ಚಾಲಕನ ನಿರ್ಲಕ್ಷ್ಯದಿಂದ ವಿದ್ಯಾರ್ಥಿ ಮೇಲೆ ಹರಿದ ಶಾಲಾ ಬಸ್, ಸ್ಥಳದಲ್ಲೇ ವಿದ್ಯಾರ್ಥಿ ಸಾವು
ತರಗತಿಗಳನ್ನ ಮುಗಿಸಿ ಇನ್ನೇನು ಮಗು ಮನೆಯೊಳಗೆ ಬರಬೇಕಿತ್ತು, ಆದ್ರೆ ಚಾಲಕನ ಬೇಜವಾಬ್ದಾರಿಯಿಂದ ಮಗು ಮನೆಗೆ ಬರುವ ಬದಲು ಬಾರದ ಲೋಕಕ್ಕೆ ಜಾರಿದ ಹೃದಯ ವಿದ್ರಾವಕ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣಕ್ಕೆ ಸಮೀಪದ ಎಂ.ಮೇಡಹಳ್ಳಿಯಲ್ಲಿ ನಡೆದಿದೆ,
ವರದಿ : ಟಿ.ಮಂಜುನಾಥ್, ಹೆಬ್ಬಗೋಡಿ, ಆನೇಕಲ್
ಆನೇಕಲ್ (ಜು.7) : ತರಗತಿಗಳನ್ನ ಮುಗಿಸಿ ಇನ್ನೇನು ಮಗು ಮನೆಯೊಳಗೆ ಬರಬೇಕಿತ್ತು, ಆದ್ರೆ ಚಾಲಕನ ಬೇಜವಾಬ್ದಾರಿಯಿಂದ ಮಗು ಮನೆಗೆ ಬರುವ ಬದಲು ಬಾರದ ಲೋಕಕ್ಕೆ ಜಾರಿದ ಹೃದಯ ವಿದ್ರಾವಕ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣಕ್ಕೆ ಸಮೀಪದ ಎಂ.ಮೇಡಹಳ್ಳಿಯಲ್ಲಿ ನಡೆದಿದೆ,
ದಾವಣಗೆರೆ ಮೂಲದ ದಂಪತಿಗಳ ಮಗು ದಿವ್ಯಾಂಶೂ (8) ಎರಡನೇ ತರಗತಿಯಲ್ಲಿ ಬಿದರಗೆರೆಯಲ್ಲಿರುವ SSV ಆಂಗ್ಲಮಾಧ್ಯಮದಲ್ಲಿ ಓದುತ್ತಿದ್ದ ಮಗು. ತರಗತಿಗಳನ್ನ ಮುಗಿಸಿ ಮನೆಗೆ ಹಿಂದಿರುವಾಗ ಮನೆ ಸಮೀಪವೇ ಬಸ್‌ನಿಂದ ಇಳಿಯುವಾಗ ಬಸ್ ಚಲಿಸಿದ ಪರಿಣಾಮ ಚಕ್ರಕ್ಕೆ ಸಿಲುಕಿದ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಕಂದನ ನಾನೇ ತಳ್ಳಿಬಿಟ್ಟೆ: ತಪ್ಪೊಪ್ಪಿಕೊಂಡ ತಾಯಿ: 3 ವರ್ಷದ ಮಗು ಸಾವು ಕೇಸ್‌ಗೆ ಟ್ವಿಸ್ಟ್
ಮಗು ಚಕ್ರದಡಿ ಸಿಲುಕಿದಾಗ ಅಕ್ಕಪಕ್ಕದವರು ಕಿರುಚಿದರೂ ಚಾಲಕನ ಕಿವಿ ಮೇಲೆ ಬೀಳಲೇ ಇಲ್ಲ , ಬಸ್ ಚಲಿಸಿಕೊಂಡು ಸ್ವಲ್ಪ ದೂರು ರಸ್ತೆಯಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.
ದಿವ್ಯಾಂಶೂ ಎರಡನೇ ತರಗತಿಯಲ್ಲಿ ಓದುತ್ತಿದ್ದ. ಓದಿನಲ್ಲೂ ಚುರುಕುತನದಿಂದ ಎಲ್ಲರ ಗಮನ ಸೆಳೆದಿದ್ದ. ಇಂಥ ಮುದ್ದಾದ ಮಗು ಚಾಲಕನ ನಿರ್ಲಕ್ಷ್ಯಕ್ಕೆ ಬಲಿಯಾಗಿದೆ.
ಆನೇಕಲ್-ಅತ್ತಿಬೆಲೆ ಮುಖ್ಯ ರಸ್ತೆಯ ಎಂ ಮೇಡಹಳ್ಳಿಯ ಸಾಯಿ ಪ್ಯಾರಡೈಸ್ ಬಡಾವಣೆಯಲ್ಲಿ ಶಾಲಾ ಬಸ್ಸಿನಿಂದ ಇಳಿದಾಗ ಚಾಲಕನ ಅಜಾಗರೂಕತೆಗೆ ಮಗು ಬಲಿಯಾಗಿದೆ.
ದಾವಣಗೆರೆ ಮೂಲದ ಚಂದ್ರ ಸಿಂಗ್ ನ ಮೊದಲನೇ ಮಗು ಇನ್ನೂ ಘಟನೆ ಬಗ್ಗೆ ತಂದೆ ಚಂದ್ರಸಿಂಗ್ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದರು.
ವೈದ್ಯರ ನಿರ್ಲಕ್ಷದಿಂದ 4 ತಿಂಗಳ ಮಗು ಸಾವು ಆರೋಪ; ಆಸ್ಪತ್ರೆ ಮುಂದೆ ಸಂಬಂಧಿಕರು ಪ್ರತಿಭಟನೆ
ಈ ಶಾಲೆಯಲ್ಲಿ ಇಂಥ ಘಟನೆ ಇದೇ ಮೊದಲಲ್ಲ ಈ ಹಿಂದೆ ಆಡಳಿತ ಮಂಡಳಿ ನಿರ್ಲಕ್ಷ್ಯದಿಂದಾಗಿ ಎಂಟು ವರ್ಷಗಳ ಹಿಂದೆ ತಮಿಳುನಾಡಿನ ದೇವರ ಬೆಟ್ಟಕ್ಕೆ ಪ್ರವಾಸ ಹೊರಟಿದ್ದಾಗ ಇಬ್ಬರು ಮಕ್ಕಳು ನೀರುಪಾಲಾಗಿ ಸಾವನ್ನಪ್ಪಿದ್ದರು. ಆಗ ಪೋಷಕರು ಶಾಲೆಗೆ ನುಗ್ಗಿ ಶಾಲಾ ಸಲಕರಣೆಗಳು ಕಂಪ್ಯೂಟರ್, ಚೇರ್ ಟೇಬಲ್ ಅಲ್ಮೆರಾ ಟಿವಿಗಳನ್ನು ನೆಲಕ್ಕೆ ಮೇಲಂತಸ್ತಿನಿಂದ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರಂತೆ ಈ ರೀತಿ ಘಟನೆಗಳು ಮರುಕಳಿಸಿದರೂ ಆಡಳಿತ ಮಂಡಳಿ ಎಚ್ಚರವಹಿಸದಿರುವುದರಿಂದ ಪೋಷಕರು ಶಾಲೆಯ ವಿರುದ್ಧ ಮತ್ತಷ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.