ವಿರುದ್ಧ ದಿಕ್ಕಿನಲ್ಲಿ ಸಂಚರಿಸಿದ ಶಾಲಾ ಬಸ್‌ಗೆ ಎಸ್‌ಯುವಿ ಕಾರು ಡಿಕ್ಕಿಯಾಗಿ ಭಾರಿ ದುರಂತ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾರು ಪುಡಿ ಪುಡಿಯಾಗಿದೆ. ಅಪಘಾತದಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ನವದೆಹಲಿ(ಜು.11) ಕೆಲವೆಡೆ ಮಳೆ ಪ್ರಮಾಣ ತಗ್ಗಿರುವ ಕಾರಣ ಶಾಲಾ ಕಾಲೇಜು ಆರಂಭಗೊಂಡಿದೆ. ಹೀಗಾಗಿ ರಸ್ತೆಯಲ್ಲಿ ಮತ್ತೆ ಶಾಲಾ ವಾಹನಗಳ ಓಡಾಟ ಆರಂಭಗೊಂಡಿದೆ. ಆದರೆ ಶಾಲಾ ಬಸ್ ರಾಂಗ್ ಸೈಡ್‌ನಲ್ಲಿ ಸಾಗಿದ ಕಾರಣ ಭಾರಿ ಅನಾಹುತ ಸಂಭವಿಸಿದೆ. ರಾಂಗ್ ಸೈಡ್ ಮೂಲಕ ಸಾಗಿದ ಬಂದ್‌ಗೆ ಎಸ್‌ಯುವಿ ಕಾರು ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಕಾರಿನ ವೇಗ ಹೆಚ್ಚಿದ್ದ ಕಾರಣ ಅಪಘಾತದಲ್ಲಿ ಕಾರು ಪುಡಿ ಪುಡಿಯಾಗಿದೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದ ಐವರು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಅಪಘಾತ ಇಂದು(ಜು.11) ಬೆಳಗ್ಗೆ ದೆಹಲಿ ಮೀರತ್ ಎಕ್ಸ್‌ಪ್ರೆಸ್‌ವೇನ ಘಾಜಿಯಾಬಾದ್ ಬಳಿ ಸಂಭವಿಸಿದೆ.
ಕಾರಿನಲ್ಲಿ ಒಂದೇ ಕುಟುಂಬದ ಸದಸ್ಯರು ಕಾರ್ಯಕ್ರಮ ನಿಮಿತ್ತ ಎಕ್ಸ್‌ಪ್ರೆಸ್‌ವೇ ಮೂಲಕ ಸಾಗುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಅಪಘಾತದ ಬೆನ್ನಲ್ಲೇ ಸ್ಥಳೀಯರು ಕಾರಿನಲ್ಲಿದ್ದವರನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಒಂದೇ ಕಟುಂಬದ ಐವರು ಸ್ಥಳದಲ್ಲೆ ಮೃತಪಟ್ಟಿದ್ದರೆ, ಇನ್ನಿಬ್ಬರು ಸ್ಥಿತಿ ಚಿಂತಾಜನಕವಾಗಿದೆ. ಅದೃಷ್ಠವಶಾತ್ ಬಸ್‌ನಲ್ಲಿ ಯಾವುದೇ ವಿದ್ಯಾರ್ಥಿಗಳು ಇರಲಿಲ್ಲ.
ಚಾಲಕನ ನಿರ್ಲಕ್ಷ್ಯದಿಂದ ವಿದ್ಯಾರ್ಥಿ ಮೇಲೆ ಹರಿದ ಶಾಲಾ ಬಸ್, ಸ್ಥಳದಲ್ಲೇ ವಿದ್ಯಾರ್ಥಿ ಸಾವು
ಶಾಲಾ ಬಸ್ ಪೆಟ್ರೋಲ್ ಬಂಕ್‌ಗೆ ತರಳಿದ ಬಳಿಕ ಎಕ್ಸ್‌ಪ್ರೆಸ್‌ವೇನಲ್ಲಿ ವಿರುದ್ಧ ದಿಕ್ಕಿನಿಂದ ಸಾಗಿತ್ತು. ರಾಂಗ್ ಸೈಡ್ ಮೂಲಕ ಸಾಗಿದ ಬಸ್ ನೇರವಾಗಿ ಎಸ್‌ಯುವಿ ಕಾರಿಗೆ ಡಕ್ಕಿಯಾಗಿದೆ. ಬಸ್ ಮೀರತ್‌ನತ್ತ ಸಂಚರಿಸುತ್ತಿದ್ದರೆ, ಕಾರು ಗುರುಗ್ರಾಂಗೆ ತೆರಳುತ್ತಿತ್ತು. ಬಸ್ ಚಾಲನಕ ನಿಯಮ ಉಲ್ಲಂಘನೆಯಿಂದ ಅಮಾಯಕ ಜೀವಗಳು ಬಲಿಯಾಗಿದೆ. ಇತ್ತ ಬಸ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
