Tumakuru Breaking: ಸಾಲಬಾಧೆ ತಾಳಲಾರದೆ ಒಂದೇ ಕುಟುಂಬದ ಐವರು ನೇಣಿಗೆ ಶರಣು!

ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಸದಾಶಿವನಗರದ ಮನೆಯೊಂದರಲ್ಲಿ ನಡೆದಿದೆ. ಪತಿ ಗರೀಬ್ ಸಾಬ್, ಪತ್ನಿ ಸುಮಯ್ಯ, ಮಗಳು ಹಜೀನಾ, ಗಂಡು ಮಕ್ಕಳಾದ ಮೊಹ್ಮದ್ ಶಬೀರ್​, ಮೊಹಮದ್ ಮುನೀರ್ ಮೃತರು. 

Five Members Of The Same Family Committed Suicide In Tumakuru gvd

ತುಮಕೂರು (ನ.26): ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಸದಾಶಿವನಗರದ ಮನೆಯೊಂದರಲ್ಲಿ ನಡೆದಿದೆ. ಪತಿ ಗರೀಬ್ ಸಾಬ್ (32), ಪತ್ನಿ ಸುಮಯ್ಯ (30) ,ಮಗಳು ಹಾಜಿರಾ (14), ಗಂಡು ಮಕ್ಕಳಾದ ಮೊಹ್ಮದ್ ಸುಭಾನ್ (10), ಮೊಹಮದ್ ಮುನೀರ್ (8) ಮೃತರು. 4 ತಿಂಗಳುಗಳ ಹಿಂದೆ ತುಮಕೂರು ನಗರದ ಸದಾಶಿವನಗದ 3ನೇ ಕ್ರಾಸ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.  ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿರುವುದಾಗಿ ಎರಡು ಪುಟಗಳ ಡೆತ್‌ನೋಟ್​ನಲ್ಲಿ ಉಲ್ಲೇಖಿಸಲಾಗಿದೆ. ಕುಟುಂಬದವರು  ‌ನಗರದ ಮೇಳೆಕೊಟೆಯಲ್ಲಿ ಕಬಾಬ್ ಅಂಗಡಿ ನಡೆಸುತ್ತಿದ್ದರು. ಆತ್ಮಹತ್ಯೆಗೂ ಮೊದಲು ವಿಡಿಯೋ ಸಹ ಮಾಡಿದ್ದರು. ಸದ್ಯ ಸ್ಥಳಕ್ಕೆ ಎಸ್‌ಪಿ ಅಶೋಕ್ ವೆಂಕಟ್‌ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ತಿಲಕ್‌ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಡಿಯೋ ಆಧಾರ ಹಾಗೂ ದೂರು ಆಧರಿಸಿ ಕ್ರಮ: ನಮಗೆ 7.30ಗೆ ಕರೆ ಬಂದಿದೆ.  ಒಂದೇ ಮನೆಯಲ್ಲಿ ಐವರು ಇಬ್ಬರು ನೇಣಿಗೆ ಹಾಕಿಕೊಂಡಿದ್ದಾರೆ ಎಂಬ ಮಾಹಿತಿಬಂತು. ಐದು ನಿಮಿಷಕ್ಕೆ ನಾವು ಸ್ಥಳಕ್ಕೆ‌ಬಂದಿದ್ವಿ. ಇಬ್ಬರ ದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಇದ್ದವು. ಮೂವರು ಮಕ್ಕಳ ಮೃತ ದೇಹ ಹಾಸಿಗೆಯಲ್ಲಿವೆ. ಮೃತರು ಶಿರಾ ತಾಲ್ಲೂಕು ಲಕ್ಕನಹಳ್ಳಿಯವರು. 

