ಬೆಂಗಳೂರು: ಭಿಕ್ಷೆ ಬೇಡೋ ನೆಪದಲ್ಲಿ ಲಕ್ಷಾಂತರ ರೂ.ಮೌಲ್ಯದ ಮೊಬೈಲ್ ಕಳ್ಳತನ, ಚಾಲಾಕಿ ಕಳ್ಳಿಯರ ಬಂಧನ
ಖತರ್ನಾಕ್ ಅಂತರಾಜ್ಯ ಲೇಡಿ ಗ್ಯಾಂಗ್ ಬೆಂಗಳೂರಿನ ಮಹದೇವಪುರ ಪೊಲೀಸರ ಬಲೆಗೆ ಬಿದ್ದಿದೆ. ಭಿಕ್ಷೆ ಬೇಡೋ ನೆಪದಲ್ಲಿ ಲಕ್ಷಾಂತರ ಮೌಲ್ಯದ ಮೊಬೈಲ್‌ಗಳನ್ನ ಕಳ್ಳತನ ಮಾಡುತ್ತಿದ್ದರು. ಐಟಿ ಬಿಟಿ ಏರಿಯಾದಲ್ಲಿ ಖತರ್ನಾಕ್ ಲೇಡಿ ಗ್ಯಾಂಗ್ ತಮ್ಮ ಕೈಚಳಕ ಮೆರೆಯುತ್ತಿದ್ದರು.
ಬೆಂಗಳೂರು(ಫೆ.16): ರಾಜಧಾನಿಯ ಐಟಿ ಸೆಕ್ಟರ್ ಭಾಗಗಳ ಬಸ್ಸುಗಳಲ್ಲಿ ಕಳ್ಳತನ ಮಾಡುತ್ತಿದ್ದ ಖದೀಮರನ್ನ ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಧಾ, ನಂದಿನಿ, ಸುಜಾತ, ಶಂಕ್ರಮ್ಮ, ಶಾಂತಮ್ಮ ಬಂಧಿತ ಆರೋಪಿಗಳಾಗಿದ್ದಾರೆ.
ಖತರ್ನಾಕ್ ಅಂತರಾಜ್ಯ ಲೇಡಿ ಗ್ಯಾಂಗ್ ಬೆಂಗಳೂರಿನ ಮಹದೇವಪುರ ಪೊಲೀಸರ ಬಲೆಗೆ ಬಿದ್ದಿದೆ. ಭಿಕ್ಷೆ ಬೇಡೋ ನೆಪದಲ್ಲಿ ಲಕ್ಷಾಂತರ ಮೌಲ್ಯದ ಮೊಬೈಲ್‌ಗಳನ್ನ ಕಳ್ಳತನ ಮಾಡುತ್ತಿದ್ದರು. ಐಟಿ ಬಿಟಿ ಏರಿಯಾದಲ್ಲಿ ಖತರ್ನಾಕ್ ಲೇಡಿ ಗ್ಯಾಂಗ್ ತಮ್ಮ ಕೈಚಳಕ ಮೆರೆಯುತ್ತಿದ್ದರು.
ಬೆಂಗಳೂರು: ಸಾಲ ತೀರಿಸಲು ರೈಲಿನಲ್ಲಿ ಸರಗಳವು, ಇಬ್ಬರ ಬಂಧನ
ಬಸ್‌ನಲ್ಲಿ ವೈಟ್ ಫೀಲ್ಡ್ ಭಾಗದಲ್ಲಿ ಬಂದು ಮೊಬೈಲ್ ಕಳ್ಳತನ ಮಾಡುತ್ತಿದ್ದರು. ಬಸ್ ನಿಲ್ದಾಣದಲ್ಲಿ ಮೊಬೈಲ್ ಬಳಕೆ ಮಾಡೋರ ಮೇಲೆ ಈ ಖದೀಮರ ಗ್ಯಾಂಗ್ ನಿಗಾ ಇಡುತ್ತಿತ್ತು. ಬಸ್ ನಿಲ್ದಾಣದ ಬಳಿ ಅಮಾಯಕರಂತೆ ಹಣ ಕೇಳುತ್ತಾ, ರಶ್ ಬಸ್ ನೋಡಿ ಹತ್ತುತ್ತಿದ್ದಂತೆ ಹಿಂದೆಯೇ ಹೋಗಿ ಕ್ಷಣಾರ್ಧದಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದರು. ಮೊಬೈಲ್ ಎಗರಿಸಿ ಇಬ್ಬರು ಮಹಿಳೆಯರು ಕೈ ಬದಲಿಸಿಕೊಂಡು ಕಳ್ಳತನ ಮಾಡುತ್ತಿದ್ದರು.
ದಿನಕ್ಕೆ ಐದಾರು ಮೊಬೈಲ್ ಎಗರಿಸಿ ಸೀದಾ ಬಸ್‌ನಲ್ಲಿ ವಾಪಸ್ ಬರುತ್ತಿದ್ದರು. ಮೊಬೈಲ್ ಸ್ವಿಚ್ ಅಫ್ ಮಾಡಿ ಮೊಬೈಲ್‌ಗಳನ್ನ ಸಿಲ್ವರ್ ಪೇಪರ್ ನಲ್ಲಿ ಫುಲ್ ಸುತ್ತಿ ಪ್ಯಾಕಿಂಗ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಹೊಸಕೋಟೆಯ ಚೊಕ್ಕಹಳ್ಳಿ ಬಳಿ ಟೆಂಟ್ ಹಾಕೊಂಡು ವಾಸ ಮಾಡುತ್ತಿತ್ತು ಈ ಗ್ಯಾಂಗ್. ಮಹದೇವಪುರ ಪೊಲೀಸರು ಐದು ಮಂದಿ ಖತರ್ನಾಕ್ ಮಹಿಳೆಯರನ್ನ ಬಂಧಿಸಿದ್ದಾರೆ. ಬಂಧಿತರಿಂದ ಮೂವತ್ತು ಲಕ್ಷ ಮೌಲ್ಯದ 120 ಮೊಬೈಲ್‌ಗಳನ್ನ ಜಪ್ತಿ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.