕಡಿಮೆ ಬೆಲೆಗೆ ಖರೀದಿಸಿ ಗೂಡ್ಸ್‌ ವಾಹನದಲ್ಲಿ ತುಂಬಿ ಬೆಂಗಳೂರಿಗೆ ತಂದಿದ್ದರು. ಕುಖ್ಯಾತ ರೌಡಿಗಳಾದ ಕುಳ್ಳ ರಿಜ್ವಾನ್‌, ಸ್ಟಾರ್‌ ನವೀನ್‌, ಉಲ್ಲಾಳ ಕಾರ್ತಿ, ಡ್ರಗ್ಸ್‌ ಪೆಡ್ಲರ್‌ ಸನಾವುಲ್ಲಾ ಸೇರಿ ಹಲವು ರೌಡಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದರು. ಆರೋಪಿಗಳಿಗೆ ಈ ರೌಡಿಗಳು ಸಹಕರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ರೈಲಲ್ಲಿ 1.5 ಕೋಟಿ ಡ್ರಗ್ಸ್‌ ಸಾಗಿಸುತ್ತಿದ್ದ ಉಗಾಂಡಾ ಮಹಿಳೆ ಸೆರೆ

ಧಾರವಾಡ(Dharwad): ರೈಲಿನ(Railway) ಮೂಲಕ ಸುಮಾರು 1.5 ಕೋಟಿ ಮೌಲ್ಯದ ಡ್ರಗ್ಸ್‌ ಅನ್ನು ಬೆಂಗಳೂರಿಗೆ(Bengaluru) ಸಾಗಿಸುತ್ತಿದ್ದ ಉಗಾಂಡಾ(Uganda)ಮೂಲದ ಮಹಿಳೆಯನ್ನು(Woman) ಶನಿವಾರ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಬೆಂಗಳೂರಿನ ಮಾದಕ ವಸ್ತು ನಿಗ್ರಹ ದಳ ಅಧಿಕಾರಿಗಳು ಶನಿವಾರ ಬಂಧಿಸಿದ್ದರು. 

ದೆಹಲಿಯಿಂದ ಹೊರಟಿದ್ದ ನಿಜಾಮುದ್ದೀನ್‌ ರೈಲಿನಲ್ಲಿದ್ದ ಮಹಿಳೆಯನ್ನು ಪಕ್ಕಾ ಮಾಹಿತಿ ಮೇರೆಗೆ ಅಧಿಕಾರಿಗಳು ದೆಹಲಿಯಿಂದಲೂ ಹಿಂಬಾಲಿಸುತ್ತಾ ಬಂದಿದ್ದು, ಹುಬ್ಬಳ್ಳಿಯಲ್ಲಿ ಡ್ರಗ್ಸ್‌ನೊಂದಿಗೆ ಬಂಧಿಸಿದ್ದಾರೆ. ನಂತರ ಆರೋಪಿ ಮಹಿಳೆಯನ್ನು ಧಾರವಾಡ ಜಿಲ್ಲಾ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದು, ಸದ್ಯಕ್ಕೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. 
 

Latest Videos
Follow Us:
Download App:
  • android
  • ios