ಡಿಕೆಶಿ ರಕ್ಷಣೆ ಮಾಡಲು ಸಿಬಿಐ ಪ್ರಕರಣ ವಾಪಸ್: ಆರ್.ಆಶೋಕ್

ಸಾಯುವ ಮುನ್ನ ಸಂಬಂಧಿಕರಿಗೆ ವಿಡಿಯೋ ಮೆಸೇಜ್ ಕಳುಹಿಸಿದ್ದಾರೆ. ಅದರಲ್ಲಿ ಏನು ಮಾಹಿತಿಯಿದೆ ಎಂಬುದನ್ನು ಪರಿಶೀಲನೆ ನಡೆಸುತ್ತೇವೆ. ವಿಡಿಯೋ ಆಧಾರ ಹಾಗೂ ದೂರು ಆಧರಿಸಿ ಕ್ರಮ ಕೈಗೊಳ್ಳುತ್ತೇವೆ. ಕಬಾಬ್ ಅಂಗಡಿ ಇಟ್ಟುಕೊಂಡಿದ್ದರು.  ಒಂದು ವರ್ಷದಿಂದ ಸದಾಶಿವನಗರದಲ್ಲಿ ವಾಸಿಸುತ್ತಿದ್ದರು ಎಂದು ತುಮಕೂರು ಎಸ್ಪಿ ಅಶೋಕ್ ಕೆ.ವಿ ಹೇಳಿಕೆ ನೀಡಿದ್ದಾರೆ.

ಸಾವಿಗೂ ಮುನ್ನ ಡೆತ್ ನೋಟ್ ಬರೆದಿದ್ದ ಗರೀಬ್ ಸಾಬ್: ದೊಡ್ಡಮ್ಮನಿಗೆ ನಮಸ್ಕಾರಗಳು. ನಮಗೆ ಸಾಲ ಹೆಚ್ಚಾಗಿದೆ, ವ್ಯಾಪಾರದಲ್ಲಿ ಲಾಭ ಇಲ್ಲ. ಕೆಲಸಕ್ಕೆ ಹೋದರೆ ಹಣ ಬರ್ತಿಲ್ಲ. ಹೀಗಾಗಿ ಸಂಸಾರ ಮಾಡೋದು ಕಷ್ಟವಾಗಿದೆ. ಊಟ ಮಾಡೋಕು ಕಷ್ಟ ಆಗಿದೆ. ಊರಲ್ಲಿದ್ದಾಗ ಹೆಂಡತಿ ಅಣ್ಣ ಸಾದಿಕ್, ಹೆಂಡತಿಯ ತಂಗಿ ಯಾಸಿನ್ ನಮ್ಮ ಮೇಲೆ ವಿಷ ಕಾರಿದ್ರು. ಅದಕ್ಕೆ ನಾವು ಇಲ್ಲಿಗೆ ಬಂದಿದ್ದೇವೆ. ಇಲ್ಲಿ ಸಾಲ ಕಟ್ಟೋದು ಹೆಚ್ಚಾಗಿದೆ. ಬಾಡಿಗೆ ಮನೆಗೆ ನಲವತ್ತೈದು ಸಾವಿರ ಅಡ್ವಾನ್ಸ್ ಕೊಟ್ಟಿದ್ದೀವಿ. ಮೂರು ತಿಂಗಳ ಬಾಡಿಗೆ ಕೊಡೋದು ಬಾಕಿಯಿದೆ. ಉಳಿದ ಹಣವನ್ನ ನಮ್ಮ ದೊಡ್ಡಮ್ಮನಿಗೆ ವಾಪಾಸ್ ಕೊಡಿ. ಮನೆ ವಸ್ತುಗಳನ್ನ ನೀವು ತಗೋಳಿ. 

