ರಾಯಚೂರು(ಜು.12): ಒಂದೇ ಕುಟುಂಬದ ಐದು ಜನರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಜನ ಆರೋಪಿಗಳನ್ನು ಜಿಲ್ಲೆಯ ಸಿಂಧನೂರು ನಗರ ಪೊಲೀಸರು ಬಂಧಿಸಿದ್ದಾರೆ. ಸಣ್ಣ ಪಕ್ಕೀರಪ್ಪ (45), ಅಂಬಣ್ಣ (58), ಸೋಮಶೇಖರ್ (21), ರೇಖಾ (25), ಗಂಗಮ್ಮ ( 55) ಬಂಧಿತ ಆರೋಪಿಗಳಾಗಿದ್ದಾರೆ. 

ನಗರದ ಸುಕಾಲಪೇಟೆಯಲ್ಲಿ ಶನಿವಾರ ಮಧ್ಯಾಹ್ನ ನಾಲ್ವರ ಕೊಲೆ ನಡೆದಿತ್ತು. ಸುಮಿತ್ರಮ್ಮ ಈರಪ್ಪ(55), ಶ್ರೀದೇವಿ ಯಲ್ಲಪ್ಪ (30), ಹನುಮೇಶ ಈರಪ್ಪ (40), ನಾಗರಾಜ ಈರಪ್ಪ (38) ಇವರನ್ನ ಬರ್ಬರವಾಗಿ ಕೊಲೆ ಮಾಡಲಾಗಿತ್ತು. 
ಘಟನೆಯಲ್ಲಿ ಈರಪ್ಪ ಕೋಣದ ಎಂಬುವರಿಗೆ ಗಾಯಗಳಾಗಿದ್ದು, ಅವರನ್ನು ಬಳ್ಳಾರಿಯ ವಿಮ್ಸ್‌ಗೆ ಕಳುಹಿಸಿಲಾಗಿದೆ. ತಾಯಮ್ಮ ಮತ್ತು ರೇವತಿ ಗಾಯಗೊಂಡಿದ್ದು ಅವರಿಗೆ ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸಿಂಧನೂರು: ಪ್ರೇಮ ವಿವಾಹದ ವೈಷಮ್ಯ, ಒಂದೇ ಕುಟುಂಬದ ನಾಲ್ವರ ಬರ್ಬರ ಅಂತ್ಯ

ವೈಷಮ್ಯ ಕೊಲೆ​ಯಲ್ಲಿ ಅಂತ್ಯ:

9 ತಿಂಗಳ ಹಿಂದೆ ಒಂದೇ ಕೋಮಿನ ಎರಡು ಕುಟುಂಬದ ವಿರೋಧದ ಮಧ್ಯೆ ನಡೆದ ಪ್ರೇಮ ವಿವಾಹದ ವಿವಾದ ಕೊಲೆಯಲ್ಲಿ ಅಂತ್ಯಗೊಂಡಿದೆ. ನಗರದ ಸುಕಾಲಪೇಟೆಯ ಈರಪ್ಪ ಕೋಣದ್‌ ಅವರ ಪುತ್ರ ಮೌನೇಶ ಅದೇ ಓಣಿಯ ಸಣ್ಣ ಫಕೀರಪ್ಪನ ಪುತ್ರಿ ಮಂಜು​ಳಾರನ್ನು ಕಳೆದ 9 ತಿಂಗಳ ಹಿಂದೆ ಎರಡು ಮನೆಗಳವರ ತೀವ್ರ ವಿರೋಧದ ಮಧ್ಯೆ ವಿವಾಹವಾಗಿದ್ದರು. ವಿವಾಹದ ನಂತರ ಎರಡು ಕುಟುಂಬಗಳ ಮಧ್ಯೆ ಪ್ರತಿನಿತ್ಯ ತೀವ್ರ ವಾಗ್ವಾದ, ಜಗಳ ನಡೆಯುತ್ತಿದ್ದವು.
ಶನಿವಾರ ಇದ್ದಕ್ಕಿಂದ್ದಂತೆ ದೊಡ್ಡ ಫಕೀರಪ್ಪ ಕೋಣದ್‌ ಸೇರಿದಂತೆ ಅವರ ಸಹೋದರರಾದ ಸಣ್ಣ ಫಕೀರಪ್ಪ, ಅಂಬಣ್ಣ, ಸೋಮಶೇಖರ ಮತ್ತಿತರರು ಕೊಡಲಿ, ಮಚ್ಚು, ಬಡಿಗೆ ಸೇರಿದಂತೆ ಮಾರಕಾಸ್ತ್ರಗಳಿಂದ ಈರಪ್ಪ ಕೋಣದ್‌ ಮನೆಗೆ ನುಗ್ಗಿ ಎಲ್ಲ​ರನ್ನೂ ಅಟ್ಟಾಡಿಸಿ ನಾಲ್ವ​ರನ್ನು ಕೊಲೆ ಮಾಡ​ಲಾ​ಗಿತ್ತು. ಮನೆಯ ಮುಂದೆ ಮೂವರನ್ನು ಹಾಗೂ ನಾಲ್ಕು ಮನೆಗಳ ಅಂತ​ರ​ದಲ್ಲಿ ಓರ್ವನನ್ನು ಕೊಲೆಗೈದು ಆರೋಪಿಗಳು ಪರಾರಿಯಾಗಿದ್ದಾರೆ.