ಹದಿನೈದು ಸಾವಿರಾನ ಜರಿನ ಆಂಟಿಗೆ ಕೊಡಿ. ನಮ್ಮ ಬೈಕ್ ನ ನಮ್ಮ ಹಿರಿಯಣ್ಣ ಅಜಾಜ್ ಗೆ ಕೊಡಿ. ಅತ್ತಿಗೆ ಪರ್ವೀನ್ ಮತ್ತು ಅಣ್ಣನಿಗೆ ಫೋನ್ ಕೊಡಿ. ದೊಡ್ಡಮ್ಮ ಬೇಕಾದ ವಸ್ತುಗಳನ್ನ ಇಟ್ಟುಕೊಳ್ಳಬಹುದು ಅಥವಾ ಮಾರಿಕೊಳ್ಳಬಹುದು. ತುಂಬಾ ವಿಷಯ ಇದೆ, ಆದ್ರೆ ಇದ್ರಲ್ಲಿ ಬರೆಯೋಕಾಗಲ್ಲ. ಈ ಪತ್ರವನ್ನ ಪೊಲೀಸರಿಗೆ ತೋರಿಸಿ. ಮತ್ತರ್ ಮಾಮನಿಗೆ ಕೊನೆಯ ನಮಸ್ಕಾರಗಳು. ನಮಗೆ ಊಟ ಅಕ್ಕಿ ಕೊಟ್ಟಿದ್ದೀರಾ, ಅದಕ್ಕೆ ನಿಮಗೇ ಮೆಳೇಕೋಟೆಯಲ್ಲಿರೋ ಅಂಗಡಿಯಲ್ಲಿರೋ ಸಾಮಾನುಗಳು, ಮತ್ತೆ ಅದರಲ್ಲಿ ಐದು ಸಾವಿರ ಇಟ್ಟಿದ್ದೀವಿ. ಒಂದು ತಿಂಗಳು ಬಾಡಿಗೆ 2000 ರೂಪಾಯಿ ಕೊಡಬೇಕು. ಸದಾಶಿವನಗರದ ಮೂರನೇ ಬಿ ಮುಖ್ಯರಸ್ತೆಯಲ್ಲಿರುವ, ನಾವು ವಾಸಿಸುವ ಮನೆಯ ಕೆಳಗಿನವರು ನಮಗೆ ತುಂಬಾ ಕಾಟ ಕೊಟ್ಟಿದ್ದೀರಾ. ನಮಗೆ ಯಾರಾದ್ರೂ ಸಹಾಯ ಮಾಡಿದ್ರೆ ಅವರಿಗೆ ಇಲ್ಲಸಲ್ಲದನ್ನ ಹೇಳ್ತಿದ್ರು. 

ನಾವು ಅವರು ಹೇಳಿದಂತೆ ಕೇಳಬೇಕಿತ್ತು, ಇಲ್ಲವಾದ್ರೆ ಅವರು ನಮ್ಮ ಜೊತೆ ಜಗಳ ಮಾಡ್ತಿದ್ರು. ಶಬಾನಾ ನಮಗೆ ಏಳು ತಿಂಗಳ ಹಣ ಕೊಟ್ಟಿರಲಿಲ್ಲ. ಹಣ ಕೇಳಿದ್ದಕ್ಕೆ ನಮ್ಮ ಮೇಲೆ ವಿಷ ಕಾರುತ್ತಿದ್ದಾಳೆ. ನಮ್ಮ ಸಾವಿಗೆ ಐದು ಜನರೇ ಕಾರಣ. ನಮ್ಮ ಮನೆಯ ಕೆಳಗಿನ ಖಲಂದರ್, ಅವನ ಮಗಳು ಸಾನಿಯಾ, ಅವನ ಹಿರಿಯ ಮಗ, ಮಹಡಿ ಮನೆಯ ಶಬಾನಾ, ಮತ್ತು ಅವಳ ಮಗಳು ಸಾನಿಯಾ ಈ ಎಲ್ಲರೂ ನಮ್ಮ ಸಾವಿಗೆ ಕಾರಣ. ನಮ್ಮ ಸಾವಿಗೆ ಗೃಹ ಮಂತ್ರಿ ಸರ್ ಕಾನೂನು ರೀತಿ ಶಿಕ್ಷೆ ಕೊಡಬೇಕು ಎಂದು ಬೇಡಿಕೊಳ್ತೀನಿ. ಇವರ ಕಾಟಕ್ಕೆ ನಮ್ಮ ಪ್ರಾಣ ಕೊಟ್ಟಿದ್ದೇವೆ. ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಕೈ ಮುಗಿದು ಕೇಳ್ಕೊತ್ತೀವಿ. ನಮ್ಮ ದೇಹವನ್ನ ಪೋಸ್ಟ್ ಮಾರ್ಟಮ್ ಮಾಡಬಾರದು. ಇನ್ನೂ ವಿಷಯ ಫೋನ್ ನಲ್ಲಿದೆ. ಇಂತಿ ನಿಮ್ಮ ಗರೀಬ್ ಸಾಬ್, ಸುಮಯ್ಯ, ಹಾಜಿರಾ, ಮೊಹಮ್ಮದ್ ಸುಭಾನ್, ಮೊಹಮ್ಮದ್ ಮುನೀರ್ ಎಂದು ಡೆತ್‌ನೋಟ್‌ನಲ್ಲಿ ಬರೆಯಲಾಗಿದೆ.

ಸಾವಿಗೂ ಮುನ್ನ ಸಂಬಂಧಿಕರಿಗೆ ವಿಡಿಯೋ ಕಳುಹಿಸಿದ ಗರೀಬ್ ಸಾಬ್: 5 ನಿಮಿಷ 22 ಸೆಕೆಂಡ್ ವಿಡಿಯೋ ಕಳುಹಿಸಿದ ಗರೀಬ್ ಸಾಬ್ ಅದರಲ್ಲಿ ನಮ್ಮ ಜಿಲ್ಲೆಯ ಗೃಹ ಮಂತ್ರಿ ಸಾರ್ ಅವರಿಗೆ ನಮಸ್ತೆ ಸರ್. ನಾವು ಲಕ್ಕನಹಳ್ಳಿ ವಾಸಿಯಾಗಿದ್ದು, ಬಡ ಕುಟುಂಬದಲ್ಲಿ ಜನಿಸಿದ್ದೀವಿ. ನಮ್ಮ ಮಕ್ಕಳನ್ನ ಓದಿಸಬೇಕೆಂದು ತುಮಕೂರಿಗೆ ಬಂದೆ ಸರ್. ತುಮಕೂರಿನ ಸದಾಶಿವ ನಗರದ ಕೃಷ್ಣಾ ಬೇಕರಿ ಪಕ್ಕದ ನಾಲ್ಕನೇ ಮುಖ್ಯ ರಸ್ತೆಯ, ಮೂರನೇ ಕ್ರಾಸ್ ಬಿ ನಲ್ಲಿ ಮಹಡಿ ಮನೆಯಲ್ಲಿ ಬಾಡಿಗೆ ಇದ್ದೆ. ನಮ್ಮ ಮನೆಯ ಕೆಳಗೆ ಖಲಂದರ್ ಅಂತಾ ಇದ್ದಾನೆ. ಅವನು ದೊಡ್ಡ ರಾಕ್ಷಸ. ಬಡತನದಲ್ಲಿ ಹೇಗೋ ಜೀವನ ಮಾಡ್ಕೊಂಡಿದ್ದೆ. 

ನನಗೆ ಮತ್ತು ನನ್ನ ಹೆಂಡತಿ ಮಕ್ಕಳಿಗೆ ತುಂಬಾ ಹಿಂಸೆ ಕೊಟ್ಟ. ನಾನು ಯಾರತ್ರ ಆದ್ರೂ ವ್ಯವಹಾರ ಮಾಡಿದ್ರೆ, ಅವರತ್ರ ಇಲ್ಲಸಲ್ಲದನ್ನ ಹೇಳ್ತಿದ್ದ. ತುಂಬಾ ದೌರ್ಜನ್ಯ ಮಾಡಿದ್ದಾನೆ. ನಮ್ಮ ಮಕ್ಕಳಿಗೆ ಎಲ್ಲರ ಎದುರು ಹೊಡೆದಿದ್ದಾನೆ. ಆಗ ನ್ಯಾಯ ಕೇಳಿದ್ರೆ ಅವರು ಕೂಡ ಅವನಿಗೆ ಸಪೋರ್ಟ್ ಮಾಡಿದ್ರು, ಅವನು ದುಡ್ಡಿರೋನು. ನಾವು ಬಾಡಿಗೆಯಲ್ಲಿದ್ವಿ, ಅವನು ಬಾಡಿಗೆಯಲ್ಲಿದ್ದ. ನಾವು ಸಂಘಕ್ಕೆ ಸೇರಿಕೊಂಡಿದ್ವಿ. ಎರಡು ಸಾವಿರ ಕಮಿಷನ್ ಕೊಟ್ಟು ಸಾಲ ತಗೋತಿದ್ವಿ. ಇವನ ಮಾತು ಕೇಳದೆ ಇದ್ರೆ, ಏಯ್ ಪೂರ್ತಿ ಸಾಲ ಕಟ್ಟು ಅಂತಾ ಹಿಂಸೆ ಕೊಡ್ತಿದ್ದ. ಮೇಲಗಡೆ ಟ್ಯಾಂಕ್ ನಾವೇ ತೊಳಿಬೇಕಿತ್ತು, ಅವನು ತೊಳೀತಾ ಇರಲಿಲ್ಲ. 

ಅದಕ್ಕೂ ಜಗಳ ಆಗ್ತಿತ್ತು. ಸಾಲ ಕೊಟ್ಟವರಿಗೆ ಇಲ್ಲಸಲ್ಲದನ್ನ ಹೇಳಿ ಅವರು ನಮ್ಮ ಮನೆ ಹತ್ರ ಗಲಾಟೆ ಮಾಡೋ ಹಾಗೆ ಮಾಡಿದ್ರು. ಇದೇ ರೀತಿ ಅವನ ದೊಡ್ಡ ಮಗ, ಮಗಳು, ಮಹಡಿ ಮನೆ ಶಬಾನಾ, ಅವಳ ಮಗಳು ಎಲ್ಲರೂ ತೊಂದರೆ ಕೊಟ್ಟಿದ್ದಾರೆ. ಶಬಾನಾಗೂ ಖಲಂದರ್ ಗೂ ಸಂಬಂಧವಿತ್ತು. ನಾವು ಸಾಯೋಕೆ ಈ ಐದು ಜನರೇ ಕಾರಣ. ಎಲ್ಲಾ ಪೊಲೀಸರಿಗೂ ಕೈ ಮುಗಿದು ಕೇಳ್ಕೊತಿನಿ, ನಮ್ಮ ಸಾವಿಗೆ ಈ ಐದು ಜನರೇ ಕಾರಣ. ನಮ್ಮ ಮಕ್ಕಳು ಭಯ ಬಿದ್ದಿದ್ದಾರೆ, ನೀವು ಸತ್ರೆ ನಮ್ಮನ್ನ ಬಿಡ್ತಾರಾ ಅಂತಾ. ಅದಕ್ಕೆ ಅವರೂ ನಮ್ಮ ಜೊತೆ ಸಾಯ್ತಿದ್ದಾರೆ. ನಮ್ಮ ಬಗ್ಗೆ ಅಕ್ಕಪಕ್ಕದವರನ್ನ ಕೇಳಿ, ನಾವು ಯಾರ ತಂಟೆಗೂ ಹೋದೋರಲ್ಲ. 

ಖಲಂದರ್ ಬರೀ ಸೊಂಟದ ಕೆಳಗೇ ಮಾತಾಡೋನು. ಅವನಿಗೆ ಸರಿಯಾದ ಶಿಕ್ಷೆ ಕೊಡಿ. ಮೂವರು ಪೊಲೀಸ್ ಅಧಿಕಾರಿಗಳು ಇಲ್ಲೇ ಇದ್ದಾರೆ. ಅದರಲ್ಲಿ ಪಿ.ರವಿ ಸರ್, ಡಿ.ನಾಗರಾಜು ಬಾರ್ ಲೈನ್ ಕ್ವಾಟ್ರರ್ಸ್ ಅಲ್ಲಿದ್ದಾರೆ. ಅವರ ಹೆಂಡ್ತಿ ಲತಾಕ್ಕ, ಆಮೇಲೆ ಆನಂದ್ ಅಂತಾ ಟ್ರಾಫಿಕ್ ಅಲ್ಲಿದ್ದಾರೆ. ನೀವೆಲ್ಲಾ ಅವನಿಗೆ ಕರೆಕ್ಟ್ ಆಗಿ ಶಿಕ್ಷೆ ಕೊಡಿಸ್ಬೇಕು. ಆನಂದಣ್ಣ ಲಕ್ಕನಹಳ್ಳಿಯವ್ರು, ಬೇಕಿದ್ರೆ ಅವರತ್ರ ನಾವು ಹೇಗೆ ಅಂತಾ ಕೇಳಿ. ದುಡ್ಡು ದುಡ್ಡು ಅಂತೇಳಿ ಪ್ರಾಣ ತಿಂತಾರೆ. ಹತ್ತು ಸಾವಿರಕ್ಕೆ ಸಾವಿರ ರೂಪಾಯಿ ಬಡ್ಡಿ ತಗೋತಾರೆ. ಖಲಂದರ್ ಗೆ ಸ್ವಲ್ಪ ಕೊಬ್ಬು ಕರಗಿಸಬೇಕು. ನಮ್ಮ ದೇಹ ಪೋಸ್ಟ್ ಮಾರ್ಟಮ್ ಮಾಡಿಸ್ಬೇಡಿ. ಸತ್ತ ಮೇಲೆ ನಮಗೆ ನೋವು ಕೊಡಬೇಡಿ. ಕಠಿಣವಾದ ಶಿಕ್ಷೆ ಕೊಡಿಸಿ, ನಮಸ್ತೇ ಸರ್ ಎಂದು ಗೃಹ ಸಚಿವರಿಗೆ ವಿಡಿಯೋದಲ್ಲಿ ಗರೀಬ್ ಸಾಬ್ ಕೇಳಿಕೊಂಡಿದ್ದಾರೆ.

ಡಿಕೆಶಿ ವಕೀಲರೇ ಈಗ ಸರ್ಕಾರದ ಅಡ್ವೋಕೇಟ್ ಜನರಲ್‌: ಎಂ.ಪಿ.ರೇಣುಕಾಚಾರ್ಯ ಟೀಕೆ

ಸಾವಿಗೆ ಕಾರಣ ತಿಳಿಯಲು ಒಂದು ಡೆತ್ ನೋಟ್ ಸಿಕ್ಕಿದೆ: ಇವರು ಶಿರಾ ತಾಲ್ಲೂಕಿನ ಒಂದೇ ಕುಟುಂಬದವರು. ಐವರು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರು ನೇಣಿಗೆ ಶರಣಾಗಿದ್ರೆ, ಮೂವರ ಕುತ್ತಿಗೆ ಫೈಬರ್‌ನಲ್ಲಿ ಕುಯ್ದ ಸ್ಥಿತಿಯಲ್ಲಿದೆ.  ಸಾವಿಗೆ ಕಾರಣ ತಿಳಿಯಲು ಒಂದು ಡೆತ್ ನೋಟ್ ಸಿಕ್ಕಿದೆ, ಸಾಲ ಮಾಡಿಕೊಂಡಿರುವ ಹಾಗಿದೆ, ತಂದೆಯೆ ಮೊದಲು ಮಕ್ಕಳ ಕುತ್ತಿಗೆ ಕತ್ತು ಕೊಯ್ದು ನಂತರ ಇವರು ಆತ್ಮ ಹತ್ಯೆಗೆ ಶರಣಾಗಿದ್ದಾರೆ.  ಪರಿಹಾರ ಕೊಡಿಸಲು ಸಿಎಂ ರಿಲೀಫ್ ಫಂಡ್‌ಗೆ ಸರ್ಕಾರಕ್ಕೆ ಬರಿತಿವಿ.  ಕಳೆದ ಒಂದು ವರ್ಷದಿಂದ ತುಮಕೂರಿನಲ್ಲಿ ಇವರು ವಾಸಿಸುತ್ತಿದ್ದು. ಕಬಾಬ್ ಅಂಗಡಿ ಮಾಡ್ತಾ  ಜೀವನ ಸಾಗಿಸುತ್ತಿದ್ದರು ಎಂದು ಸ್ಥಳಕ್ಕೆ ಭೇಟಿ ಬಳಿಕ ಜಿಲ್ಲಾಧಿಕಾರಿ ಶ್ರೀನಿವಾಸ್ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios